
ಕಲಬುರಗಿ,ಸೆ.10- ಅಖಿಲ ಕರ್ನಾಟಕ ಬೀದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಜಗನ್ನಾಥ ಎಸ್.ಸೂರ್ಯವಂಶಿ ನೆತೃತ್ವದ ನಿಯೋಗ ನೂತನ ಮೇಯರ್ ಅಜ್ಮಲ ಅಹ್ಮದ ಗೋಲಾ ಮತ್ತು ಉಪ ಮೇಯರ ಫರಹನಾ ಜಾಗಿರದಾರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾನೂನು ಬದ್ಧವಾಗಿ 2014-15 ರಲ್ಲಿ ಜಾರಿಗೆ ತರಲಾದ ಬೀದಿಬದಿ ವ್ಯಾಪಾರಿಗಳ ಕಲ್ಯಾಣ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೆ ತರಬೇಕು, ಇಲ್ಲಿನ ಬೀದಿ ವ್ಯಾಪರಸ್ಥರ ಸಮಸ್ಯೆಗಳನ್ನು ಆಲಿಸಿ ಅವುಗಳ ಪರಿಹಾರಕ್ಕೆ ತುರ್ತು ಮತ್ತು ಸೂಕ್ತ ಕ್ರಮ ಕೈಗೊಳ್ಳುವಂತೆ ಸೂರ್ಯವಂಶಿ ಅವರು, ಮೇಯರ್ ಅವರಿಗೆ ಮನವಿ ಮಾಡಿದರು.
ಲೋಕೋಪಯೋಗಿ ಇಲಾಖೆಯಿಂದ ನಿರ್ಮಾಣಗೊಂಡಿರುವ 360 ಮಳಿಗೆಗಳನ್ನು ಬೀದಿಬದಿ ವ್ಯಾಪಾರಿಗಳಿಗೆ ಹಸ್ತಾಂತರಿಸಿದ್ದಲ್ಲಿ ಪಾಲಿಕೆಗೆ ಆದಾಯ ಬರುತ್ತಿತ್ತು ಎಂದ ಅವರು, ಮಹಾನಗರದಲ್ಲಿ ಈಗಾಗಲೇ ಗುರುತಿಸಲಾದ ಪ್ರತ್ಯೇಕ ಬೀದಿವ್ಯಾಪಾರಿಗಳ ಝುನಲ್ ಗಳ ಶಡ್‍ಗಳಿಗೆ ಅಗತ್ಯ ಮೂಲ ಸೌಕರ್ಯ ಕಲ್ಪಿಸಿ, ಅಲ್ಲಿ ವ್ಯಾಪಾರ ವಹಿವಾಟು ಪ್ರಾರಂಭಿಸಲು ನೂತನ ಮೇಯರ್ ಅವರು, ಪ್ರಾಮಾಣಿಕ ಪ್ರಯತ್ನ ಮಾಡುತ್ತಾರೆ ಎಂಬ ವಿಶ್ವಾಸ ತಮಗಿದೆ ಎಂದರು.
ಸನ್ಮಾನ ಸ್ಮೀಕರಿಸಿ ಮಾತನಾಡಿದ ಮೇಯರ್ ಅಜ್ಮಲ್ ಅಹ್ಮದ ಗೊಲಾ ಅವರು, ತಮ್ಮ ನ್ಯಾಯಸಮ್ಮತವಾದ ಬೀದಿವ್ಯಾಪಾರಿಗಳ ಸಂಘದ ಬೇಡಿಕೆಗಳನ್ನು ಪರಿಶೀಲಿಸಿ ಹಂತ ಹಂತವಾಗಿ ಕಾರ್ಯರೂಪಕ್ಕೆ ತರಲಾಗುವುದು ಎಂದ ಅವರು, ದೊಡ್ಡ ವ್ಯಾಪಾರಗಳಿಗಿಂತ ಸಣ್ಣಪುಟ್ಟ ವ್ಯಾಪಾರಿಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಹಿವಾಟು ನಡೆಯುತ್ತದೆ ಇದಕ್ಕೆ ಈ ವಲಯಕ್ಕೆ ಮತ್ತಷ್ಟು ಪ್ರೋತ್ಸಹ ನೀಡಿದ್ದಲ್ಲಿ ಪಾಲಿಕೆಗೂ ಆದಾಯದ ಲಭ್ಯವಾಗಲಿದೆ ಎಂದರು.
ಹಿರಿಯ ನ್ಯಾಯವಾದಿ ಗುರುರಾಜ ತಿಳಗೊಳ ಮಾತನಾಡಿ, ನೂತನ ಮೇಯರ್ ಅಜ್ಮಲ್ ಅಹ್ಮದ ಗೋಲಾ ಅವರ ಮನೆತನ ಸಮಾಜ ಸೇವೆಯಲ್ಲಿ ತೊಡಗಿದ್ದು, ಶೋಷಿತರ ಮತ್ತು ಬಡ ಬೀದಿಬದಿ ವ್ಯಾಪಾರಸ್ಥರ ನೋವು ನಲಿವುಗಳಿಗೆ ಎಂದಿನಂತೆ ತಮ್ಮ ಸಹಾಯ ಸಹಕಾರ ಈ ಕುಟುಂಬ ನೀಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ಬೀದಿ ವ್ಯಾಪಾರಿಗಳ ಸಂಘದ ಪ್ರಮುಖರಾದ ಸಾಹೇರ ಪಟೇಲ್, ಜಗತ್ ಸಿಂಗ್, ರಾಜವೀರ ಸಿಂಗ್, ಮಹಿಬೂಬ ದರ್ವೆಶ, ಬಸವರಾಜ, ಮಹೇಶ ಸೂರ್ಯವಂಶಿ, ಗೋಪಾಲ ಗಾಡಿಕೆ, ಗುಂಡು ಸದಾನಂದ, ಚನ್ನವೀರ, ಸುನಿತಾ ಗಾಡಕೆ, ಕಲಾವತಿ ಗಂಜಲ, ರುಕ್ಮೀಣಿ, ಜಗದೇವಿ ಫಾತಿಮಾ ಶೇಖ, ಶೈನಾಜ ಶಬಾನ, ಸದಾನಂದ ನಾಗಭುಜಂಗೆ, ಬಾಬು ಶೇಖ ಪರಿಟ್ ಸೇರಿದಂತೆ ಹಲವರಿದ್ದರು.































