
ಕಲಬುರಗಿ,ಜೂ.19-ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (ಕೆಕೆಸಿಸಿಐ), ಕಲಬುರಗಿ, ಕೇಂದ್ರೀಯ ವಿಶ್ವವಿದ್ಯಾಲಯ (ಸಿಯುಕೆ) ಹಾಗೂ ಸ್ವದೇಶಿ ಜಾಗರಣ ಮಂಚ್ ಸಂಯುಕ್ತ ಆಶ್ರಯದಲ್ಲಿ “ವ್ಯಾಪಾರಿ ಸಂವಾದ” ಕಾರ್ಯಕ್ರಮವನ್ನು ಕೆಕೆಸಿಸಿಐ ಸಭಾಂಗಣದಲ್ಲಿ ಆಯೋಜಿಸಲಾಯಿತು.
ಕಾರ್ಯಕ್ರಮವನ್ನು ಕೆಕೆಸಿಸಿಐ ಗೌರವ ಕಾರ್ಯದರ್ಶಿ ಶಿವರಾಜ್ ವಿ. ಇಂಗಿನಶೆಟ್ಟಿ ಅವರು ಸ್ವಾಗತಿಸಿ, ಅತಿಥಿಗಳನ್ನು ಹಾಗೂ ವಿವಿಧ ವ್ಯಾಪಾರ ಸಂಘಗಳ ಪದಾಧಿಕಾರಿಗಳು, ಉದ್ಯಮಿಗಳು ಮತ್ತು ಸದಸ್ಯರನ್ನು
ಬರಮಾಡಿಕೊಂಡರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಸ್ವದೇಶಿ ವ್ಯಾಪಾರಿ ಮಂಚ್ ರಾಷ್ಟ್ರೀಯ ಸಹ ಸಂಯೋಜಕ ಮನೋಹರ್ ಅಗರವಾಲ್ ಅವರು ಮಾತನಾಡಿ, ಇ-ಕಾಮರ್ಸ್ ಹಾಗೂ ಕ್ವಿಕ್ ಕಾಮರ್ಸ್ ಕಂಪನಿಗಳಿಂದ ದೇಶದ ಸಾಂಪ್ರದಾಯಿಕ ವ್ಯಾಪಾರಿಗಳು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ ಎಂದು ಹೇಳಿದರು. ದೇಶದ ಆರ್ಥಿಕತೆ ಹಾಗೂ ಉದ್ಯೋಗ ಸೃಷ್ಟಿಯ ಬೆನ್ನೆಲುಬಾಗಿರುವ ಸಣ್ಣ ವ್ಯಾಪಾರಿಗಳು ಇಂದಿನ ನೀತಿಗಳಿಂದ ಹಿನ್ನಡೆ ಅನುಭವಿಸುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ವ್ಯಾಪಾರ ಕುಟುಂಬಗಳ ಮುಂದಿನ ಪೀಳಿಗೆಯವರು ಕುಟುಂಬದ ವ್ಯಾಪಾರ ಮುಂದುವರಿಸುವ ಬದಲು ಉದ್ಯೋಗಗಳತ್ತ ಮುಖ ಮಾಡುತ್ತಿರುವುದು ಚಿಂತಾಜನಕ ಬೆಳವಣಿಗೆಯಾಗಿದೆ. ಪೆÇೀಷಕರು ತಮ್ಮ ಮಕ್ಕಳಿಗೆ
ವ್ಯಾಪಾರದ ಬಗ್ಗೆ ಸಕಾರಾತ್ಮಕವಾಗಿ ಮಾತನಾಡಿ, ಅವರನ್ನು ವ್ಯಾಪಾರ ಕ್ಷೇತ್ರಕ್ಕೆ ಪೆÇ್ರೀತ್ಸಾಹಿಸಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಅವರು ಸೂರತ್‍ನ ಖ್ಯಾತ ಉದ್ಯಮಿ ಸವ್ಜಿ ಭಾಯಿ ಧೋಳಕಿಯಾ ಅವರ ಉದಾಹರಣೆ ನೀಡಿ, ಕೇವಲ ?12.50 ಹಣದೊಂದಿಗೆ ಜೀವನ ಆರಂಭಿಸಿ ಇಂದು ಹರಿಕೃಷ್ಣ ಡೈಮಂಡ್ಸ್ ಸಂಸ್ಥೆಯನ್ನು ಜಾಗತಿಕ ಮಟ್ಟಕ್ಕೆ ಬೆಳೆಸಿದ್ದಾರೆ ಎಂದು ಹೇಳಿದರು. ತಮ್ಮ ಮಗನನ್ನು ಕೇರಳಕ್ಕೆ ಕಳುಹಿಸಿ ಸಾಮಾನ್ಯ ಜನರು ಹಾಗೂ ವ್ಯಾಪಾರಿಗಳು ಎದುರಿಸುವ ಕಷ್ಟಗಳನ್ನು ಅರಿಯುವಂತೆ ಮಾಡಿದ ಘಟನೆಯನ್ನು ಉಲ್ಲೇಖಿಸಿದರು.
