
ಕಲಬುರಗಿ,ಮೇ.15-ಮಣ್ಣೂರ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆಯ ಮುಖ್ಯಸ್ಥರಾದ ಡಾ. ಫಾರುಕ್ ಮಣ್ಣೂರ ಅವರು ಕಡಿಮೆ ಅವಧಿಯಲ್ಲಿ ಚಿಕಿತ್ಸೆ ಮೂಲಕ ಹಾಗೂ ಸಮಾಜ ಸೇವೆ ಮೂಲಕ ಕಡಿಮೆ ಅವಧಿಯಲ್ಲಿ ಜನರ ವಿಶ್ವಾಸ ಸಂಪಾದನೆ ಮಾಡಿದ್ದಾರೆ ಶಿಘ್ರದಲ್ಲಿಯೆ ದಿನಾಂಕ ನಿಗದಿ ಮಾಡಿ ಡಾ. ಫಾರುಕ್ ಮಣ್ಣೂರ ಅವರಿಗೆ ಸಚಿವ ಪ್ರಿಯಾಂಕ ಖರ್ಗೆ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಪಕ್ಷದಲ್ಲಿ ಒಳ್ಳೆ ಸ್ಥಾನ ನೀಡುತ್ತೇವೆ ಎಂದು ಎಮ್.ಎಲ್.ಸಿ ಹಾಗೂ ಜಿಲ್ಲಾ ಕಾಂಗ್ರೇಸ್ ಸಮಿತಿ ಅಧ್ಯಕ್ಷರಾದ ಜಗದೇವ ಗುತ್ತೇದಾರ ಅವರು ಹೇಳಿದ್ದರು.
ಕಲಬುರಗಿ ನಗರದಲ್ಲಿ ಡಾ. ಫಾರುಕ ಮಣ್ಣೂರ ಅಭಿಮಾನಿ ಬಳಗದಿಂದ ಡಾ.ಫಾರುಕ್ ಮಣ್ಣೂರ ಅವರ 39ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಸೇವಾ ಸಂಕಲ್ಪ ದೀವಸ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ನಿಮ್ಮಂತವರು ಜನಪರ, ಬಡವರ ಪರ , ಹಿಂದೂಳಿದವರ ಪರ ಕಾಳಜಿವುಳ್ಳವರು ರಾಜಕೀಯಕ್ಕೆ ಬಂದರೆ ಜನರಿಗೆ ಸಾಮಜಿಕ ನ್ಯಾಯ ನೀಡಲು ಸಾಧ್ಯ, ಕಾಂಗ್ರೆಸ್ ಪಕ್ಷದ ಸಿದ್ದಾಂತ ಕೂಡ ಬಡವರ ಪರಾಗಿದ್ದು ನೀವು ಬಡವರ ಪರ ಕಾಳಜಿ ವುಳ್ಳವರಾಗಿದ್ದು ನಿಮ್ಮಂಥವರ ಅವಶ್ಯಕತೆ ಪಕ್ಷಕ್ಕೆ ಇದೆ ಎಂದರು.
ಜನ್ಮದಿನದ ಪ್ರಯುಕ್ತ ಸುಕನ್ಯಾ ಸಮೃದ್ಧಿ ಯೋಜನೆ ಅಡಿಯಲ್ಲಿ 200 ಹೆಣ್ಣು ಮಕ್ಕಳ 18 ವರ್ಷಗಳವರೆಗೆ ಅವರ ಕಂತನ್ನು ಪಾವತಿಸುತ್ತಿದ್ದಿರಿ, 2025 ನೆ ಸಾಲಿನಲ್ಲಿ ಉತ್ತಮವಾಗಿ ತೇರ್ಗಡೆಯಾದ 10 ವಿದ್ಯಾರ್ಥಿಗಳಿಗೆ ತಲಾ ರೂ.10000- ವಿದ್ಯಾರ್ಥಿವೇತನ ನೀಡುರಿವುದು, ಐಎಎಸ್/ಕೆಎಎಸ್ ವಿದ್ಯಾರ್ಥಿಗಳಿಗೆ ಪುಸ್ತಕಗಳ ವಿತರಣೆ ಮಾಡಿರುವುದು, ಕಲಬುರಗಿ ಜಿಲ್ಲೆಯ 15 ಜನ ವಿಧವೆಯರಿಗಾಗಿ ಬಟ್ಟೆ ಹೊಲಿಯುವ ಯತ್ರ ವಿತರಣೆ , ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ 11 ಜನ ಸಾಧಕರಿಗೆ ಪ್ರಶಸ್ತಿ ಪ್ರಧಾನ ಸೇರಿದಂತೆ ಅನೇಕ ಬಡವರ ಪರ ಕಾಳಜಿ ವುಳ್ಳಕಾರ್ಯಕ್ರಮ ಆಯೋಜನೆ ಮಾಡಿರುವುದು ಶ್ಲಾಘನೀಯ ಎಂದರು.
