Home ಜಿಲ್ಲೆ ವಾಲ್ಮೀಕಿ ರಾಮಾಯಣ ಮಾನವ ಸಂಬAಧಗಳ ಮೌಲ್ಯ ಸಾರುತ್ತದೆ : ನಾ. ಗೀತಾಚಾರ್ಯ

ವಾಲ್ಮೀಕಿ ರಾಮಾಯಣ ಮಾನವ ಸಂಬAಧಗಳ ಮೌಲ್ಯ ಸಾರುತ್ತದೆ : ನಾ. ಗೀತಾಚಾರ್ಯ

ಬೀದರ್ ಅ. ೨೮: ಮಹರ್ಷಿ ವಾಲ್ಮೀಕಿ ಅವರು ರಚಿಸಿದ ರಾಮಾಯಣವು ಮಾನವ ಸಂಬAಧಗಳ ಮಹತ್ವ, ಕುಟುಂಬದ ಜವಾಬ್ದಾರಿ, ಧರ್ಮನಿಷ್ಠೆ ಹಾಗೂ ಜೀವನ ಮೌಲ್ಯಗಳನ್ನು ಸಾರುವ ಮಹಾಕಾವ್ಯವಾಗಿದೆ ಎಂದು ಹಿರಿಯ ದಾಸ ಸಾಹಿತ್ಯ ವಿದ್ವಾಂಸ ನಾ.ಗೀತಾಚಾರ್ಯ ಹೇಳಿದರು.

ನಗರದ ಕುಂಬಾರವಾಡ ೭ನೇ ಅಡ್ಡ ರಸ್ತೆಯ ಅತಿವಾಳೆ ಸಾಂಸ್ಕೃತಿಕ ಸಭಾಂಗಣದಲ್ಲಿ ಸೋಮವಾರ ಜನಪರ ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ ಹಾಗೂ ದಾಸ ಸಾಹಿತ್ಯ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಸಸಿಗೆ ನೀರೇರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಮನುಷ್ಯನ ಬದುಕಿಗೆ ಉತ್ತಮ ದಾರಿಯನ್ನು ತೋರಿಸುವ ಶಕ್ತಿ ಸಾಹಿತ್ಯಕ್ಕಿದ್ದು, ದಾಸ ಸಾಹಿತ್ಯ ಮತ್ತು ವಾಲ್ಮೀಕಿ ರಾಮಾಯಣದ ಆಶಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೆಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಡಾ. ಸಂಜೀವಕುಮಾರ ಅತಿವಾಳೆ ಮಾತನಾಡಿ, ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸ ನಿರಂತರವಾಗಿ ನಡೆಯಬೇಕು. ಇಂತಹ ಕಾರ್ಯಕ್ರಮಗಳು ಮಹನೀಯರ ಜೀವನ ಸಾಧನೆಯನ್ನು ಜನರಿಗೆ ತಿಳಿಸುವುದರ ಜೊತೆಗೆ ಯುವ ಜನರಲ್ಲಿ ಸಾಹಿತ್ಯದ ಅಭಿರುಚಿ ಬೆಳೆಸಲು ಸಹಕಾರಿಯಾಗುತ್ತವೆ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ವಾಲ್ಮೀಕಿ ಸಮಾಜದ ಯುವ ಮುಖಂಡ ಸುನೀಲ ಭಾವಿಕಟ್ಟಿ ಮಾತನಾಡಿ, ಮಹನೀಯರ ಜಯಂತಿಗಳನ್ನು ಕೇವಲ ಆಚರಣೆಗೆ ಸೀಮಿತಗೊಳಿಸದೆ ಅವರ ವಿಚಾರಗಳನ್ನು ಜನರಿಗೆ ತಲುಪಿಸುವ ವೇದಿಕೆಯನ್ನಾಗಿ ರೂಪಿಸಬೇಕು. ವಾಲ್ಮೀಕಿ ಅವರ ಆದರ್ಶಗಳು ಮತ್ತು ದಾಸ ಸಾಹಿತ್ಯದ ಸಂದೇಶಗಳು ಸಮಾಜದಲ್ಲಿ ಸಮಾನತೆ, ಸಹಬಾಳ್ವೆ ಹಾಗೂ ಮಾನವೀಯ ಸಂಬAಧಗಳನ್ನು ಗಟ್ಟಿಗೊಳಿಸಲು ನೆರವಾಗುತ್ತವೆ ಎಂದರು.

