Home ಜಿಲ್ಲೆ ಗುರುವಿನ ಜ್ಞಾನದಿಂದ ಬೆಳಗಿದ ಮನಸ್ಸು ಸಮಾಜದ ಶಕ್ತಿ

ಗುರುವಿನ ಜ್ಞಾನದಿಂದ ಬೆಳಗಿದ ಮನಸ್ಸು ಸಮಾಜದ ಶಕ್ತಿ


ಚನ್ನಮ್ಮನ ಕಿತ್ತೂರು,ಸೆ.೬: ನಮ್ಮ ಜೀವನಕ್ಕೆ ಜ್ಞಾನ, ಮಾರ್ಗದರ್ಶನ ಮತ್ತು ಉತ್ತಮ ಮೌಲ್ಯಗಳನ್ನು ನೀಡುವವರು ಶಿಕ್ಷಕರು. ಗುರುವಿನ ಜ್ಞಾನದಿಂದ ಬೆಳಗಿದ ಮನಸ್ಸು ಸಮಾಜದ ಶಕ್ತಿಯಾಗುತ್ತದೆ. ಗುರು ಎಂದರೆ ಒಬ್ಬ ವ್ಯಕ್ತಿಯಲ್ಲ ಒಂದು ಶಕ್ತಿ ಎಂದು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.


ಜಿಪಂ, ಶಾಲಾ ಶಿಕ್ಷಣ ಇಲಾಖೆ ಬೆಳಗಾವಿ, ತಾಪಂ ಕ್ಷೇತ್ರ ಶಿಕ್ಷಣಾಧಿಕಾರಿಗಳ, ಕ್ಷೇತ್ರ ಸಂಪನ್ಮೂಲ ಕೇಂದ್ರ, ಇವರುಗಳ ಸಂಯುಕ್ತ ಆಶ್ರಯದಲ್ಲಿ ಸ್ಥಳೀಯ ಗುರುಭವನದಲ್ಲಿ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಡಾ. ಸರ್ವಪಲ್ಲಿ ರಾಧಾಕೃಷ್ಣಾ ಹಾಗೂ ಸಾವಿತ್ರಿಬಾಯಿ ಪುಲೆ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ದೀಪ ಬೆಳಗಿಸಿ ಅವರು ಮಾತನಾಡಿದರು.


ಪ್ರಾಥಮಿಕ ಹಂತದಲ್ಲಿ ಒಳ್ಳೆಯ ತಳಹದಿ ಹಾಕಿದರೆ ಮುಂದೆ ಅದು ಉನ್ನತ ಅಗುವುದು ಖಚಿತ ಅದಕ್ಕೆ ಶಿಕ್ಷಕರಾದವರು ಕೇವಲ ವೃತ್ತಿ ಮಾಡದೇ ತಾವು ಕಲಿಸಿರುವುದು ತಮಗೆ ತೃಪ್ತಿಕರವಾಗಿರುವಂತಿರಬೇಕು. ಸರ್ಕಾರ ಸಾಕಷ್ಟು ಸಹಾಯ ನೀಡುತ್ತಿದ್ದು ಅದರ ಸದುಪಯೋಗವಾಗಬೇಕು. ಕ್ಷೇತ್ರದ ಅಭಿವೃದ್ದಿಗಿಂತ ಶಾಲೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಎಲ್ಲರ ಮಾರ್ಗದರ್ಶನ ಮತ್ತು ಶಿಕ್ಷಕರ ಪರಿಶ್ರಮ ಸಹಕಾರದಿಂದ ಇಂದು ಜಿಲ್ಲೆಗೆ ಹಾಗೂ ರಾಜ್ಯಕ್ಕೆ ಪ್ರಥಮ ಸ್ಥಾನಗಳಿಸಲು ಸಾಧ್ಯವಾಯಿತು. ಶಿಕ್ಷಕರ ಸೇವೆಗೆ ನನ್ನ ಗೌರವ ಮತ್ತು ಅಭಿನಂದನೆ ಶಿಕ್ಷಣ ಕ್ಷೇತ್ರದ ಅಭಿವೃದ್ದಿಗೆ ಸದಾ ನನ್ನ ಸಹಕಾರ ಬೆಂಬಲ ಇರುತ್ತದೆ ಎಂದರು.
ಉನ್ಯಾಸಕರಾಗಿ ಮಾತನಾಡಿದ ಬಸವನ ಬಾಗೇವಾಡಿ ಪ್ರೌಢಶಾಲೆ ಶಿಕ್ಷಕ ಅಶೋಕ ಹಂಜಿ ಶಿಕ್ಷಕರು ಕೇವಲ ಪಾಠ ಬೋಧಿಸುವವರಲ್ಲ ಅವರು ಸಮಾಜದ ಭವಿಷ್ಯ ರೂಪಿಸುವ ಶಿಲ್ಪಿಗಳು. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಅವರ ಬದುಕಿನಲ್ಲಿ ಹೊಸ ಭರವಸೆ ಮಹತ್ವದ ಜವಾಬ್ದಾರಿಯಾಗಿದೆ. ಅದರಲ್ಲಿ ಆತ್ಮವಿಶ್ವಾಸ, ಶಿಸ್ತು ಮಾನವೀಯತೆ ಮತ್ತು ಜ್ಞಾನದ ಬೆಳಕು ಪಸರಿಸಲು ಅವರ ಕೊಡುಗೆ ಮಹತ್ವದ್ದು. ಶಾಲೆಗಳು ಮಕ್ಕಳಿಗೆ ಕೇವಲ ಅಂಕ ಗಳಿಸುವ ಸ್ಥಳವಾಗದೇ ಉತ್ತಮ ನಾಗರಿಕರನ್ನು ರೂಪಿಸುವ ಕೇಂದ್ರವಾಗಬೇಕು. ಅಂದಿನ ಕಾಲದಲ್ಲಿ ಡಾ. ರಾಧಾಕೃಷ್ಣ ಅವರು ೧೬ ಡಾಕ್ಷರೇಟ್ ಪದವಿ ಪಡೆದಿದ್ದರು.

