Home ಜಿಲ್ಲೆ ವಿಶ್ವ ಪತ್ರಿಕಾ ವಿತರಕರ ದಿನಾಚರಣೆ

ವಿಶ್ವ ಪತ್ರಿಕಾ ವಿತರಕರ ದಿನಾಚರಣೆ

ಲಕ್ಷೆ÷್ಮÃಶ್ವರ,ಸೆ೬: ಪಟ್ಟಣದಲ್ಲಿ ವಿಶ್ವ ಪತ್ರಿಕಾ ವಿತರಕರ ದಿನಾಚರಣೆಯನ್ನು ಆಚರಿಸಲಾಯಿತು ಈ ಸಂದರ್ಭದಲ್ಲಿ ಪಿಎಸ್‌ಐ ಆನಂದ ಕ್ಯಾರೆಕಟ್ಟಿ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿಗಳನ್ನು ವಿತರಿಸಿದರು.
ಬಳಿಕ ಮಾತನಾಡಿ, ಚಳಿ ಮಳೆ ಎನ್ನದೆ ಬೆಳಿಗ್ಗೆ ೬:೦೦ಗೆ ಎಲ್ಲರ ಮನೆ ಬಾಗಿಲಿಗೆ ಪತ್ರಿಕೆಗಳನ್ನು ತಲುಪಿಸುವ ಇವರ ಕಾರ್ಯ ಶ್ಲಾಘನೀಯವಾಗಿದೆ ಎಂದು ಹೇಳಿದರು.


ಪಂಚ ಗ್ಯಾರಂಟಿ ಅಧ್ಯಕ್ಷ ನಾಗರಾಜ್ ಮಡಿವಾಳರ ರಾಮಣ್ಣ ಲಮಾಣಿ ನೀಲಪ್ಪ ಪೂಜಾರ್ ಅವರುಗಳು ಮಾತನಾಡಿ ವರದಿಗಾರರು ಸುದ್ದಿಗಳನ್ನು ಕಳಿಸಿ ಅವು ಅಚ್ಚು ಆಗಿ ಪತ್ರಿಕೆ ಹೊರ ಬಿದ್ದ ನಂತರ ಅವುಗಳನ್ನು ಓದುಗರಿಗೆ ತಲುಪಿಸುವ ಅತ್ಯಂತ ಜವಾಬ್ದಾರಿ ಕಾರ್ಯವನ್ನು ವಿತರಕರು ಮಾಡುತ್ತಾರೆ. ಇಂತಹ ಸಂದರ್ಭದಲ್ಲಿ ಸಮಾಜಮುಖಿಯಾದ ಕಾರ್ಯಗಳನ್ನು ಮಾಡುವ ಅವಶ್ಯಕತೆ ಇದೆ ಎಂದು ಹೇಳಿದರು.


ಈ ಸಂದರ್ಭದಲ್ಲಿ ಪತ್ರಕರ್ತರ ಸಂಘದ ಅಧ್ಯಕ್ಷ ಅಶೋಕ್ ಸೊರಟೂರ ನಾಗರಾಜ ಹಣಗಿ ದಿಗಂಬರ ಪೂಜಾರ್ ಶಿವಲಿಂಗಯ್ಯ ಹೊತ್ತಿಗಿ ಮಠ ಮಹಾಲಿಂಗ ಪೂಜಾರ ಬೀರಪ್ಪ ಪೂಜಾರಸೇರಿದಂತೆ ಅನೇಕರು ಇದ್ದರು.