
ಸೇಡಂ,ಸೆ,10: ತಾಲೂಕಿನ ತೇಲ್ಕೂರ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಸಂಗಾವಿ.ಟಿ ಗ್ರಾಮಕ್ಕೆ ಹೋಗುವ ಬ್ರಿಜ್ ಮೇಲೆ ಜೆಜೆಎಮ್ ಪೈಪಲೈನ್ ಅಳವಡಿಸಲಾಗಿದ್ದು ಪೈಪ್ ಡ್ಯಾಮೇಜ್ ಆಗಿರುವುದರಿಂದ ಬ್ರಿಜ್ ಮೇಲೆ ನೀರು ನಿಂತು ಕೆಸರು ಗದ್ದೆಯಂತೆ ಆಗಿದ್ದು ನಿತ್ಯ ತಿರುಗಾಡುವಾಗ ದ್ವಿಚಕ್ರ ಸವಾರರು ಬೀಳುತ್ತಿದ್ದು, ಗ್ರಾಮಸ್ಥರ ನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ, ಆದರಿಂದ ಗ್ರಾಮೀಣ ಕುಡಿಯುವ ನೀರಿನ ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ತಕ್ಷಣ ಎಚ್ಚೆತ್ತುಕೊಂಡು ಬ್ರಿಜ್ ಮೇಲೆ ನೀರು ನಿಲ್ಲದ ಹಾಗೆ ಮಾಡಬೇಕೆಂದು ಗ್ರಾಮಸ್ಥರು ಸಂಜೆವಾಣಿ ವರದಿಗಾರರಿಗೆ ದೂರವಾಣಿ ಮೂಲಕ ನಿತ್ಯ ಸಮಸ್ಯೆಯ ಕುರಿತು ಅಳಲು ತೋಡಿಕೊಂಡಿದ್ದಾರೆ.































