
ಬೆಂಗಳೂರು, ಅ. ೨೮: ನಾವು ಮತದಾರರ ತೀರ್ಪನ್ನು ಗೌರವದಿಂದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಪರಿಷತ್ ಚುನಾವಣೆಯ ಫಲಿತಾಂಶದ ಬಗ್ಗೆ ಪ್ರತಿಕ್ರಿಯೆ ನೀಡಿದರು.
ಸ್ವೀಕರಿಸುತ್ತೇನೆ, ಸದಾಶಿವನಗರದ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ
“ನಮಗೆ ಒಂದು ಸೀಟ್ ಇತ್ತು ಮತ್ತು ಅದು ನಮ್ಮ ನಿರೀಕ್ಷೆಯಿತ್ತು. ಜನರು ಸಂದೇಶ ಕೊಟ್ಟಿದ್ದಾರೆ. ನಾವು ಅಧ್ಯಯನ ಮಾಡಿ ಸರಿಪಡಿಸುವ ಕೆಲಸ ಮಾಡುತ್ತೇವೆ. ವೋಟ್ ಚೆನ್ನಾಗಿ ಬಂದಿದೆ. ನಾವು ಪರಿಶೀಲನೆ ಮಾಡುತ್ತೇವೆ” ಎಂದು ಅವರು ಹೇಳಿದರು.
ವಿರೋಧ ಪಕ್ಷಗಳು ಈ ಫಲಿತಾಂಶವನ್ನು ಮುಂದಿನ ಚುನಾವಣೆಗೆ ಮುನ್ಸೂಚನೆ ಎಂದು ಕರೆದ ಬಗ್ಗೆ ಕೇಳಲಾದ ಪ್ರಶ್ನೆಗೆ, ಸಿಎಂ ತಿರುಗೇಟು ನೀಡಿದರು. “ಚನ್ನಪಟ್ಟಣ ಮತ್ತು ಶಿಗ್ಗಾವು ಮುನ್ಸೂಚನೆಯಾ? ಅದರ ಬಗ್ಗೆಯೂ ವಿರೋಧ ಪಕ್ಷಗಳು ಮಾತಾಡಬೇಕು ಅಲ್ವಾ?” ಎಂದು ಪ್ರಶ್ನಿಸಿದರು.
ಹೆಚ್.ಡಿ. ಕುಮಾರಸ್ವಾಮಿ ಅವರು ’ಬಲಿಪಾಢ್ಯಮಿಗೆ ನರಕಾಸುರನ ಸಂಹಾರ ಶುರು’ ಎಂಬ ಹೇಳಿಕೆ ನೀಡಿದ ವಿಚಾರದಲ್ಲಿ ಸಿಎಂ ಪ್ರತಿಕ್ರಿಯೆ ನೀಡಿದರು. “ದೇವರು ಒಳ್ಳೆಯದು ಮಾಡಲಿ ” ಎಂದು ಅವರು ಹೇಳಿದರು.

























