Home ಜಿಲ್ಲೆ ಯುವ ಶಕ್ತಿಯೇ ರಾಷ್ಟ್ರ ನಿರ್ಮಾಣದ ಅಸ್ತಿವಾರ: ಶರಣಪ್ಪ ಮಾನೇಗಾರ

ಯುವ ಶಕ್ತಿಯೇ ರಾಷ್ಟ್ರ ನಿರ್ಮಾಣದ ಅಸ್ತಿವಾರ: ಶರಣಪ್ಪ ಮಾನೇಗಾರ

ಯಾದಗಿರಿ:ಮೇ.೨: ರಾಜ್ಯ ಹಾಗೂ ರಾಷ್ಟ್ರದ ಪ್ರಗತಿಗೆ ಯುವ ಶಕ್ತಿಯ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯರು ಹಾಗೂ ಕಾಂಗ್ರೆಸ್ ಮುಖಂಡ ಶರಣಪ್ಪ ಮಾನೇಗಾರ ಅಭಿಪ್ರಾಯಪಟ್ಟರು.
ತಾಲೂಕಿನ ಕಿಲ್ಲನಕೇರಾ ಗ್ರಾಮದಲ್ಲಿ ಆಯೋಜಿಸಲಾದ “ಕಿಲ್ಲನಕೇರಾ ಪ್ರಿಮಿಯರ್ ಲೀಗ್ ಸೀಸನ್-೪” ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದ ಅವರು, “ಯುವಕರು ದೇಶದ ಅಮೂಲ್ಯ ಸಂಪತ್ತು. ಅವರಲ್ಲಿರುವ ಪ್ರತಿಭೆಯನ್ನು ಉತ್ತೇಜಿಸಿ, ಬೆಂಬಲಿಸುವುದು ಸಮಾಜದ ಪ್ರತಿಯೊಬ್ಬರ ಜವಾಬ್ದಾರಿ,” ಎಂದು ಹೇಳಿದರು. ಗುರುಮಠಕಲ್ ಮತಕ್ಷೇತ್ರದ ಯುವಕರು ಕೈಗೊಳ್ಳುವ ಸಮಾಜಮುಖಿ ಕಾರ್ಯಗಳಿಗೆ ಸದಾ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಗ್ರಾಮದ ಯುವಕರು ಕ್ರೀಡೆಗೆ ಹೆಚ್ಚಿನ ಆಸಕ್ತಿ ತೋರಿಸುತ್ತಿರುವುದು ಸಂತಸದ ವಿಚಾರ. ಕ್ರೀಡೆ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ವೃದ್ಧಿಸುವುದಲ್ಲದೆ, ಪರಸ್ಪರ ಸ್ನೇಹ, ವಿಶ್ವಾಸ ಮತ್ತು ಸೌಹಾರ್ದತೆಯನ್ನು ಬೆಳೆಸುತ್ತದೆ. ಕ್ರೀಡಾಪಟುಗಳು ನಿಯಮಾನುಸಾರವಾಗಿ ಶಿಸ್ತಿನಿಂದ ಆಟವಾಡಬೇಕು ಎಂದು ಸಲಹೆ ನೀಡಿದರು.
ಇದೇ ವೇಳೆ, ಮೇ ೧ರ ಅಂತರರಾಷ್ಟಿçÃಯ ಕಾರ್ಮಿಕ ದಿನಾಚರಣೆ ಹಾಗೂ ಬುದ್ಧ ಪೂರ್ಣಿಮಾ ಎಂಬ ದ್ವಿಗುಣ ಪವಿತ್ರ ಸಂದರ್ಭದಲ್ಲಿ ಪಂದ್ಯಾವಳಿಯನ್ನು ಉದ್ಘಾಟಿಸುವ ಅವಕಾಶ ದೊರೆತಿರುವುದು ಗೌರವದ ಸಂಗತಿ ಎಂದು ಅವರು ಹೇಳಿದರು.

Áರ-ತುರಾಯಿಗೆ ಗುಡ್ ಬೈ..! ಬಸವಣ್ಣನವರ ಪುಸ್ತಕದ ಮೂಲಕ ಗೌರವಕಿಲ್ಲನಕೇರಾ ಗ್ರಾಮದಲ್ಲಿ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಗಣ್ಯರಿಗೆ ಸಾಂಪ್ರದಾಯಿಕ ಹಾರ-ತುರಾಯಿ ಬದಲು ಬಸವಣ್ಣ ಅವರ ಚಿಂತನೆಗಳನ್ನು ಒಳಗೊಂಡ ಪುಸ್ತಕ ಹಾಗೂ ಗುಲಾಬಿ ಹೂ ನೀಡುವ ಮೂಲಕ ವಿಶಿಷ್ಟವಾಗಿ ಸನ್ಮಾನಿಸಲಾಯಿತು.
ಇದಲ್ಲದೆ, ಹಾರ-ತುರಾಯಿಗೆ ಖರ್ಚಾಗುವ ಹಣವನ್ನು ಗ್ರಾಮದ ಅಗತ್ಯವಿರುವ ವ್ಯಕ್ತಿ ಖಾಸಿಂ ಅವರಿಗೆ ಆರ್ಥಿಕ ನೆರವಿನ ರೂಪದಲ್ಲಿ ನೀಡುವ ಮೂಲಕ ಮಾನವೀಯತೆ ಮೆರೆದರು. ಈ ಹೊಸ ಪ್ರಯೋಗವನ್ನು ಶರಣಪ್ಪ ಮಾನೇಗಾರ ಶ್ಲಾಘಿಸಿ, ಸಂಘಟಕರ ಕಾರ್ಯವನ್ನು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಕೆಪಿಸಿಸಿ ಸದಸ್ಯ ಚಂದ್ರಶೇಖರ ವಾರದ, ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಶ್ವನಾಥ ನೀಲಹಳ್ಳಿ, ಅನಿಲಕುಮಾರ ಹೆಡಗಿಮದ್ರಾ, ಬಂದಪ್ಪಗೌಡ ಲಿಂಗೇರಿ ಸೇರಿದಂತೆ ಹಲವು ಗಣ್ಯರು, ಸ್ಥಳೀಯ ಮುಖಂಡರು ಹಾಗೂ ಯುವಕರು ಉಪಸ್ಥಿತರಿದ್ದರು.