Home ಜಿಲ್ಲೆ ಕಲಬುರಗಿ ಲಾರಿ ಡಿಕ್ಕಿ: ಮಹಿಳೆ ಸಾವು

ಲಾರಿ ಡಿಕ್ಕಿ: ಮಹಿಳೆ ಸಾವು

ಕಲಬುರಗಿ,ಮೇ.15-ಲಾರಿ ಡಿಕ್ಕಿ ಹೊಡೆದು ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ನಗರದ ಆಳಂದ ಚೆಕ್ ಪೋಸ್ಟ್ ಹತ್ತಿರ ಇಂದು ಬೆಳಿಗ್ಗೆ 8 ಗಂಟೆ ಸುಮಾರಿಗೆ ನಡೆದಿದೆ.
ಮೃತ ಮಹಿಳೆಯನ್ನು ನಗರದ ಎಂಎಸ್‍ಕೆಮಿಲ್ ಡಬರಾಬಾದ ನಿವಾಸಿ ಖೈರುನಬಿ ಗಂಡ ಚಾಂದ ಪಟೇಲ್ (53) ಎಂದು ಗುರುತಿಸಲಾಗಿದೆ.
ಇವರು ಆಳಂದ ಚೆಕ್ ಪೋಸ್ಟ್ ಬಳಿ ಇರುವ ಉಪ್ಪಿಟ್ ಹೋಟೆಲ್‍ನಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಎಂದಿನಂತೆ ಇಂದು ಸಹ ಕೆಲಸಕ್ಕೆ ಹೋಗಲೆಂದು ಆಳಂದ ಚೆಕ್ ಪೋಸ್ಟ್ ಬಳಿ ಇಳಿದು ನಡೆದುಕೊಂಡು ಹೋಗುತ್ತಿದ್ದಾಗ ಲಾರಿ ಡಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ. ಸಂಚಾರಿ ಪೊಲೀಸ್ ಠಾಣೆ-2ರಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.