
ಚೆನ್ನೈ, ಮೇ ೪- ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ದ್ರಾವಿಡ ಪಕ್ಷಗಳನ್ನು ಹಿಂದಿಕ್ಕಿ ನಟ ವಿಜಯ್ ನೇತೃತ್ವದ ಟಿವಿಕೆ ಪಕ್ಷ ವಿಜಯದ ಪತಾಕೆ ಹಾರಿಸಿದ್ದು, ನಟ ವಿಜಯ್ ರಾಜಕೀಯ ರಂಗದಲ್ಲೂ ಯಶಸ್ಸು ಸಾಧಿಸಿದ್ದಾರೆ. ಇದೇ ಮೊದಲ ಬಾರಿಗೆ ತಮಿಳುನಾಡು ಇತಿಹಾಸದಲ್ಲಿ ದ್ರಾವಿಡ ಹಾಗೂ ಕಾಂಗ್ರೆಸ್‌ನ್ನು ಹೊರತುಪಡಿಸಿ ಮೂರನೇ ರಾಜಕೀಯ ಶಕ್ತಿ ಉದಯಿಸಿದೆ. ನಟ ವಿಜಯ್ ತಮಿಳುನಾಡಿನ ಹೊಸ ‘ಜನ ನಾಯಕ’ರಾಗಿ ಹೊರಹೊಮ್ಮಿದ್ದಾರೆ.
ತಮಿಳುನಾಡಿನಲ್ಲಿ ಆಡಳಿತ ವಿರೋಧಿ ಹಾಗೂ ನಟ ವಿಜಯ್ ಅವರ ಜನಪ್ರಿಯತೆಯ ಅಲೆಯಲ್ಲಿ ಆಡಳಿತಾರೂಢ ಡಿಎಂಕೆ ಕೊಚ್ಚಿಹೋಗಿ ಚುನಾವಣೆಯಲ್ಲಿ ನೆಲಕಚ್ಚಿದೆ.
ತಮಿಳುನಾಡಿನಲ್ಲಿ ಆಡಳಿತಾರೂಢ ಡಿಎಂಕೆ ಪಕ್ಷ ಮತ್ತೆ ಅಧಿಕಾರ ಹಿಡಿಯುತ್ತೇವೆ ಎಂಬ ಮತಗಟ್ಟೆ ಸಮೀಕ್ಷೆಗಳು ಹುಸಿಯಾಗಿದ್ದು ಡಿಎಂಕೆಗೆ ತೀವ್ರ ಮುಖಭಂಗವಾಗಿದ್ದು ಚುನಾವಣೆಯಲ್ಲಿ ಹೀನಾಯ ಸೋಲಿಗೆ ಒಳಗಾಗಿದೆ. ತಮಿಳುನಾಡಿನಲ್ಲಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ಮತ್ತೆ ಅಧಿಕಾರ ಹಿಡಿಯುವ ಎಐಎಡಿಎಂಕೆ ಕನಸಿಗೆ ವಿಜಯ್ ಅಡ್ಡಗಾಲು ಹಾಕಿದ್ದು ಎಐಎಡಿಎಂಕೆ ಸಹ ಅಧಿಕಾರ ಹಿಡಿಯುವಲ್ಲಿ ವಿಫಲವಾಗಿದೆ.

ತಮಿಳುನಾಡಿನಲ್ಲಿ ನಟ ವಿಜಂiiನ್ ರವರ ಟಿವಿಕೆ ಪಕ್ಷದಿಂದ ಅಭ್ಯರ್ಥಿಗಳಾದವರ ಬಹುಪಾಲು ಮಂದಿ ಪ್ರಬಲ ಜಾತಿ ಸಮುದಾಯಕ್ಕಾಗಲಿ ಸೇರಿದವರಲ್ಲ. ಬಹಳ ಮಂದಿ ಅಭ್ಯರ್ಥಿಗಳು ಜನರಿಗೆ ಪರಿಚಿತರು ಆಗಿರಲಿಲ್ಲ. ಆದರೂ ಇವೆರಲ್ಲಾ ಗೆದ್ದಿರುವುದು ನಟ ವಿಜಯನ್‌ರವರ ಜನಪ್ರಿಯತೆ ಮೇಲೆಯೇ ನಟ ವಿಜಯರವರ ಪಕ್ಷದ ಚಿಹ್ನೆಯಾದ ವಿಶಲ್‌ಗೆ ಜನ ಮತ ಹಾಕಿದ್ದಾರೆ ಹೊರತು ಅಭ್ಯರ್ಥಿಗಳ ಮುಖ ನೋಡಿ ಮತ ಹಾಕಿಲ್ಲ. ಸರ್ವವೂ ವಿಜಯ್ ಮಂiiವಾಗಿದೆ.
