
ಕಲಬುರಗಿ,ಜೂ.26-ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿ ಸಭಾಂಗಣದಲ್ಲಿ ರಾಜ್ಯ ತಂಬಾಕು ನಿಯಂತ್ರಣ ಕೋಶ ಕರ್ನಾಟಕ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಂಯುಕ್ತಾಶ್ರಯದಲ್ಲಿ ನಡೆದ ಕಾರ್ಯಕ್ರಮ ಕ್ಷಯ ರೋಗ ಮತ್ತು ತಂಬಾಕು ವ್ಯಸನ ಮುಕ್ತ ಏಕೀಕರಣದ ಕಾರ್ಯಾಗಾರ ಏರ್ಪಡಿಸಲಾಗಿತ್ತು.
ಕಾರ್ಯಾಗಾರದಲ್ಲಿ ಜಿಲ್ಲಾ ಅ.ಕು.ಕ ಇಲಾಖೆಯ ವಿಭಾಗೀಯ ಉಪ ನಿರ್ದೇಶಕರು ಡಾ. ಶರಣಬಸಪ್ಪ ಗಣಜಲಖೇಡ ರವರು ಮಾತಾನಾಡುತ್ತ ಟಿಬಿ (ಕ್ಷಯ ರೋಗ) ಮತ್ತು ತಂಬಾಕು ವ್ಯಸನ ಮುಕ್ತ ಕಾರ್ಯಕ್ರಮ ಭಾರತ ಸರ್ಕಾರದ ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮ (ಓಖಿಇP) ಮತ್ತು ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ (ಓಖಿಅP) ಜಂಟಿ ಸಹಯೋಗದೊಂದಿಗೆ ಜಾರಿಗೆ ತರಲಾದ ಒಂದು ಪ್ರಮುಖ ಆರೋಗ್ಯ ಉಪಕ್ರಮವಾಗಿದೆ. ತಂಬಾಕು ಸೇವನೆಯು ಶ್ವಾಸಕೋಶವನ್ನು ದುರ್ಬಲಗೊಳಿಸಿ ಕ್ಷಯ ರೋಗ ಬರುವ ಅಪಾಯವನ್ನು ದುಪ್ಪಟ್ಟು ಮಾಡುವುದರಿಂದ, ಈ ಎರಡೂ ಸಮಸ್ಯೆಗಳನ್ನು ಒಟ್ಟಿಗೆ ಎದುರಿಸಲು ಕರ್ನಾಟಕ ಸರ್ಕಾರವು ಇತ್ತೀಚೆಗೆ ವಿಭಾಗೀಯ ಮಟ್ಟದಲ್ಲಿ ಇವೆರಡನ್ನೂ ಸಂಯೋಜಿಸುವ ವಿಶೇಷ ಅಭಿಯಾನವನ್ನು ತೀವ್ರಗೊಳಿಸಿದೆ. ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕರ ಅದರಲ್ಲೂ ಟಿಬಿ ಬಂದಂತಹವರಿಗೆ ಆಪ್ತ ಸಮಾಲೋಚನೆ ಮಾಡುವ ಮೂಲಕ ತಂಬಾಕು ವ್ಯಸನ ಮುಕ್ತ ಮಾಡಲಾಗುತ್ತದೆ ಎಂದರು.
