ಕಲಬುರಗಿ: ರಾಜ್ಯ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿಯ ಅಭ್ಯರ್ಥಿಗಳಾದ ರಘು ಕೌಟಿಲ್ಯ ,ಲಿಂಗರಾಜ ಪಾಟೀಲ ಅವರು ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಇಂದು ನಗರದ ಸರದಾರ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಬಿಜೆಪಿ ಮುಖಂಡರು,ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.ಅಂಬಾರಾಯ ಅಷ್ಟಗಿ,ದೇವೀಂದ್ರ ದೇಸಾಯಿ ಕಲ್ಲೂರ,ಅವ್ವಣ್ಣ ಮ್ಯಾಕೇರಿ,ಸಂತೋಷ ಹಾದಿಮನಿ,ಧರ್ಮಣ್ಣ ಇಟಗಾ ಅವರು ಸೇರಿದಂತೆ ಹಲವರು ಪಾಲ್ಗೊಂಡರು.