ಅದೇ ರೀತಿ ನಿರ್ಮಾ ಸಂಸ್ಥಾಪಕ ಕರ್ಸನ್‍ಭಾಯಿ ಪಟೇಲ್ ಅವರ ಯಶೋಗಾಥೆಯನ್ನು ವಿವರಿಸಿದ ಅವರು, ಗುಣಮಟ್ಟ ಹಾಗೂ ಜನರ ನಂಬಿಕೆಯ ಮೂಲಕ ಒಂದು ಬ್ರ್ಯಾಂಡ್‍ನ್ನು ಹೇಗೆ ಬೆಳೆಸಬಹುದು ಎಂಬುದನ್ನು ತಿಳಿಸಿದರು.
ಕಾಲಾನುಗುಣವಾಗಿ ಬದಲಾಗುವ ತಂತ್ರಜ್ಞಾನ, ಗ್ರಾಹಕರ ಮನೋಭಾವ ಹಾಗೂ ಸರ್ಕಾರಿ ನೀತಿಗಳಿಗೆ ಅನುಗುಣವಾಗಿ ವ್ಯಾಪಾರಿಗಳು ತಮ್ಮನ್ನು ತಾವು ಬದಲಿಸಿಕೊಳ್ಳಬೇಕು. ಆಗ ಮಾತ್ರ ವ್ಯಾಪಾರ ಕ್ಷೇತ್ರದಲ್ಲಿ
ಉಳಿಯಲು ಮತ್ತು ಬೆಳೆಯಲು ಸಾಧ್ಯ ಎಂದು ಹೇಳಿದರು.
ಸ್ವದೇಶಿ ವ್ಯಾಪಾರಿ ಮಂಚ್‍ನೊಂದಿಗೆ ವಿವಿಧ ವ್ಯಾಪಾರ ಸಂಘಗಳು ಕೈಜೋಡಿಸುವಂತೆ ಆಹ್ವಾನಿಸಿದ ಅವರು, ಸ್ಥಳೀಯ ಮಟ್ಟದಲ್ಲಿ ವ್ಯಾಪಾರಿಗಳು ಎದುರಿಸುತ್ತಿರುವ ಸಮಸ್ಯೆಗಳು ಹಾಗೂ ನೀತಿ ಸಂಬಂಧಿತ ವಿಚಾರಗಳನ್ನು ಒಗ್ಗಟ್ಟಿನಿಂದ ಸರ್ಕಾರದ ಗಮನಕ್ಕೆ ತರಲು ಸಾಧ್ಯವಾಗುತ್ತದೆ ಎಂದರು.
ಚರ್ಚೆಯಲ್ಲಿ ಭಾಗವಹಿಸಿದ ಧಾನ್ಯ ಮತ್ತು ಬೀಜ ವ್ಯಾಪಾರಿಗಳ ಸಂಘದ ಅಧ್ಯಕ್ಷ ಸಂತೋಷ್ ಲಂಗರ್ ಮಾತನಾಡಿ, “ಖಾನಾ ವಿದೇಶಿ, ಪಹೇನಾ ಸ್ವದೇಶಿ” ಎಂಬ ಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು. ಆಹಾರ
ಧಾನ್ಯಗಳು ಹಾಗೂ ಕೃಷಿ ಉತ್ಪನ್ನಗಳ ಆಮದು ಹೆಚ್ಚುತ್ತಿರುವುದರಿಂದ ರೈತರು ಮತ್ತು ವ್ಯಾಪಾರಿಗಳಿಗೆ ತೊಂದರೆಯಾಗುತ್ತಿದ್ದು, ಮಾರುಕಟ್ಟೆ ಬೆಲೆಗಳು ಕನಿಷ್ಠ ಬೆಂಬಲ ಬೆಲೆ (ಎಂಎಸ್‍ಪಿ) ಗಿಂತ ಕೆಳಮಟ್ಟಕ್ಕೆ ಇಳಿಯುತ್ತಿವೆ
ಎಂದು ತಿಳಿಸಿದರು.
ಭಾರತದಲ್ಲೇ ಉತ್ಪಾದನೆಯಾಗುವ ಕೃಷಿ ಉತ್ಪನ್ನಗಳ ಆಮದನ್ನು ನಿಯಂತ್ರಿಸುವಂತಹ ನೀತಿಗಳನ್ನು ಜಾರಿಗೊಳಿಸಬೇಕೆಂದು ಅವರು ಸರ್ಕಾರವನ್ನು ಆಗ್ರಹಿಸಿದರು.