ಮಣ್ಣೂರ ಆಸ್ಪತ್ರೆಯ ಮುಖ್ಯಸ್ಥ ಡಾ. ಫಾರುಕ್ ಮಣ್ಣೂರ ಮಾತನಾಡಿ ಇಂದು ಪ್ರತಿಯೊಬ್ಬ ಪೆÇೀಷಕರು ಹೇಣ್ಣು ಮಗುವಿಗೆ ಗುಣಮಟ್ಟದ ಶಿಕ್ಷಣ ನೀಡಿ ವಿದ್ಯಾವಂತರಾಗಿ ಮಾಡಿದಾರೆ ಆ ಹೇಣ್ಣು ಮಗು ಇಡಿ ಕುಟುಂಬಕ್ಕೆ ವಿದ್ಯಾವಂತರನ್ನಾಗಿ ಮಾಡುತ್ತದೆ , ಆದಕರಣ ಹೇಣ್ಣು ಮಕ್ಕಳ ಶಿಕ್ಷಣಕ್ಕೆ ಪ್ರತಿಯೊಬ್ಬರು ಪೆÇ್ರಸ್ತಹಿಸಬೇಕು ಎಂದರು. ಮಣ್ಣುರ ಆಸ್ಪತ್ರೆ ಪ್ರಾರಂಭವಾದಗಿನಿಂದ ನಾನು ಕಲಬುರಗಿ ಜಿಲ್ಲೆಯ 750 ಕ್ಷಯ ರೋಗಿಗಳಿಗೆ ದತ್ತು ಪಡೆದು ಪೌಷ್ಠಿಕ ಆಹರ ವಿತರಣೆ ಮಾಡಲಾಗುತ್ತಿದೆ, ಕಲಬುರಗಿ ಜಿಲ್ಲಾದ್ಯಂತ ಉಚಿತವಾಗಿ ಕುಡಿಯುವ ನೀರು ಪೂರೈಸಲಾಗುತ್ತಿದೆ, ಮಧುಮೇಹ ಮುಕ್ತ ಕಲಬುರಗಿ ಉದ್ದೇಶದಿಂದ ಉಚಿತವಾಗಿ ಮಧೂಮೇಹ ತಪಾಸಣೆ ಅಭೀಯಾನ ಹಮ್ಮಿಕೋಳ್ಳಲಾಗಿದೆ , ಕಲಬುರಗಿ ಜಿಲ್ಲೆಯ ಸುಮಾರು 650 ಬಡ ಹೇಣ್ಣು ಮಕ್ಕಳಿಗೆ ಸುಕನ್ಯ ಸಮೃದ್ದಿ ಯೋಜನೆ ಅಡಿಯಲ್ಲಿ ದತ್ತು ಪಡೆದು 18 ವರ್ಷಗಳ ವರೆಗೆ ಅವರ ಹಣದ ಕಂತ್ತನ್ನು ಆಸ್ಪತ್ರೆಯಿಂದ ಪಾವತಿಸಲಾಗುತ್ತಿದೆ ಸೇರಿದಂತೆ ಅನೇಕ ಸಮಾಜಿಕ ಕಾರ್ಯ ಮಾಡಿಕೊಂಡು ಬರುತ್ತಿದ್ದೇನೆ ಎಂದು ತಿಳಿಸಿದ್ದರು.