ತಮಿಳುನಾಡಿನ ಮತದಾರರು ದ್ರಾವಿಡ ಪಕ್ಷಗಳನ್ನು ತಿರಸ್ಕರಿಸಿ ನಟ ವಿಜಯ್ ರವರ ಟಿವಿಕೆ ಪಕ್ಷವನ್ನು ಅಪ್ಪಿಕೊಂಡಿದ್ದು ಇದೇ ಮೊದಲ ಬಾರಿಗೆ ತಮಿಳುನಾಡಿನಲ್ಲಿ ಹೊಸ ರಾಜಕೀಯ ಪಕ್ಷವೊಂದು ಅಧಿಕಾರದ ಗದ್ದುಗೆಯೇರುವ ಸನಿಹಕ್ಕೆ ಬಂದು ನಿಂತಿದೆ. ಆರಂಭಿಕ ಟ್ರೆಂಡ್‌ಗಳನ್ನು ತಮಿಳುನಾಡಿನಲ್ಲಿ ಅತಂತ್ರ ವಿಧಾನಸಭೆ ಅಸ್ತಿತ್ವಕಕ್ಕೆ ಬರುವ ಲಕ್ಷ್ಮಣಗಳು ಗೋಚರಿಸಿದೆಯಾದರೂ ಎಐಎಡಿಎಂಕೆ ನೆರವಿನೊಂದಿಗೆ ನಟ ವಿಜಯ್ ಅಧಿಕಾರ ಏರುವ ಸಾಧ್ಯತೆಗಳು ಹೆಚ್ಚಿವೆ.
ತಮಿಳುನಾಡಿನ -೨೩೪ ವಿಧಾನಸಭಾ ಕ್ಷೇತ್ರಗಳ ಪೈಕಿ ನಟ ವಿಜಯ್‌ರವರ ಟಿವಿಕೆ ಪಕ್ಷವೇ ಹೆಚ್ಚು ಸ್ಥಾನಗಳನ್ನು ಗಳಿಸಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಡಿಎಂಕೆ, ಎಐಎಡಿಎಂಕೆ ಗಳ ಗ್ಯಾರಂಟಿಗಳು ಚುನಾವಣೆಯಲ್ಲಿ ಕೆಲಸ ಮಾಡಿ ನಟ ವಿಜಯ್ ರವರ ಜನಪ್ರಿಯತೆ ಮೋಡಿಗೆ ಜನ ಶರಣಾಗಿದ್ದಾರೆ. ಎರಡು ದ್ರಾವಿಡ ಪಕ್ಷಗಳನ್ನು ಬಿಟ್ಟು ಮೂರನೇ ರಾಜಕೀಯ ಶಕ್ತಿಗೆ ಅಸ್ತು ಎಂದು ತಮಿಳುನಾಡಿನ ಜನ ಬದಲಾವಣೆಗೆ ಜೈ ಎಂದಿದ್ದಾರೆ.
ತಮಿಳುನಾಡಿನಲ್ಲಿ ಎಐಎಡಿಎಂಕೆ ಜೊತೆ ಮೈತ್ರಿ ಮಾಡಿಕೊಂಡಿದ್ದ ಬಿಜೆಪಿಗೆ ತಮಿಳುನಾಡಿನ ಜನ ಆಶೀರ್ವಾದ ಮಾಡಿಲ್ಲ. ಇಲ್ಲಿ ಬಿಜೆಪಿ ಹೆಚ್ಚಿನ ಸ್ಥಾನಗೆಲ್ಲುವಲ್ಲಿ ವಿಫಲವಾಗಿದ್ದು ದ್ರಾವಿಡ ನಾಡಿನಲ್ಲಿ ಕಮಲ ಅರಳಲಿಲ್ಲ. ಇಲ್ಲಿ ನಟ ವಿಜಯ್‌ರವರ ಪ್ರಧಾನಿ ಮೋದಿಯವರ ಜಾದೂ ಕೆಲಸ ಮಾಡಿಲ್ಲ.
