
ಕಲಬುರಗಿ: ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ 50:50 ನಿವೇಶನ ಹಂಚಿಕೆಯಲ್ಲಿ ಆದ ಅವ್ಯವಹಾರದ ಕುರಿತು ತನಿಖೆ ನಡೆಸುವಂತೆ ಆಗ್ರಹಿಸಿ ಆಲ್ ಇಂಡಿಯಾ ಮಜ್ಲಿಸ್-ಇ-ಇತ್ತೇಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಜಿಲ್ಲಾ ಘಟಕದ ನೇತೃತ್ವದಲ್ಲಿ ಕುಡಾ ಮುಂದೆ ಇಂದು ಪ್ರತಿಭಟನೆ ನಡೆಸಲಾಯಿತು. ಪಕ್ಷದ ಜಿಲ್ಲಾ ಅಧ್ಯಕ್ಷ ಮೊಹಮ್ಮದ್ ಸಿರಾಜುದ್ದೀನ್ ಶೋಹೆರವಾಡಿ, ಆಕಾಶ್ ರಿಲ್ಡಾನ್, ಡಾ.ಮುಕ್ತಾರ್ ಆಲಂ, ಸೈಯ್ಯದ್ ಅಹೆಮದ್, ಶೇಖ್ ಸೈಫಾನ್, ಅಬ್ದುಲ್ ಕಲೀಮ್, ಮೋಶಿನ್ ಖಾನ್, ಶೇಖ್ ತಾಜುದ್ದೀನ್, ಬಶೀರ್ ಅಹೆಮದ್, ಶಫಿ ಖಾನ್, ಆಸ್ಮಾ ಪರ್ವಿನ್ ಬೇಗಂ ಸೇರಿದಂತೆ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.






























