
ಜೇವರಗಿ,ಮೇ 15: ತಾಲೂಕಿನ ಬಿರಾಳ(ಬಿ) ಗ್ರಾಮ ಪಂಚಾಯತ್ ವ್ಯಾಪ್ತಿಯ ಬಿರಾಳ. ಕೆ. ಗ್ರಾಮದ ಕುಡಿಯುವ ನೀರಿನ ಭಾವಿ ಕಸ ಕಡ್ಡಿಗಳಿಂದ ತುಂಬಿ ನೀರು ಹೊಲಸು ನಾರುತ್ತಿದೆ. ಶೀಘ್ರದಲ್ಲಿ ಬಾವಿಯಲ್ಲಿರೋ ಕಸ ಕಡ್ಡಿ ಸ್ವಚ್ಛಗೊಳಿಸಬೇಕೆಂದು ಜೇವರ್ಗಿ ವೀರ ಕನ್ನಡಿಗರ ಸೇನೆಯ ತಾಲೂಕಾಧ್ಯಕ್ಷ ಪರಮೇಶ್ವರ ನಾಯಕ ಬಿರಾಳ ಅಗ್ರಹಿಸಿದ್ದಾರೆ. ರಾಜ್ಯ ಸರ್ಕಾರ ಕುಡಿಯುವ ನೀರಿಗಾಗಿ ಕೋಟ್ಯಾಂತರ ಹಣ ಮೀಸಲಿಟ್ಟಿದೆ. ಈ ಅನುದಾನದಲ್ಲಿ ಬಿರಾಳ.ಕೆ. ಗ್ರಾಮದ (ಹಾಳುಭಾವಿ )ತ್ವರಿತವಾಗಿ ಸ್ವಚ್ಛಗೊಳಿಸಬೇಕೆಂದು ಈ ವಿಷಯದಲ್ಲಿ ನಿರ್ಲಕ್ಷವಹಿಸಿದರೆ ಪಂಚಾಯತ್ ಎದುರಿಗೆ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಅವರು ಮನವಿ ಪತ್ರದ ಮೂಲಕ ತಿಳಿಸಿದ್ದಾರೆ























