
ತುಮಕೂರು, ಆ. ೧೫- ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ನಗರದಲ್ಲಿ ಹಿರಿಯ ನಾಗರಿಕರ ಸಹಾಯವಾಣಿ ಅಂಗವಾಗಿ ಹಿರಿಯ ನಾಗರೀಕರ ಯೋಗಕ್ಷೇಮ ಸಲಹೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಹಿರಿಯ ನಾಗರೀಕರ ಆರೋಗ್ಯ, ಆರೈಕೆ ಕುರಿತು ಹಿರಿಯ ವೈದ್ಯ ಡಾ. ಲೋಕೇಶ್ ತಿಳಿಸಿದರು.
ಮತ್ತೊಬ್ಬ ವೈದ್ಯರಾದ ಡಾ.ಅನುರಾಧ, ಹಿರಿಯ ನಾಗರಿಕರಿಗೆ ವ್ಯಾಯಾಮ ಎಷ್ಟು ಮುಖ್ಯ, ವ್ಯಾಯಾಮದ ಸರಳ ಆಸನಗಳ ಬಗ್ಗೆ ತಿಳಿಸಿದರು.
ಡಾ. ಅಡ್ವಾನ್ಸ್‌ರಾಜು ಅವರು, ಹಿರಿಯ ನಾಗರಿಕರು ಈ ವಯಸ್ಸಿನಲ್ಲಿ ಯಾವ ರೀತಿಯ ಆಹಾರ ತೆಗೆದುಕೊಳ್ಳಬೇಕು, ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕು, ಯಾವ ಯಾವ ತರಕಾರಿ ತಿಂದರೆ ಎಷ್ಟು ಪೌಷ್ಟಿಕಾಂಶ ಸಿಗುತ್ತದೆ ಎಂಬ ವಿವರ ನೀಡಿ, ಎಲ್ಲಾ ತರಕಾರಿ ಮತ್ತೆ ಪ್ರೊಟೀನ್ ಅಂಶವಿರುವ ಕಾಳು ತಿನ್ನಬೇಕು ಎಂದು ತಿಳಿಸಿದರು.
ಇನ್ನರ್ ವ್ಹೀಲ್ ಕ್ಲಬ್ ಆಫ್ ತುಮಕೂರು ಅಧ್ಯಕ್ಷೆ ಲೀಲಾವತಿ ಅಶೋಕ್, ಕಾರ್ಯದರ್ಶಿ ಪ್ರತಿಭಾ, ರೋಟರಿ ಅಧ್ಯಕ್ಷ ಕೃಷ್ಣಕುಮಾರ್, ಕಾರ್ಯದರ್ಶಿ ದೊಡ್ಡಯ್ಯ, ಶ್ರೀರಾಮ ಫೌಂಡೇಶನ್ ಸಂಸ್ಥಾಪಕ ತಿಮ್ಮಾರೆಡ್ಡಿ, ಬೆಳ್ಳಿ ಬ್ಲಡ್ ಬ್ಯಾಂಕ್‌ನ ಬೆಳ್ಳಿ ಲೊಕೇಶ್, ಇನ್ನರ್ ವ್ಹೀಲ್‌ಕ್ಲಬ್ ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಭಾಗವಹಿಸಿದ್ದರು.


