ಕಾರ್ಯಕ್ರಮದ ಮುಖ್ಯ ಉದ್ದೇಶಗಳು,ಅಪಾಯದ ಕಡಿತಗೊಳಿಸುವಿಕೆ ಕ್ಷಯ ರೋಗಿಗಳಲ್ಲಿ ತಂಬಾಕು ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸುವ ಮೂಲಕ ಚಿಕಿತ್ಸೆಯ ಯಶಸ್ಸಿನ ಪ್ರಮಾಣವನ್ನು ಹೆಚ್ಚಿಸುವುದು.ಸಮಗ್ರ ತಪಾಸಣೆ: ಆಸ್ಪತ್ರೆಗೆ ಬರುವ ಪ್ರತಿಯೊಬ್ಬ ಟಿಬಿ ರೋಗಿಯನ್ನು ತಂಬಾಕು ವ್ಯಸನದ ಹಿನ್ನೆಲೆಗಾಗಿ ಕಡ್ಡಾಯವಾಗಿ ತಪಾಸಣೆ ಮಾಡುವುದು. ಅರಿವು ಮೂಡಿಸುವುದು: ತಂಬಾಕು ಸೇವನೆಯಿಂದ ಕ್ಷಯ ರೋಗವು ಹೇಗೆ ಉಲ್ಬಣಗೊಳ್ಳುತ್ತದೆ ಮತ್ತು ಶೇ. 40 ರಷ್ಟು ಟಿಬಿ ಸಾವುಗಳಿಗೆ ತಂಬಾಕು ಹೇಗೆ ಕಾರಣವಾಗುತ್ತದೆ ಎಂಬುದರ ಬಗ್ಗೆ ಜಾಗೃತಿ ಮೂಡಿಸುವುದು ಆರೋಗ್ಯ ಕಾರ್ಯಕರ್ತರ 3 ಹಂತದ ಕಾರ್ಯವಿಧಾನ
1.ವಿಚಾರಿಸಿ : ಸಮೀಕ್ಷೆ ಹಾಗೂ ತಪಾಸಣೆಯ ಸಮಯದಲ್ಲಿ ಪ್ರತಿಯೊಬ್ಬರನ್ನೂ ಅವರು ಧೂಮಪಾನ ಅಥವಾ ತಂಬಾಕು ಜಗಿಯುವ ಅಭ್ಯಾಸ ಹೊಂದಿದ್ದಾರೆಯೇ ಎಂದು ಕೇಳಿ ತಿಳಿದುಕೊಳ್ಳುವುದು.
2.ಸಮಗ್ರ ತಪಾಸಣೆ: ಆಸ್ಪತ್ರೆಗೆ ಬರುವ ಪ್ರತಿಯೊಬ್ಬ ಟಿಬಿ ರೋಗಿಯನ್ನು ತಂಬಾಕು ವ್ಯಸನದ ಹಿನ್ನೆಲೆಗಾಗಿ ಕಡ್ಡಾಯವಾಗಿ ತಪಾಸಣೆ ಮಾಡುವುದು.3.ಅರಿವು ಮೂಡಿಸುವುದು: ತಂಬಾಕು ಸೇವನೆಯಿಂದ ಕ್ಷಯ ರೋಗವು ಹೇಗೆ ಉಲ್ಬಣಗೊಳ್ಳುತ್ತದೆ ಮತ್ತು ಶೇ. 40 ರಷ್ಟು ಟಿಬಿ ಸಾವುಗಳಿಗೆ ತಂಬಾಕು ಹೇಗೆ ಕಾರಣವಾಗುತ್ತದೆ ಎಂಬುದರ ಬಗ್ಗೆ ಇಟಿಜiಟಿg ಮೂಡಿಸುವುದು ಎಂದು ತಿಳಿಸಿದರು.
ಮೊದಲಿಗೆ ಕಾರ್ಯಕ್ರಮದಲ್ಲಿ ಸಸಿಗೆ ನೀರುಣಿಸುವುದುರ ಮೂಲಕ ಜಂಟಿಯಾಗಿ ಜಿಲ್ಲಾ ಅ.ಕು.ಕ ಇಲಾಖೆಯ ವಿಭಾಗೀಯ ಉಪ ನಿರ್ದೇಶಕರು ಡಾ. ಶರಣಬಸಪ್ಪ ಗಣಜಲಖೇಡ್ ಮತ್ತು ಡಾ. ಅಂಬಾರಾಯ್ ರುದ್ರವಾಡಿ ಅವರು ಉದ್ಘಾಟಿಸಿ ಮಾತನಾಡಿದರು.