ಅಭಿಮಾನದ ಬದುಕು ಕಲಿಸಬೇಕು. ನಾವು ಬಿತ್ತಿದ್ದನ್ನೇ ಬೆಳೆ ತೆಗೆಕೊಳ್ಳಬೇಕಾಗುತ್ತದೆ. ಆದ್ದರಿಂದ ಒಳ್ಳೆಯದ್ದನ್ನೇ ಬಿತ್ತಿ ಮಕ್ಕಳನ್ನು ಶಿಕ್ಷಣವಂತರನ್ನಾಗಿ ಮಾಡಬೇಕು ನಾವು ಎಷ್ಟು ದಿನ ಅಧಿಕಾರದಲ್ಲಿ ಇರುತ್ತೇವೆಯೊ ಗೊತ್ತಿಲ.್ಲನಮ್ಮ ಅಧಿಕಾರವಿದ್ದಾಗಲೇ ನಮ್ಮ ಛಾಪು ಮೂಡಿಸಿ ಮುಂದಿನ ಯುವಪಿಳಿಗೆಗೆ ಉಪಯೋಗವಾಗಬೇಕು ಎಂದು ಜನಪದ ಹಾಡಿದರು.


ರಾಜಗುರು ಸಂಸ್ಥಾನ ಕಲ್ಮಠದ ಶ್ರೀ ಮಡಿವಾಳ ರಾಜಯೋಗಿಂದ್ರ ಸ್ವಾಮಿಜೀ ಆರ್ಶೀವಚನ ನೀಡಿ ಅಕ್ಷರ ಕಲಿಸುವುದಕ್ಕಿಂತ ಮಿಗಿಲಾಗಿ ವಿಚಾರಿಸುವ ಶಕ್ತಿ ಮೌಲ್ಯಗಳ ಅರಿವು ಸತ್ಯದ ಹಾದಿಯಲ್ಲಿ ನಡೆಯುವ ಧೈರ್ಯ ಸಮಾಜದ ಕಳಕಳಿ ಜವಾಬ್ದಾರಿ ಬೆಳೆಸುವವರು ಶಿಕ್ಷಕರು ಎಂದರು.


ಸಭೆಯಲ್ಲಿ ತಹಶೀಲ್ದಾರ ಕಲ್ಲನಗೌಡ ಪಾಟೀಲ, ಬಿಇಓ ಚನ್ನಬಸಪ್ಪ ತುಬಾಕಿ ಸ್ವಾಗತಿಸಿ ಪ್ರಾಸ್ತಾವಿಕನುಡಿಯನ್ನಾಡಿದರು. ತಾಪಂಇಓ ಮಹೇಶ ಹೂಲಿ, ಪಪಂ ಅಧ್ಯಕ್ಷ ಜೈಸಿದ್ರಾಮ್ ಮಾರಿಹಾಳ, ಎಂ ಎಫ್ ಜಕಾತಿ, ಅಶಪಾಕ ಹವಾಲ್ದಾರ, ಕುಬೇರ ಜಾಯಕ್ಕನವರ, ಸಿದ್ದಪ್ಪ ಹುಲಮನಿ, ಶೇಖರ ಹಲಸಗಿ, ಮುದಕಪ್ಪ ಮರಡಿ ಸಂಗನಗೌಡ ಪಾಟೀಲ, ನಿಚ್ಚಣಕಿ ಪಂಚಾಕ್ಷರಿ ಸ್ವಾಮಿಜೀ ಸಾನಿಧ್ಯವಹಿಸಿ ಮಾತನಾಡಿದರು, ಬಿಇಓ ಕಛೇರಿ ಸಿಬ್ಬಂದಿ, ವಿದ್ಯಾರ್ಥಿಗಳಿಂದ ನಾಡಗೀತೆ ಏರ್ಪಟ್ಟಿತ್ತು, ನಿವೃತ್ತಿ ಹಾಗೂ ಆದರ್ಶ ಶಿಕ್ಷಕರನ್ನು ಸನ್ಮಾನಿಸಲಾಯಿತು. ಸಿಪಿಐ ಶಿವಾನಂದ ಗುಡಗನಟ್ಟಿ ಅವರಿಂದ ಭಕ್ತಿಗೀತಿ ನೇರವೇರಿತು. ಬಿಆರ್‌ಸಿ-ಎಆರ್‌ಸಿ, ಪೂಜಾರ, ಕೊಟಬಾಗಿ, ಹೊಸೂರ ನಿರೂಪಿಸಿದರು.