ಸಭೆಯಲ್ಲಿ ಇ-ಕಾಮರ್ಸ್, ಕ್ವಿಕ್ ಕಾಮರ್ಸ್, ಕೃಷಿ, ಆಮದು ನೀತಿಗಳು, ಸಣ್ಣ ವ್ಯಾಪಾರಿಗಳ ಸಮಸ್ಯೆಗಳು ಸೇರಿದಂತೆ ವಿವಿಧ ವಿಷಯಗಳ ಕುರಿತು ಸುದೀರ್ಘ ಚರ್ಚೆ ನಡೆಯಿತು. ಚರ್ಚೆಯಲ್ಲಿ ವ್ಯಕ್ತವಾದ ಅಭಿಪ್ರಾಯಗಳು ಹಾಗೂ ಸಮಸ್ಯೆಗಳ ಕುರಿತು ಸವಿಸ್ತಾರ ಮನವಿಯನ್ನು ಸ್ವದೇಶಿ ವ್ಯಾಪಾರಿ ಮಂಚ್ ಮೂಲಕ ಸರ್ಕಾರದ ಗಮನಕ್ಕೆ ತರಲು ತೀರ್ಮಾನಿಸಲಾಯಿತು.
ಕೊನೆಯಲ್ಲಿ ವಂದನಾರ್ಪಣೆ ಸಲ್ಲಿಸಿದ ಕೆಕೆಸಿಸಿಐ ಗೌರವ ಕಾರ್ಯದರ್ಶಿ ಶಿವರಾಜ್ ವಿ. ಇಂಗಿನಶೆಟ್ಟಿ ಅವರು, ಸ್ಥಳೀಯ ವ್ಯಾಪಾರಿಗಳು, ವಿತರಕರು ಹಾಗೂ ಚಿಲ್ಲರೆ ಅಂಗಡಿಗಳನ್ನು ರಕ್ಷಿಸುವಂತಹ ನೀತಿಗಳ
ಅಗತ್ಯವಿದೆ ಎಂದು ಹೇಳಿದರು. ಇ-ಕಾಮರ್ಸ್ ಹಾಗೂ ಕ್ವಿಕ್ ಕಾಮರ್ಸ್ ಕಂಪನಿಗಳು ಸ್ಥಳೀಯ ವಿತರಕರಿಂದಲೇ ಸರಕುಗಳನ್ನು ಖರೀದಿಸುವ ವ್ಯವಸ್ಥೆ ಜಾರಿಯಾಗಬೇಕು. ಇದರಿಂದ ಸ್ಥಳೀಯ ಆರ್ಥಿಕ ವ್ಯವಸ್ಥೆ ಬಲಗೊಳ್ಳುತ್ತದೆ ಹಾಗೂ ಸಣ್ಣ ವ್ಯಾಪಾರಿಗಳಿಗೆ ಹೆಚ್ಚಿನ ಅವಕಾಶಗಳು ದೊರೆಯುತ್ತವೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಕೆಕೆಸಿಸಿಐ ಉಪಾಧ್ಯಕ್ಷ ಕೇದಾರ ರಘೋಜಿ, ವ್ಯಾಪಾರ ಮತ್ತು ವ್ಯಾಪಾರ ಅದಾಲತ್ ಸಮಿತಿ ಅಧ್ಯಕ್ಷ ರಾಜಶೇಖರ ದುಕಂದಾರ್ ಹಾಗೂ ಕೇಂದ್ರ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಸಹ
ಪ್ರಾಧ್ಯಾಪಕರಾದ ಡಾ. ಬಸವರಾಜ ಎಂ.ಎಸ್. ಅಧ್ಯಕ್ಷ ಮಂಡಳಿಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ದಾಲ್ ಮಿಲ್ ಅಸೋಸಿಯೇಷನ್ ಅಧ್ಯಕ್ಷ ಚಂದ್ರಕಾಂತ್ ಕೋಬಾಳ್, ಉಪಾಧ್ಯಕ್ಷ ವಿಷುದಾಸ್ ತಾಪಾಡಿಯಾ, ಅಕ್ಕಿ ಮತ್ತು ಕಿರಾಣಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ರವೀಂದ್ರ ಮಡಂಶೆಟ್ಟಿ, ಕಪನೂರ ಕೈಗಾರಿಕಾ ಸಂಘದ ಅಧ್ಯಕ್ಷ ರವೀಂದ್ರ ಮುಕ್ಕಾ, ಧಾನ್ಯ ಮತ್ತು ಬೀಜ ವ್ಯಾಪಾರಿಗಳ ಸಂಘದ ಅಧ್ಯಕ್ಷ ಸಂತೋಷ್ ಲಂಗರ್, ಶಿವಕುಮಾರ ಬೆಳ್ಳಿ, ಆನಂದ ಚಿಂಚೂರಿ, ಬಸವರಾಜ ಸೋಮನಮರಡಿ,
ಕೆಕೆಸಿಸಿಐ ಸದಸ್ಯರಾದ ರವಿಶಂಕರ್ ಜಮಧಾರಖಾನಿ ಅಭಿಜಿತ್ ಪಡಶೆಟ್ಟಿ, ರಾಹುಲ್ ತೆಂಗ್ಲಿ, ಜಗದೀಶ್ ಪಾಟೀಲ್, ಸಂದೀಪ್ ಮಿಶ್ರಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.






















