
ಕಲಬುರಗಿ,ಜೂ.19-ಕನಿಷ್ಟ ವೇತನ ಜಾರಿಗಾಗಿ, ಬಾಕಿ ವೇತನಕ್ಕಾಗಿ, ವಾರದ ರಜೆ ಕಡ್ಡಾಯವಾಗಿ ಕೊಡಲು ಒತ್ತಾಯಿಸಿ ಕರ್ನಾಟಕ ರಾಜ್ಯ ಸರಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಜಿಲ್ಲಾ ಪಂಚಾಯತ ಕಚೇರಿ ಮುಂದೆ ಇಂದು ಧರಣಿ ಸತ್ಯಾಗ್ರಹ ನಡೆಸಲಾಯಿತು.
ಸಮಾಜ ಕಲ್ಯಾಣ ಇಲಾಖೆ: ಕ್ರೈಸ್ತ್ ಇಲಾಖೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವಸತಿ ನಿಲಯಗಳಲ್ಲಿ ದುಡಿಯುತ್ತಿರುವ ಹೊರಗುತ್ತಿಗೆ ನೌಕರರಿಗೆ ಸರಕಾರ ನಿಗದಿ ಪಡಿಸಿದ ಕನಿಷ್ಟ ವೇತನ 2026 ಏಪ್ರಿಲ್ 1 ರಿಂದಲೇ ಜಾರಿ ಮಾಡಬೇಕು, ಸಮಾಜ ಕಲ್ಯಾಣ ಇಲಾಖೆಯಲ್ಲಿ ಬಾಕಿ ಇರುವ 34 ತಿಂಗಳಿಂದ ವೇತನ ಕೂಡಲೇ ಪಾವತಿಸಬೇಕು, ವಾರಕ್ಕೊಂದು ರಜೆ ಕೂಡಲೇ ಜಾರಿ ಮಾಡಬೇಕು, ಹೊಸದಾಗಿ ಪ್ರಾರಂಭಿಸುವ ವಸತಿ ನಿಲಯಗಳಲ್ಲಿ ಈ ಹಿಂದೆ ಸೇವೆ ಸಲ್ಲಿಸಿರುವ ನೌಕರರಿಗೆ ಪುನ: ಕೆಲಸಕ್ಕೆ ತೆಗೆದುಕೊಳ್ಳಬೇಕು, ವೇತನ ಹೆಚ್ಚಳವಾಗಿದ್ದರಿಂದ ನೌಕರರ ಮೇಲೆ ಕಿರುಕುಳ ಸುಳ್ಳು ಆರೋಪ ಹೊರಿಸಿ ಕೆಲಸದಿಂದ ತೆಗೆಯುತ್ತಿರುವ ಅಧಿಕಾರಿಗಳ ಮೇಲೆ ಶಿಸ್ತುಕ್ರಮ ಜರುಗಿಸಬೇಕು ಎಂದು ಆಗ್ರಹಿಸಲಾಯಿತು.
ಸಂಘದ ರಾಜ್ಯಾಧ್ಯಕ್ಷ ಭೀಮಶೆಟ್ಟಿ ಯಂಪಳ್ಳಿ, ಜಿಲ್ಲಾ ಕಾರ್ಯದರ್ಶಿ ಮಹ್ಮದ್ ಜಮಿರೋದ್ದಿನ್ ಬಾಬಾ, ಉಪಾಧ್ಯಕ್ಷ ಮೇಘರಾಜ ಕಠಾರೆ, ಎಐಎಡಬ್ಲ್ಯೂಯು ಜಿಲ್ಲಾ ಕಾರ್ಯದರ್ಶಿ ಮಲ್ಲಮ್ಮ ಕೋಡ್ಲಿ, ಜಿಲ್ಲಾಧ್ಯಕ್ಷ ಕಲ್ಯಾಣಿ ಪೂಜಾರಿ, ಸಹ ಕಾರ್ಯದರ್ಶಿ ಪರಶುರಾಮ ಹಡಲಗಿ, ನರಸಮ್ಮ ಕೊಂಡಂಪಳ್ಳಿ, ಬಾಬು ಹೊಸಮನಿ, ಮಾಪಣ್ಣ, ನರಸಮ್ಮ ಚಂದನಕೇರಾ, ಶಿವರಾಜ ಆಡಕಿ, ನಾಗರಾಜ ಕಟ್ಟಿಮನಿ, ನಾಗರತ್ನ ಮದನಕರ, ಅಲ್ಲಾ ಪಟೇಲ್ ವಾಡಿ, ಲಕ್ಷ್ಮೀಪುತ್ರ ಸೇರಿದಂತೆ ಮತ್ತಿತರರು ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದರು.






















