Home ಜಿಲ್ಲೆ ತುಮಕೂರು ಉತ್ತಮ ಆರೋಗ್ಯಕ್ಕೆ ಯೋಗ ವರದಾನ

ಉತ್ತಮ ಆರೋಗ್ಯಕ್ಕೆ ಯೋಗ ವರದಾನ

ತುಮಕೂರು, ಆ. ೧೫- ಪತಂಜಲಿ ಯೋಗ ಶಿಕ್ಷಣ ಸಮಿತಿ ಯೋಗದ ಜತೆಗೆ ಸಮಾಜಕ್ಕೆ ಸಂಸ್ಕಾರವನ್ನು ಸಹ ಕಲಿಸುತ್ತಿದೆ ಎಂದು ವೈಷ್ಣವ ಸಮಾಜದ ಅಧ್ಯಕ್ಷ ಟಿ.ಎಸ್.ಮೋಹನ್‌ಕುಮಾರ್ ಹೇಳಿದರು.
ಇಲ್ಲಿನ ಮಾರುತಿ ನಗರದಲ್ಲಿರುವ ಶ್ರೀ ವೈಷ್ಣವ ಸಮಾಜದ ಸಭಾಭವನದಲ್ಲಿ ಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ಏರ್ಪಡಿಸಿದ್ದ ಸಾಮೂಹಿಕ ಭಜನೆ, ಮಾತೃ ಭೋಜನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.


ಯೋಗ ಮಾಡುವುದರಿಂದ ನಕಾರಾತ್ಮಕ ಶಕ್ತಿ ದೂರವಾಗಿ ಸಕಾರಾತ್ಮಕ ಶಕ್ತಿ ಮತ್ತು ಸ್ಫೂರ್ತಿ ಬರುತ್ತದೆ. ಈ ನಿಟ್ಟಿನಲ್ಲಿ ಕಳೆದ ೪೬ ವರ್ಷಗಳಿಂದ ಪತಂಜಲಿ ಯೋಗ ಶಿಕ್ಷಣ ಸಮಿತಿ ತುಮಕೂರು ನಗರದಲ್ಲಿ ಲಕ್ಷಾಂತರ ಜನರಿಗೆ ಉಚಿತ ಯೋಗ ಶಿಕ್ಷಣವನ್ನು ನೀಡುತ್ತಾ ಬಂದಿದೆ. ಮಹಿಳೆಯರು, ಪುರುಷರು, ಯುವಕ-ಯುವತಿಯರು ಉತ್ತಮ ಯೋಗ ಪಟುಗಳಾಗಿದ್ದಾರೆ. ಪ್ರಸ್ತುತ ದುಡ್ಡಿದ್ದವನು ಶ್ರೀಮಂತನಲ್ಲ, ಉತ್ತಮ ಆರೋಗ್ಯವಿದ್ದವನು ಶ್ರೀಮಂತ ಎಂದರು.


ಆರೋಗ್ಯವೇ ಭಾಗ್ಯವೆಂಬಂತೆ ಉತ್ತಮ ಆರೋಗ್ಯಕ್ಕೆ ಯೋಗ ಒಂದು ವರದಾನವಾಗಿದೆ. ಮಾತೃ ಭೋಜನ ಕಾರ್ಯಕ್ರಮದಿಂದ ಇಂದಿನ ಮಕ್ಕಳಿಗೆ ತಾಯಿಯ ಪ್ರೀತಿ, ಆರೈಕೆ, ನಿಸ್ವಾರ್ಥತೆ ತಿಳಿಯುತ್ತಿದೆ. ತಾಯಿಯ ಅಂತಃಕರಣ ಮಕ್ಕಳಿಗೆ ತಿಳಿದಾಗ ಮಾತ್ರ ಉತ್ತಮ ಸಮಾಜ ರೂಪುಗೊಳ್ಳುತ್ತದೆ. ಈ ನಿಟ್ಟಿನಲ್ಲಿ ಪತಂಜಲಿ ಯೋಗ ಶಿಕ್ಷಣ ಸಮಿತಿಯವರು ಯೋಗದ ಜ ತೆ ಸಮಾಜಕ್ಕೆ ಉತ್ತಮ ಸಂಸ್ಕಾರವನ್ನು ಸಹ ಕಲಿಸುತ್ತಿದೆ ಎಂದು ಹೇಳಿದರು.


ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಎನ್.ಎಸ್. ಮಹೇಶ್ ಮಾತನಾಡಿ, ಭಜನೆ ಮಾಡುವುದರಿಂದ ನಮ್ಮ ಶರೀರದಲ್ಲಿ ಸೂಕ್ಷ್ಮ ಬದಲಾವಣೆಗಳನ್ನು ಕಾಣಬಹುದು, ಭಜನೆಗಳಿಂದ ಆನಂದ, ಸಂತೃಪ್ತಿ ಸಿಗುತ್ತದೆ.

ಶಾಂತಿ ದೊರೆಯುತ್ತದೆ. ಯೋಗ ಕಲಿತವರು ಬೇರೆಯವರಿಗೆ ಹೇಳಿ ಕೊಡಿ ಸಮಾಜಕ್ಕೆ ನಮ್ಮ ಋಣ ತೀರಿಸಿದಾಗ ಮಾತ್ರ ಮಾನವ ಜನ್ಮ ಶ್ರೇಷ್ಠವಾಗುತ್ತದೆ. ಕಲಿತ ಋಣವನ್ನು ಕಲಿಸಿ ಕಳೆಯಬೇಕು. ಮಾತೃ ಭೋಜನದಿಂದ ತಾಯಿ ಮಕ್ಕಳಿಗೆ ಸಂಸ್ಕಾರವನ್ನು ಕಲಿಸುತ್ತಾಳೆ, ಸಂಸ್ಕಾರವಂತ ಮಕ್ಕಳು ಈ ದೇಶದ ನಿಜವಾದ ಆಸ್ತಿ, ಪ್ರತಿ ದಿನ ಮುಂಜಾನೆ ಎಲ್ಲರೂ ಯೋಗ ಮಾಡಿ, ಯೋಗದಿಂದ ಉತ್ತಮ ಆರೋಗ್ಯ ದೊರೆಯುತ್ತದೆ. ಆರೋಗ್ಯವಂತ ಜನರು ಈ ಸಮಾಜದ ನಿಜವಾದ ಆಸ್ತಿ ಎಂದರು.


ನಾಗೇಂದ್ರಿ ಸ್ವಾಗತಿಸಿದರು. ಉಮಾ ಕಾರ್ಯಕ್ರಮ ನಿರೂಪಿಸಿದರು. ಜಯಂತಿ ವಂದಿಸಿದರು.