
ರಾಜ್ಯ ಸರ್ಕಾರ ಶಾಲಾ ಕಾಲೇಜುಗಳಲ್ಲಿ ಹಿಜಾಬ್ ನಿಷೇಧ ಆದೇಶ ವಾಪಸ್ ಪಡೆದಿದ್ದನ್ನು ಖಂಡಿಸಿ ಶ್ರೀರಾಮಸೇನಾ ರಾಷ್ಟಿçÃಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅವರ ನೇತೃತ್ವದಲ್ಲಿ ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರ ಭಾವಚಿತ್ರಗಳನ್ನು ಸುಟ್ಟು ಪ್ರತಿಭಟನೆ ನಡೆಸಲಾಯಿತು. ಅಪ್ಪಣ್ಣ ದಿವಟಗಿ, ಮಂಜುನಾಥ ಕಾಟಕರ, ಯಶೋಧಾ ತಾಂಬೆ, ಬಸವರಾಜ ಗೌಡರ, ಮಹಾಂತೇಶ್ ಟೊಂಗಳಿ, ಗುಣಧರ ದಡೋತಿ, ಪ್ರವೀಣ ಮಾಳದಕರ ಪಾಲ್ಗೊಂಡಿದ್ದರು.

























