
ಯಡ್ರಾಮಿ,ಜೂ.19-ಲಂಚದ ಸ್ವೀಕರಿಸುತ್ತಿದ್ದ ಯಡ್ರಾಮಿ ಠಾಣೆ ಪಿಎಸ್‍ಐ ವಿಶ್ವನಾಥ ಮುದರೆಡ್ಡಿ ಹಾಗೂ ಎಸ್‍ಬಿ ಸಿಬ್ಬಂದಿ ಸಿದ್ದಣ್ಣ ಬಿರಾದಾರ ಅವರು ಲೋಕಾಯುಕ್ತರ ಬಲೆಗೆ ಬಿದ್ದ ಘಟನೆ ಯಡ್ರಾಮಿ ಪೆÇೀಲಿಸ್ ಠಾಣೆ ಆವರಣದಲ್ಲಿ ಗುರುವಾರ ರಾತ್ರಿ ನಡೆದಿದೆ.
ಅಕ್ಕಿ ವ್ಯಾಪಾರಕ್ಕೆ ಸಂಬಂಧಿಸಿದಂತೆ ಸಹಕಾರ ನೀಡುವುದಾಗಿ ಆನಂದ್ ಕುಸ್ತಿ ಎಂಬುವವರಿಗೆ ಹಣದ ಬೇಡಿಕೆ ಇಟ್ಟಿದ್ದರು. ಆಗ ಕಳೆದ 12ರಂದು ಫೆÇೀನ್ ಪೇ ಮೂಲಕ 20,000ರೂ.ಗಳನ್ನು ಪಡೆದಿದ್ದರು. ಮತ್ತೆ 30,000ರೂ.ಗಳಿಗೆ ಬೇಡಿಕೆ ಇಟ್ಟಿದ್ದು ಅದರಲ್ಲಿ 20,000ರೂ.ಗಳನ್ನು ಯಡ್ರಾಮಿ ಪೆÇೀಲಿಸ್ ಠಾಣೆಯ ಆವರಣದಲ್ಲಿ ಗುರುವಾರ ರಾತ್ರಿ ಪಡೆಯುವಾಗ ಲೋಕಾಯುಕ್ತರು ದಾಳಿ ಮಾಡಿ ಇಬ್ಬರನ್ನೂ ಬಂಧಿಸಿದರು.
ಲೋಕಾಯುಕ್ತ ಎಸ್‍ಪಿ ಸಿದ್ದರಾಜು ಅವರ ಮಾರ್ಗದರ್ಶನದಲ್ಲಿ ಇನ್‍ಸ್ಪೆಕ್ಟರ್ ಅರುಣ್ ಮರಗುಂಡಿ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಿಬ್ಬಂದಿ ಮಲ್ಲಿನಾಥ, ರಾನೋಜಿ ಬಸವರಾಜ್ ಅವರೂ ಸೇರಿದಂತೆ ಇತರ ಅಧಿಕಾರಿಗಳು ಭಾಗವಹಿಸಿದ್ದರು.
ವಿಚಿತ್ರ ಸಂಗತಿಯೆಂದರೆ, ಗಂಭೀರ ಪ್ರಕರಣಗಳಲ್ಲಿ ಹಾಗೂ ಆರೋಪಿಗಳ ಬಂಧನದಲ್ಲಿ ತೋರಿದ ಕಾರ್ಯಕ್ಷಮತೆಗಾಗಿ ಪಿಎಸ್‍ಐ ವಿಶ್ವನಾಥ ಮುದರೆಡ್ಡಿ ಅವರು 2024-25ನೇ ಸಾಲಿನಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಚಿನ್ನದ ಪದಕವನ್ನು ಪಡೆದಿದ್ದರು.
ಬಂಧಿತ ಆರೋಪಿಗಳನ್ನು ನಗರದ ಐವಾನ್ ಶಾಹಿ ಅತಿಥಿಗೃಹದ ಆವರಣದಲ್ಲಿ ಇರುವ ಲೋಕಾಯುಕ್ತರ ಕಚೇರಿಗೆ ಕರೆತಂದು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಅಧಿಕೃತ ಮೂಲಗಳು ಹೇಳಿವೆ.






















