
ಕಲಬುರಗಿ,ಸೆ.10-ತಾಲ್ಲೂಕಿನ ಕೊಳ್ಳುರ ಗ್ರಾಮದ ಜಗದ್ಗುರು ಶಿವಲಿಂಗೇಶ್ವರ ಮಠದಲ್ಲಿ ಸೆ.14 ರಂದು ಶ್ರಾವಣ ಮಾಸದ ಸಮಾರೋಪ ಕಾರ್ಯಕ್ರಮ ಜರುಗಲಿದೆ. . ಬೆಳಿಗ್ಗೆ 6ಕ್ಕೆ ರುದ್ರಭಿಷೇಕ ನಂತರ ಮೃತ್ಯುಂಜಯ ದೇವರ ಸಾನ್ನಿಧ್ಯದಲ್ಲಿ ಶಿವಲಿಂಗೇಶ್ವರರ ಪಲ್ಲಕ್ಕಿ ನಡೆಯಲಿದೆ. ಗ್ರಾಮದ ಮನೆ ಮನೆಗೆ ಪಲ್ಲಕ್ಕಿ ಮೆರವಣಿಗೆಯಲ್ಲಿ ಪುರಂತರು, ಡೊಳ್ಳು, ಭಜನೆಯೊಂದಿಗೆ ಹೆಜ್ಜೆ ಹಾಕುವರು. ಗ್ರಾಮಸ್ಥರು ಪಲ್ಲಕ್ಕಿಗೆ ನೀರು ನೀಡಿ ಪುನೀತರಾದ ಬಳಿಕ ಮಹಾಪ್ರಸಾದದ ವ್ಯವಸ್ಥೆ ಮಾಡಲಾಗಿದೆ ಎಂದು ಗ್ರಾಮದ ಸದ್ಭಕ್ತ ಮಂಡಳಿ ತಿಳಿಸಿದೆ.































