
ಕಲಬುರಗಿ,ಸೆ.11: ಶಿಕ್ಷಣ ಹರಿಕಾರ, ತತ್ವಜ್ಞಾನಿಯಾದ ಪೂಜ್ಯ ಡಾ.ಶರಣಬಸವಪ್ಪ ಅಪ್ಪ ಅವರು ಶಿಕ್ಷಕರ ಪಾಲಿಗೆ ಬ್ರಹ್ಮಸ್ವರೂಪಿಯಾಗಿದ್ದರು ಎಂದು ಶರಣಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ಸಾವಿತ್ರಿ ಬಿಳಗಿ ಅವರು ಹೇಳಿದರು.
ಅಖಿಲ ಭಾರತ ಶಿವಾನುಭವ ಮಂಟಪ ಶರಣಬಸವೇಶ್ವರ ದೇವಸ್ಥಾನದಲ್ಲಿ ಶ್ರಾವಣ ಮಾಸದ 40 ದಿನಗಳ ಉಪನ್ಯಾಸ ಮಾಲಿಕೆಯಲ್ಲಿ ಬುಧವಾರ ಪೂಜ್ಯ ಡಾ. ಶರಣಬಸವಪ್ಪ ಅಪ್ಪ ಅವರು ಮತ್ತು ಶಿಕ್ಷಕರ ಬೆಳವಣಿಗೆ ವಿಷಯ ಕುರಿತು ಮಾತನಾಡಿ, ಪೂಜ್ಯ ಡಾ. ಶರಣಬಸವಪ್ಪ ಅಪ್ಪ ಅವರು ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ ಶಿಕ್ಷಣ ಸಂತರು. ಅವರ ಶಿಕ್ಷಣದೃಷ್ಟಿಯಲ್ಲಿ ಶಿಕ್ಷಕರು ಕೇವಲ ಪಾಠ ಬೋಧಿಸುವ ವ್ಯಕ್ತಿಗಳಲ್ಲ, ಅವರು ವಿದ್ಯಾರ್ಥಿಗಳ ವ್ಯಕ್ತಿತ್ವ ನಿರ್ಮಿಸುವ ಮಾರ್ಗದರ್ಶಕರು. ಉತ್ತಮ ಶಿಕ್ಷಣಕ್ಕಾಗಿ ಉತ್ತಮ ಶಿಕ್ಷಕರ ನಿರ್ಮಾಣ ಅತ್ಯಗತ್ಯ ಎಂಬ ವಿಚಾರಕ್ಕೆ ಅವರು ಮಹತ್ವ ನೀಡಿದರು.
ಶಿಕ್ಷಕರ ವೃತ್ತಿಪರ ಸಾಮಥ್ರ್ಯವನ್ನು ಹೆಚ್ಚಿಸಲು ಕಾರ್ಯಾಗಾರಗಳು, ತರಬೇತಿ ಕಾರ್ಯಕ್ರಮಗಳು, ವಿಚಾರ ಸಂಕಿರಣಗಳು ಮತ್ತು ಶೈಕ್ಷಣಿಕ ಚಟುವಟಿಕೆಗಳು ಮಾಡಲು ಅವಕಾಶ ಮಾಡಿಕೊಟ್ಟರು. ಶಿಕ್ಷಕರಿಗೆ ಹೊಸ ಬೋಧನಾ ವಿಧಾನಗಳನ್ನು ತಿಳಿದುಕೊಳ್ಳಲು ಹಾಗೂ ಅವುಗಳನ್ನು ತರಗತಿಯಲ್ಲಿ ಅಳವಡಿಸಿಕೊಳ್ಳಲು ಸಲಹೆ ನೀಡುತ್ತಿದ್ದರು.
ಶಿಕ್ಷಕರು ಪಠ್ಯಪುಸ್ತಕದ ಜ್ಞಾನಕ್ಕೆ ಮಾತ್ರ ಸೀಮಿತವಾಗದೆ, ತಂತ್ರಜ್ಞಾನ, ಡಿಜಿಟಲ್ ಸಂಪನ್ಮೂಲಗಳು, ಸಂವಹನ ಕೌಶಲ್ಯ ಮತ್ತು ಹೊಸ ಬೋಧನಾ ವಿಧಾನಗಳನ್ನು ಬಳಸಲು ಪ್ರೇರಣೆ ನೀಡುತ್ತಿದ್ದರು. ಮಹಿಳೆಯರಿಗಾಗಿ ಶಿಕ್ಷಣ ಸಂಸ್ಥೆಗಳನ್ನು ತೆರೆದು ಮಹಿಳಾ ಶಿಕ್ಷಕರು ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ವೃತ್ತಿಜೀವನ ಅವಕಾಶ ಮಾಡಿಕೊಟ್ಟರು. ಡಾ. ಅಪ್ಪ ಅವರು ಶೈಕ್ಷಣಿಕ ಪರಂಪರೆಯಲ್ಲಿ ಶಿಕ್ಷಕರಿಗೆ ವಿಶೇಷ ಸ್ಥಾನ ನೀಡಿದ್ದರು.
ಶಿಕ್ಷಕರ ಸಾಧನೆಯನ್ನು ಗುರುತಿಸಲು ಮತ್ತು ಅವರನ್ನು ಪೆÇ್ರೀತ್ಸಾಹಿಸಲು ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗಳನ್ನು ನೀಡಿ ಗೌರವಿಸುತ್ತಿದ್ದರು. ಪಿಎಚ್.ಡಿ, ಎಂ.ಫೀಲ್ ಉನ್ನತ ಶಿಕ್ಷಣವನ್ನು ಕಲಿಯಲು ಅವಕಾಶ ಮಾಡಿಕೊಡುವುದಲ್ಲದೆ ಅವರಿಗೆ ಪೆÇ್ರೀತ್ಸಾಹಧನ ನೀಡುತ್ತಿದ್ದರು. ಶಿಕ್ಷಕರಿಗೆ ಸ್ಪೂರ್ತಿ ಮತ್ತು ಮಾರ್ಗದರ್ಶನ ಮಾಡುತ್ತಿದ್ದರು. ಶಿವಾನುಭವ ಮಂಟಪದ ಮೂಲಕ ಅನೇಕ ಶಿಕ್ಷಕರಿಗೆ ಭಾಷಣ ಮಾಡಲು ವೇದಿಕೆ ಕಲ್ಪಿಸಿಕೊಟ್ಟರು. ಶಿಕ್ಷಕರಿಗೆ ಸೇವಾ ಮನೋಭಾವ ಬೆಳೆಸಿದರು ಎಂದು ಹೇಳಿದರು.