ತಮಿಳುನಾಡಿನ ಫಲಿತಾಂಶದ ಸ್ಥಿತಿಗತಿಗಳ ಅವಲೋಕಿಸಿದರೆ ಮೈತ್ರಿ ಸರ್ಕಾರ ರಚನೆ ಸಾಧ್ಯತೆ ಹೆಚ್ಚಿದೆ. ಇಲ್ಲಿ ನಟ ವಿಜಯ್ ಅಧಿಕಾರ ಏರಲು ಬೇರೆ ಪಕ್ಷದ ಬೆಂಬಲ ಅವಶ್ಯವಾಗಿದೆ. ತಮಿಳುನಾಡಿನ ೨೩೪ ವಿಧಾನಸಭಾ ಕ್ಷೇತ್ರಗಳ ಪೈಕಿ ಟಿವಿಕೆ ಮತ್ತು ಮೈತ್ರಿ ಒಕ್ಕೂಟ ೧೦೮ ಸ್ಥಾನಗಳಲ್ಲಿ ಮುಂದಿದ್ದು ಬಹುಮತ ಪಡೆಯುವಷ್ಟು ಸ್ಥಾನಗಳನ್ನು ಟಿವಿಕೆ ಗಳಿಸಿಲ್ಲ. ಹಾಗಾಗಿ ತಮಿಳುನಾಡಿನಲ್ಲಿ ಮೈತ್ರಿ ಸರ್ಕಾರ ರಚನೆ ಸಾಧ್ಯತೆ ಹೆಚ್ಚಿದೆ.
ತಮಿಳಿನಾಡಿನಲ್ಲಿ ಹಾಲಿ ಸಚಿವರಲ್ಲಿ ಡಜನ್‌ಗೂ ಹೆಚ್ಚು ಮಂತ್ರಿಗಳು ಸೋತಿದ್ದಾರೆ. ಮುಖ್ಯಮಂತ್ರಿ ಸ್ಟಾಲಿನ್, ಹಾಗೂ ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಮುನ್ನಡೆ ಸಾಧಿಸಿದ್ದು, ಮುಂದಿನ ಮುಖ್ಯಮಂತ್ರಿಯಾಗುವ ನಟ ವಿಜಯ್ ಸಹ ಮುನ್ನಡೆ ಸಾಧಿಸಿದ್ದಾರೆ. ಎಐಎಡಿಎಂಕೆ ಎಡಪ್ಪಾಡಿ ಪಳಣಿಸ್ವಾಮಿ ಮುನ್ನಡೆ ಸಾಧಿಸಿದ್ದು ಡಿಎಂಕೆಯ ಹಲವು ಹಾಲಿ ಶಾಸಕರು ಸಹ ಸೋತಿದ್ದಾರೆ.
ಟಿವಿಕೆ ಪ್ರತಿಕ್ರಿಯೆ
ತಮಿಳುನಾಡು ವಿಧಾನಸಭಾ ಚುನಾವಣೆಯ ಗೆಲುವಿನ ಬಗ್ಗೆ ಪ್ರತಿಕ್ರಿಯಿಸಿರುವ ನಟ ವಿಜಯ್‌ರವರ ಟಿವಿಕೆ ಪಕ್ಷದ ನಾಯಕ ಫೆಲಿಕ್ಷ್ ಜೆರಾಲ್ಡ್ ತಮಿಳುನಾಡಿನಲ್ಲಿ ಟಿವಿಕೆ ಪಕ್ಷ ಸರ್ಕಾರ ರಚಿಸಲಿದೆ ಎಂದಿದ್ದಾರೆ.
ಟಿವಿಕೆ ಈಗ ಹೆಚ್ಚಿನ ಸ್ಥಾನ ಗೆದ್ದಿದೆ. ತಮಿಳುನಾಡಿನಲ್ಲಿ ಜನ ಬದಲಾವಣೆ ಬಯಿಸಿದ್ದಾರೆ. ವಿಜಯ್ ತಮಿಳುನಾಡಿನ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಅವರು ಹೇಳಿದ್ದಾರೆ.

