ಈ ಸಂದರ್ಭದಲ್ಲಿ ಶ್ರೀನಿವಾಸ ಸರಡಗಿಯ ಮಹಾಲಕ್ಷ್ಮಿ ಶಕ್ತಿ ಪೀಠದ ಡಾ. ಅಪ್ಪಾರಾವ ದೇವಿ ಮುತ್ಯಾ, ಜನಾಬ ಮೌಲಾನಾ ಅಲ್ತಾಫ ಪಟೇಲ್ ಸಾಹೆಬ್ , ಶ್ರೀ ಮೌನೇಶ್ವರ ಮಠ ಗಂಜಲ ಖೇಡದ ಪೂಜ್ಯ ಶ್ರೀ ನಾಗೇಶ ಮಾಣಿಕ ಅಪ್ಪಾಜಿ, ನಿಲಕಂಠರಾವ ಮೂಲಗೆ, ಡಾ. ಎಸ್. ಬಿ.ಕಾಮರಡ್ಡಿ, ಫರಾಜುಲ್ ಇಸ್ಲಾಂ. ಮರೆಪ್ಪ ಹಳ್ಳಿ, ಡಾ.ರವಿ ಚವ್ಹಾಣ. ಶರಣಬಸಪ್ಪ ಖೇಣಿ, , ಬಾಬುಮಿಯ್ಯ ಮಣ್ಣೂರ, ಡಾ. ಮತೀನ್, ಎಮ.ಡಿ.ಇಸ್ಮಾಯಿಲ್ , ಜಹೀರ್ ಶಹಾಬಾದ, ರಾಜೇಶ ಯಾನಾಗುಂಟಿ, ಆಮೀರ ನಿಂಬಾಳಕರ್, ಹರ್ಷಾ ಪಿಂಟು, ಹರೀಶ, ನಜೀರ್ ಸೇರಿದಂತೆ ಪಕ್ಷದ ಮುಖಂಡರು ಉಪಸ್ಥಿತರಿದ್ದರು.
…………..
ಡಾ. ಫಾರುಕ್ ಮಣ್ಣೂರ ಅವರ ಜನ್ಮದಿನದ ಪ್ರಯುಕ್ತ ಅವರ ಅಭಿಮಾನಿ ಬಳಗದ ವತಿಯಿಂಧ ಕಲಬುರಗಿ ನಗರದಲ್ಲಿರುವ ವೃದ್ದಾಶ್ರಮದಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮ ಹಾಗೂ ಸರ್ಕಾರಿ ಜಿಲ್ಲಾ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ, ಸುಕನ್ಯಾ ಸಮೃದ್ಧಿ ಯೋಜನೆ ಅಡಿಯಲ್ಲಿ 200 ಹೆಣ್ಣು ಮಕ್ಕಳ 18 ವರ್ಷಗಳವರೆಗೆ ಅವರ ಕಂತನ್ನು ಪಾವತಿಸಲು ನಿರ್ದರಿಸಿದ್ದು ಅವರ ಖಾತೆಯ ಪಾಸ್ಬುಕ್ ವಿತರಣೆ, 2026 ನೆ ಸಾಲಿನಲ್ಲಿ ಉತ್ತಮವಾಗಿ ತೇರ್ಗಡೆಯಾದ 10 ಹೆಣ್ಣು ಮಕ್ಕಳಿಗೆ ತಲಾ ರೂ.10000- ವಿದ್ಯಾರ್ಥಿವೇತನ ವಿತರಣೆ, ಐಎಎಸ್/ ಕೆಎಎಸ್ ವಿದ್ಯಾರ್ಥಿಗಳಿಗೆ ಪುಸ್ತಕಗಳ ವಿತರಣೆ, ಕಲಬುರಗಿ ಜಿಲ್ಲೆಯ 10 ಜನ ವಿಧವೆಯರಿಗಾಗಿ ಬಟ್ಟೆ ಹೊಲಿಯುವ ಉಪಕರಣ ವಿತರಣೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ 11 ಜನ ಸಾಧಕರಿಗೆ ಪ್ರಶಸ್ತಿ ಪ್ರಧಾನ ಸೇರಿದಂತೆ ಅನೇಕ ಸಮಾಜಿಕ ಕಾರ್ಯಕ್ರಮ ಆಯೋಜನೆ ಮಾಡಿದ್ದರು.
………….
ಬೈಕ್ ರ್ಯಾಲಿ
ಡಾ. ಫಾರುಕ್ ಮಣ್ಣೂರ ಅವರ ಜನ್ಮದಿನದ ಪ್ರಯುಕ್ತ ಅವರ ಅಭಿಮಾನಿ ಬಳಗದಿಂದ ಡಾ. ಫಾರುಕ್ ಅವರ ಬಾರಾಹಿಲ್ಸ್ ನಿವಾಸಿದಂದ ಕಾರ್ಯಕ್ರಮ ನಡೆಯುವ ತ್ರಿ ನೇಂತ್ರ ಕಲ್ಯಾಣ ಮಂಟಪದವರೆಗೆ 200 ಕ್ಕೂ ಬೈಕ ಗಳ ಮೂಲಕ ಬೃಹತ ಬೈಕ ರ್ಯಾಲಿ ಮಾಡಿದ್ದರು.