ಇನ್ಮೊರ್ವ ಡಾ.ಅಂಬಾರಾಯ್ ರುದ್ರವಾಡಿ ರವರು ಮಾತನಾಡುತ್ತ ಟಿಬಿ (ಕ್ಷಯ ರೋಗ) ಮತ್ತು ತಂಬಾಕು ವ್ಯಸನ ಮುಕ್ತ ಜಾಗೃತಿ ಕಾರ್ಯಕ್ರಮವು ಸಾರ್ವಜನಿಕರ ಆರೋಗ್ಯವನ್ನು ಸುಧಾರಿಸಲು ಮತ್ತು ಮಾರಕ ಕಾಯಿಲೆಗಳಿಂದ ಜನರನ್ನು ರಕ್ಷಿಸಲು ಹಮ್ಮಿಕೊಳ್ಳಲಾಗುವ ಅತ್ಯಂತ ಪ್ರಮುಖ ಅಭಿಯಾನವಾಗಿದೆ. ತಂಬಾಕು ಸೇವನೆಯು ಶ್ವಾಸಕೋಶವನ್ನು ದುರ್ಬಲಗೊಳಿಸಿ, ಟಿಬಿ ರೋಗ ಬರುವ ಸಾಧ್ಯತೆಯನ್ನು ಹೆಚ್ಚಿಸುವುದರಿಂದ ಈ ಎರಡೂ ವಿಷಯಗಳ ಬಗ್ಗೆ ಒಟ್ಟಿಗೆ ಜಾಗೃತಿ ಮೂಡಿಸುವುದು ಅತ್ಯಗತ್ಯವಾಗಿದೆ.
ಟಿಬಿ ಮತ್ತು ತಂಬಾಕು ವ್ಯಸನ ಮುಕ್ತ ಜಾಗೃತಿ ಹಾಗೂ ಪ್ರಚಾರ ಅಭಿಯಾನವನ್ನು ಗರಿಷ್ಠ ಮಟ್ಟದ ಪ್ರಭಾವ ಬೀರಲು ಡಿಜಿಟಲ್ ಮತ್ತು ಸಾಂಪ್ರದಾಯಿಕ ಮಾಧ್ಯಮಗಳ ಮೂಲಕ ವ್ಯಾಪಕವಾಗಿ ಹಮ್ಮಿಕೊಳ್ಳಬೇಕಾಗುತ್ತದೆ.
ಡಿಜಿಟಲ್ ಮಾಧ್ಯಮಗಳ ಮೂಲಕ ಪ್ರಚಾರ ಸಾಂಪ್ರದಾಯಿಕ ಮಾಧ್ಯಮ ಮತ್ತು ಆಫ್‍ಲೈನ್ ಪ್ರಚಾರ
ಶಾಲಾ-ಕಾಲೇಜುಗಳಲ್ಲಿ ವಿಶೇಷ ಜಾಗೃತಿ
ಸಮುದಾಯ ಮಟ್ಟದ ಪ್ರಚಾರ ಚಟುವಟಿಕೆಗಳು ಈ ಮೇಲಿನ ಜಾಗೃತಿ ಕಾರ್ಯಕ್ರಮದಿಂದ ರೋಗ ಮುಕ್ತ ವ್ಯಸನ ಮುಕ್ತ ಮಾಡಬಹದುದೆಂದರು.
