
ಕಲಬುರಗಿ,ಸೆ.10-ಹೋದ ವರ್ಷ ದಸರಾ ಹಬ್ಬದ ಉದ್ಘಾಟನೆ ಮಾಡುವ ಹೊತ್ತಿನಲ್ಲಿ ಮುಸ್ಲಿಂ, ದಲಿತ ಮಹಿಳೆ ಅರ್ಹಳಲ್ಲ ಎಂಬ ವಾದ ಒಂದು ವರ್ಗಕ್ಕೆ ಇತ್ತು. ಇದನ್ನು ದೂರಿಕರಿಸಿ ಅಂದಿನ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಕಳೆದ ಬಾರಿ ದಸರಾ ಉತ್ಸವಕ್ಕೆ ಬೂಕರ್ ಪ್ರಶಸ್ತಿ ಪುರಸ್ಕøತೆ ಭಾನು ಮುಷ್ತಾಕ್ ಅವರನ್ನು ಉದ್ಘಾಟಕರಾಗಿ ಆಹ್ವಾನಿಸಿದ್ದು ನಾಡಿನ ಸಾಹಿತ್ಯಿಕ ಹಿರಿಮೆಗೆ ಸಂದ ಗೌರವ ಮಾತ್ರವಲ್ಲ, ಕನ್ನಡದ ಸೃಜನಶೀಲತೆಗೆ ದೊರೆತ ಮನ್ನಣೆಯೂ ಹೌದು. ಆದರೆ ದಲಿತ ಮಹಿಳೆ ಅರ್ಹವಲ್ಲ ಎಂದು ಮಾಜಿ ಸಂಸದ ಪ್ರತಾಪಸಿಂಹ, ಶಾಸಕ ಬಸನಗೌಡ ಯತ್ನಾಳ ಸೇರಿದಂತೆ ಇತರರು ವಾದ ಮಾಡಿದ್ದರು. ಈಗ ಕಾಲ ಕೂಡಿ ಬಂದಿದೆ. ಇಂದಿನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ಸಹ ದಲಿತ ಸಾಹಿತ್ಯವು ಶತಮಾನಗಳ ಸಾಮಾಜಿಕ ಅಸಮಾನತೆಯ ನಡುವೆ ಹುಟ್ಟಿದ ಪ್ರತಿರೋಧದ ಧ್ವನಿ. ಅದು ಅಂಚಿನ ಬದುಕನ್ನು ಸಾಹಿತ್ಯದ ಕೇಂದ್ರಕ್ಕೆ ತಂದಿದೆ. ಅಂತಹ ಸಾಹಿತ್ಯದ ಮಹಿಳಾ ಪ್ರತಿನಿಧಿಯೊಬ್ಬರು ದಸರಾ ಉದ್ಘಾಟಿಸಿದರೆ, ಅದು ಕೇವಲ ಒಬ್ಬ ಸಾಹಿತಿಗೆ ನೀಡುವ ಗೌರವವಾಗುವುದಿಲ್ಲ ಸಮಾನತೆ, ಪ್ರಾತಿನಿಧ್ಯ, ಪ್ರಾದೇಶಿಕ ಮತ್ತು ಸಾಮಾಜಿಕ ನ್ಯಾಯಕ್ಕೆ ನೀಡುವ ಗೌರವವಾಗುತ್ತದೆ. ದಲಿತ ಮಹಿಳೆಯಿಂದ ದಸರಾ ಉದ್ಗಾಟನೆ ಮಾಡಿಸಿದರೆ ಇದು ಕರ್ನಾಟಕ ರಾಜ್ಯ ಮತ್ತು ದೇಶಕ್ಕೆ ದಿಕ್ಸೂಚಿ ಆಗುತ್ತದೆ ಎಂದು ಯುವ ಲೇಖಕ ಡಾ.ಕೈಲಾಸ ಡೋಣಿ ತಿಳಿಸಿದ್ದಾರೆ.































