Home ಜಿಲ್ಲೆ ಪ್ರಜಾ ಸೇವೆ ಕಾರ್ಯಕ್ರಮಕ್ಕೆ ಚಾಲನೆ

ಪ್ರಜಾ ಸೇವೆ ಕಾರ್ಯಕ್ರಮಕ್ಕೆ ಚಾಲನೆ


ಚನ್ನಮ್ಮನ ಕಿತ್ತೂರು,ಸೆ.೬: ಜನರ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸಿ ತ್ವರಿತವಾಗಿ ಪರಿಹಾರ ಒದಗಿಸುವ ಉದ್ದೇಶದ ಪ್ರಜಾಸೇವೆ' ಜನಪರ ಕಾರ್ಯಕ್ರಮಕ್ಕೊ ಶಾಸಕ ಬಾಬಾಸಾಹೇಬ ಪಾಟೀಲ ಚಾಲನೆ ನೀಡಿದರು. ನಂತರ ಅವರು ಮಾತನಾಡಿ ಸಮಸ್ಯೆ ನಿಮ್ಮದು ಪರಿಹಾರ ನಮ್ಮದು’ ಮನೆ ಬಾಗಿಲಿಗೆ ಬಂದಿದೆ ಸರ್ಕಾರ ಸೇವೆಗೆ ಇರಲಿ ನಿಮ್ಮ ಸಹಕಾರ. ಎಂಬ ಆಶಯದೊಂದಿಗೆ ಸಿಎಂ ಡಿಕೆಶಿವಕುಮಾರ ನೇತೃತ್ವದ ಕಾಂಗ್ರೇಸ್ ಸರ್ಕಾರ ಕಾರ್ಯಕ್ರಮ ನಡೆಯುತ್ತಿದ್ದು ಸಾರ್ವಜನಿಕರು ತಮ್ಮ ಸಮಸ್ಯೆ ಹಾಗೂ ಸರ್ಕಾರಿ ಸೌಲಭ್ಯಗಳಿಗೆ ಸಂಬAಧಿಸಿದ ಅಹವಾಲುಗಳನ್ನು ನೇರವಾಗಿ ಸಲ್ಲಿಸಿ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಿ ಎಂದು ಕರೆನೀಡಿದರು. ಕಿತ್ತೂರು ವ್ಯಾಪ್ತಿಯ ೬೪ ಕೆರೆ ತುಂಬುವ ಸರ್ಕಾರದ ಯೋಜನೆ ಈಗಾಗಲೇ ಇದರಲ್ಲಿ ೧೬ ಕೆರೆ ತುಂಬಿಸಲಾಗಿದೆ. ಇನ್ನೂಳಿದ ಕಡೆ ಪೈಪಲೈನ್ ಅಲ್ಪಸ್ವಲ್ಪ ಕಾಮಗಾರಿ ಉಳಿದಿದ್ದು ತ್ವರಿತಗತಿಯಲ್ಲಿ ಮುಗಿಸಿ ಎಲ್ಲ ಕೆರೆಗಳನ್ನು ಭರ್ತಿ ಮಾಡಲಾಗುವುದು. ನೈಜವಾಗಿ ಮನೆಯಿಲ್ಲದ ಫಲಾನುಭವಿಗಳಿಗೆ ಸೈಟ್ ಸಹಿತ ಮನೆ ನಿರ್ಮಾಣ ಮಾಡಿಕೊಡಲು ಕ್ರಮಕೈಗೊಳ್ಳಲಾಗುವುದು ಎಂದರು.
ತಹಶೀಲ್ದಾರ ಕಲ್ಲನಗೌಡ ಪಾಟೀಲ ಮಾತನಾಡಿ ಸರ್ಕಾರದ ಯೋಜನೆಗಳನ್ನು ಮನೆ ಬಾಗಿಲಿಗೆ ಅರ್ಹ ಫಲಾನುಭವಿಗಳಿಗೆ ತಲುಪಿಸಲು ಅಧಿಕಾರಿವರ್ಗ ತಯಾರಿಯಿದ್ದು ಅದರಲ್ಲಿ ಕೆಲವು ಲೋಪದೋಷಗಳನ್ನು ಸ್ಥಳದಲ್ಲಿ ಪರಿಹರಿಸಿ ಪರಿಹಾರ ಕಲ್ಪಿಸಲಾಗುವುದು. ಯಾವುದೇ ಗ್ರಾಮವಿದ್ದರೂ ಮೂಲಭೂತ ಸೌಕರ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಪರಿಹರಿಸಲಾಗದ ಯೋಜನೆಗಳನ್ನು ೭ ದಿನಗಳ ಒಳಗಾಗಿ ಬಗೆಹರಿಸಲಾಗುವುದೆಂದರು.
ಕಾರ್ಯಕ್ರಮದಲ್ಲಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮಹೇಶ ಹೂಲಿ, ಬಿಇಓ ಚನ್ನಬಸಪ್ಪ ತುಬಾಕಿ, ಸಿಪಿಐ ಶಿವಾನಂದ ಗುಡಗನಟ್ಟಿ, ಅರಣ್ಯ ಅಧಿಕಾರಿ ಪ್ರಸನ್ ಬೆಲ್ಲದ, ಸಿದ್ದಪ್ಪ ಕೋತ, ವಿವಿಧ ಗ್ರಾಪಂ ಅಭಿವೃದ್ದಿ ಅಧಿಕಾರಿಗಳು, ಸರ್ವೇ ಅಧಿಕಾರಿ ಅಶೋಕ ಹೊಸಗೇರಿ, ಕಾಂಗ್ರೇಸ್ ಬ್ಲಾಕ್ ಅಧ್ಯಕ್ಷ ಸಂಗನಗೌಡ ಪಾಟೀಲ, ಅದೃಶ್ಯ ಕೊಟಬಾಗಿ, ಜಗದೀಶ ಹಿತ್ತಲಮನಿ, ಸಿದ್ದಪ್ಪ ದೂರಪ್ಪನವರ, ಮಲ್ಲಪ್ಪ ಹಿತ್ತಲಮನಿ, ಕ್ಯಾರಕೊಪ್ಪ ಆನಂದಗೌಡ ಪಾಟೀಲ, ಅಶಪಾಕ ಹವಾಲ್ದಾರ, ಅನಿಲ್ ಎಮ್ಮಿ, ಅಭಿವೃದ್ದಿ ಅಧಿಕಾರಿ ರಶ್ಮಿ ತಾವರಿ ಸ್ವಾಗತಿಸಿದರು, ಕಾರ್ಯದರ್ಶಿ ಸ್ನೇಹಾ ಹಿರೇಮಠ, ಗ್ರಾಮ ಲೆಕ್ಕಿಗ ಮಂಜುನಾಥ ಹಂಚಿನಮನಿ, ಗ್ರಾಪಂ ಸಿಬ್ಬಂದಿ, ಗ್ರಾಮಸ್ಥರು, ವಿವಿಧ ಗ್ರಾಮದ ಗ್ರಾಮಸ್ಥರಿದ್ದರು.