ಉಪನ್ಯಾಸ ೧ರಲ್ಲಿ :- ದಾಸ ಸಾಹಿತ್ಯದಲ್ಲಿ ಜೀವನ ಮೌಲ್ಯ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದ ಅಖಿಲ ಭಾರತ ದಾಸ ಸಾಹಿತ್ಯ ಪರಿಷತ್ತಿನ ಬೀದರ ಅಧ್ಯಕ್ಷ ಡಾ. ರವೀಂದ್ರ ಲಂಜವಾಡಕರ್, ದಾಸ ಸಾಹಿತ್ಯವು ಕೇವಲ ಭಕ್ತಿಗೆ ಸೀಮಿತವಾಗಿಲ್ಲ. ಅದು ಮನುಷ್ಯನ ವ್ಯಕ್ತಿತ್ವ ನಿರ್ಮಾಣ, ಸಾಮಾಜಿಕ ಸಾಮರಸ್ಯ ಮತ್ತು ನೈತಿಕ ಬದುಕಿಗೆ ಮಾರ್ಗದರ್ಶನ ನೀಡುತ್ತದೆ. ದಾಸರು ತಮ್ಮ ಕೀರ್ತನೆಗಳ ಮೂಲಕ ಅಹಂಕಾರ, ದುರಾಸೆ ಮತ್ತು ಮನುಷ್ಯನಲ್ಲಿರುವ ದುರ್ಗುಣಗಳನ್ನು ತೊರೆದು ಸತ್ಯ ಹಾಗೂ ಧರ್ಮದ ಹಾದಿಯಲ್ಲಿ ನಡೆಯುವಂತೆ ಸಂದೇಶ ನೀಡಿದ್ದಾರೆ ಎಂದು ತಿಳಿಸಿದರು.

ಉಪನ್ಯಾಸ ೨ರಲ್ಲಿ :- ಮಹರ್ಷಿ ವಾಲ್ಮೀಕಿ ಅವರ ಜೀವನ ಸಾಧನೆ ಕುರಿತು ಉಪನ್ಯಾಸ ನೀಡಿದ ಪತ್ರಕರ್ತ ಚಂದ್ರಕಾAತ ಹಳ್ಳಿಖೇಡಕರ್, ವಾಲ್ಮೀಕಿ ಅವರ ಜೀವನವು ಪರಿವರ್ತನೆ, ಪರಿಶ್ರಮ ಮತ್ತು ಸಾಧನೆಯ ಮಹತ್ವವನ್ನು ಸಾರುತ್ತದೆ. ಅವರ ಹೆಸರಿನೊಂದಿಗೆ ಗುರುತಿಸಿಕೊಂಡಿರುವ ರಾಮಾಯಣವು ಭಾರತೀಯ ಸಾಹಿತ್ಯ ಪರಂಪರೆಯ ಅಮೂಲ್ಯ ಕೃತಿಯಾಗಿದೆ. ಶ್ರೀರಾಮನ ಆದರ್ಶ, ಸೀತೆಯ ಸಹನೆ, ಲಕ್ಷö??ಣನ ಕರ್ತವ್ಯನಿಷ್ಠೆ, ಭರತನ ತ್ಯಾಗ ಹಾಗೂ ಹನುಮಂತನ ಭಕ್ತಿಯ ಮೂಲಕ ಜೀವನದ ಹಲವು ಮೌಲ್ಯಗಳನ್ನು ರಾಮಾಯಣ ಪರಿಚಯಿಸುತ್ತದೆ ಎಂದು ಹೇಳಿದರು.

ಅದೇ ಸಂದರ್ಭದಲ್ಲಿ ಕರ್ನಾಟಕ ಜಾನಪದ ಅಕಾಡೆಮಿಯ ರಾಜ್ಯ ವಾರ್ಷಿಕ ಗೌರವ ಪ್ರಶಸ್ತಿ ಪುರಸ್ಕೃತರಾದ ದೇವದಾಸ್ ಚಿಮಕೋಡ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಜಾನಪದ ಕ್ಷೇತ್ರದಲ್ಲಿ ಅವರು ಸಲ್ಲಿಸಿದ ಸೇವೆ ಹಾಗೂ ಕಲಾ ಸಾಧನೆಯನ್ನು ಗುರುತಿಸಿ ಅಭಿನಂದಿಸಲಾಯಿತು.

ಪ್ರಾರAಭದಲ್ಲಿ ಸೂರ್ಯಕಾಂತ್ ವಿಶ್ವಕರ್ಮ ಪ್ರಾರ್ಥನೆ ಗೀತೆ ನಡೆಸಿಕೊಟ್ಟರು, ಶ್ರೀಮತಿ ಶಿಲ್ಪಾ ಪಾಟೀಲ್ ಜಾನಪದ ಗೀತೆ ಹಾಡಿದರು, ಅಜೀತ್ ಎನ್, ಸ್ವಾಗತಿಸಿದರು, ಬಸವರಾಜ್ ಮುಗಟಾಪುರೆ ನಿರೂಪಿಸಿದರೆ, ಅವಿನಾಶ್ ಸೋನಿ ವಂದಿಸಿದರು. ಹಿರಿಯ ಸಾಹಿತಿಗಳು, ಸಾರ್ವಜನಿಕರು, ಅನೇಕರು ಉಪಸ್ಥಿತರಿದ್ದರು.