ವೇದಿಕೆ ಮೇಲೆ ಮುಖ್ಯಅತಿಥಿ ಸ್ಥಾನ ವಹಿಸಿಕೊಂಡ ಸರ್ವಲೆನ್ಸ್ ಮೆಡಿಕಲ್ ಆಫೀಸರ್ ಡಬ್ಲ್ಯೂ ಎಚ್ ಓ ಸಲಹೆಗಾರರಾದ ಡಾ.ಅನಿಲಕುಮಾರ ತಾಳಿಕೋಟಿ, ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶರಣಬಸಪ್ಪ ಕ್ಯಾತನಾಳ್. ಜಿಲ್ಲಾ ತಂಬಾಕು ನಿಯಂತ್ರಣಾಧಿಕಾರಿ ಡಾ.ರಾಕೇಶ್ ಕಾಂಬಳೆ. ರಾಜ್ಯ ತಂಬಾಕು ಚೇಸ್ಸಷನ್ ಯೋಜನಾ ಅಧಿಕಾರಿ ರಾಜೇಶ್ ಭಾರತೀಯ, ಜಿಲ್ಲಾ ನಿರ್ಮೂಲನಾದಕಾರಿ ಡಾ.ಚಂದ್ರಕಾಂತ್ ನರಿಬೋಳ, ಡಾ.ಅನಿಲ್ ಚಿಂತಾಮಣಿ ಬೀದರ್, ವಿಭಾಗೀಯ ತಂಬಾಕು ನಿಯಂತ್ರಣ ಘಟಕದ ಕಾರ್ಯಕ್ರಮ ಸಂಯೋಜಕರು ಮಹಾಂತೇಶ್ ಉಳ್ಳಾಗಡಿ ವೇದಿಕೆ ಮೇಲೆ ಉಪಸ್ಥಿತರಿದ್ದರು.
ಪ್ರಮುಖರಾದ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಲಹೆಗಾರರಾದ ಸುಜಾತಾ ಪಾಟೀಲ, ಸೋಶಿಯಲ್ ವರ್ಕರ್ ಕು. ಆರತಿ ಧನಶ್ರೀ, ಜಿಲ್ಲಾ ಸೈಕ್ಯಾಟ್ರಿಕ್ ಕೌನ್ಸಲರ್ ಮಂಜುನಾಥ ಕಂಬಾಳಿಮಠ, ಗಣಕ ಯಂತ್ರ ಸಹಾಯಕರು ರವಿಕುಮಾರ ಪೂಜಾರಿ ಇದ್ದರು.
ನಿರೂಪಣೆಯನ್ನು ಮಹಾಂತೇಶ್ ಉಳ್ಳಾಗಡಿ ಸುಜಾತಾ ಪಾಟೀಲ ಅವರು ಕಾರ್ಯಕ್ರಮದ ಸ್ವಾಗತಿಸಿ. ವಂದಿಸಿದರು. ನಂತರ ಟಿ ಸಿ ಸಿ ಸ್ಯಾಟಲೈಟ್ ಪೆÇೀಸ್ಟರ್ ಬಿಡುಗಡೆಗೊಳಿಸಲಾಯಿತು.
ಈ ಒಂದು ವಿಭಾಗೀಯ ಟಿಬಿ (ಕ್ಷಯ ರೋಗ) ಮತ್ತು ತಂಬಾಕು ವ್ಯಸನ ಮುಕ್ತ ಏಕೀಕರಣದ ಕಾರ್ಯಾಗಾರದಲ್ಲಿ ಬೀದರ, ಬಳ್ಳಾರಿ, ರಾಯಚೂರ್, ಯಾದಗಿರಿ, ಕೊಪ್ಪಳ, ವಿಜಯನಗರ, ಕಲಬುರಗಿ, ವಿಭಾಗದ ಎಲ್ಲಾ ಎನ್ ಟಿ ಇ ಪಿ ಕಾರ್ಯಕ್ರಮದ ಡಿಟಿಓ. ಡಿಪಿಎಂ, ಡಿಪಿಎಸ್, ಎಸ್ ಟಿ ಎಸ್, ಮತ್ತು ಎನ್ ಟಿ ಸಿ ಪಿ ಕಾರ್ಯಕ್ರಮದ ಟಿ ಸಿ ಸಿ ಆಪ್ತ ಸಮಾಲೋಚಕರು, ಅಧಿಕಾರಿಗಳು. ಹಾಗೂ ಇತರರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.





















