Home ಜಿಲ್ಲೆ ಕೆಪಿಸಿಸಿ ನೂತನ ಅಧ್ಯಕ್ಷ ಬಿ. ಕೆ. ಹರಿಪ್ರಸಾದ್ ಅಧಿಕಾರ ಸ್ವೀಕಾರ ಸಮಾರಂಭಕ್ಕೆ ತೆರಳಲು ವಿಜಯಪುರ ಕಾಂಗ್ರೆಸ್ಸಿಗರ...

ಕೆಪಿಸಿಸಿ ನೂತನ ಅಧ್ಯಕ್ಷ ಬಿ. ಕೆ. ಹರಿಪ್ರಸಾದ್ ಅಧಿಕಾರ ಸ್ವೀಕಾರ ಸಮಾರಂಭಕ್ಕೆ ತೆರಳಲು ವಿಜಯಪುರ ಕಾಂಗ್ರೆಸ್ಸಿಗರ ನಿರ್ಧಾರ

ಸಂಜೆವಾಣಿ ವಾರ್ತೆ,
ವಿಜಯಪುರ, ಜೂ. ೧೮:ಕೆ.ಪಿ.ಸಿ.ಸಿ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಬಿ. ಕೆ. ಹರಿಪ್ರಸಾದ ಅವರ ಅಧಿಕಾರ ಸ್ವೀಕಾರ ಸಮಾರಂಭಕ್ಕೆ ತೆರಳುವ ಕುರಿತು ಬುಧವಾರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪೂರ್ವಭಾವಿ ಸಭೆ ಜರುಗಿತು.
ವಿಜಯಪುರ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಅವರ ನೇತೃತ್ವದಲ್ಲಿ ಪೂರ್ವಭಾವಿ ಸಭೆ ನಡೆಯಿತು.
ಕೆಪಿಸಿಸಿ ನೂತನ ಅಧ್ಯಕ್ಷ ಹರಿಪ್ರಸಾದ ಅವರ ಅಧಿಕಾರ ಸ್ವೀಕಾರ ಸಮಾರಂಭಕ್ಕೆ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ತೆರಳುವ ವ್ಯವಸ್ಥೆ ಮಾಡಲಾಗುವುದು ಹಾಗೂ ಯಾವರೀತಿ ಹೋಗಬೇಕೆಂದು ಸವಿಸ್ತಾರವಾಗಿ ತಿಳಿಸಿದರು.
ನಂತರ ಇಂದು ಕರ್ನಾಟಕದಲ್ಲಿ ಎಸ್.ಆರ್.ಆಯ್. ಕುರಿತು ಚರ್ಚಿಸುತ್ತಾ ಎಲ್ಲ ಬ್ಲಾಕ್ ಅಧ್ಯಕ್ಷರಿಂದ ಮಾಹಿತಿ ಪಡೆಯಲಾಯಿತು. ಎಲ್ಲ ಬ್ಲಾಕ್ ಅಧ್ಯಕ್ಷರು ತಮ್ಮ ಅಭಿಪ್ರಾಯವನ್ನು ಹೇಳಿದರು.
ಈ ಸಂದರ್ಭದಲ್ಲಿ ಮಹ್ಮದರಫೀಕ ಟಪಾಲ, ಗಂಗಾಧರ ಸಂಬಣ್ಣಿ, ಉಪಾಧ್ಯಕ್ಷ ವೈಜನಾಥ ಕರ್ಪೂರಮಠ, ನಗರ ಬ್ಲಾಕ್ ಅಧ್ಯಕ್ಷ ಜಮೀರ ಬಕ್ಷಿ, ಜಲನಗರ ಬ್ಲಾಕ್ ಅಧ್ಯಕ್ಷೆ ಆರತಿ ಶಾಹಪೂರ, ಎಸ್. ಎಂ. ಪಾಟೀಲ (ಗಣಿಯಾರ), ಆಫ್ತಾಬಕಾದ್ರಿ ಇನಾಮದಾರ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಚಾಂದಸಾಬ ಗಡಗಲಾವ, ಸುಭಾಸ ಛಾಯಾಗೋಳ ವಕೀಲರು, ಮಹಾದೇವಿ ಗೋಕಾಕ, ಐ. ಎಂ. ಇಂಡಿಕರ, ಮಹಿಳಾ ಅಧ್ಯಕ್ಷೆ ರಮೀಜಾ ನದಾಫ, ಬ್ಲಾಕ್ ಅಧ್ಯಕ್ಷರಾದ ಶಾಹಜಾನ ಮುಲ್ಲಾ, ಸುರೇಶ ಹಾರಿವಾಳ, ರಫೀಕ ಪಕಾಳಿ, ಈರನಗೌಡ ಬಿರಾದಾರ, ಸಿದ್ದು ಗೌಡಣ್ಣವರ, ಬಶೀರ ಶೇಠ ಅಂಗಘಟಕದ ಅಧ್ಯಕ್ಷರಾದ ಆನಂದ ಜಾಧವ, ಶಕೀಲ ಬಾಗಮಾರೆ, ಕೃಷ್ಣಾ ಕಾಮಟೆ, ಸರಫರಾಜ ಮಿರ್ದೆ, ಬಾಪುಗೌಡ ಪಾಟೀಲ, ಅಬ್ದುಲಪೀರಾಂ ಜಮಖಂಡಿ, ಜಮೀರ ಬಾಂಗಿ, ಲಾಲಸಾಬ ಕೋರಬು, ಬೀರಪ್ಪ ಜುಮನಾಳ, ಎಂ. ಬಿ. ಮೆಂಡೆಗಾರ, ರಾಘವೇಂದ್ರ ವಡವಡಗಿ, ಹರೀಶ ಕೌಲಗಿ, ಶಾಹಜಾನ ಧುಂದಸಿ, ವಿಜಯಕುಮಾರ ಘಾಟಗೆ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಎಂ. ಎಂ. ಮುಲ್ಲಾ, ವಸಂತ ಹೊನಮೋಡೆ, ದೇಸು ಚವ್ಹಾಣ, ಝಾಕೀರ ಮುಲ್ಲಾ, ಹಾಜಿಲಾಲ ದಳವಾಯಿ, ಅಷ್ಪಾಕ ಮನಗೂಳಿ, ಮಂಜುಳಾ ಗಾಯಕವಾಡ, ಭಾರತಿ ನಾವಿ, ಲಕ್ಷ್ಮಿ ಶಿವಣಗಿ, ಶಮೀಮಾ ಅಕ್ಕಲಕೋಟ, ಬಾಬು ಯಾಳವಾರ, ಕೈಸರ ಇನಾಮದಾರ, ವಿಶ್ವನಾಥ ತಳವಾರ, ಸಾಜೀದಹುಸೇನ ರಿಸಾಲದಾರ, ಎಜಾಜಹ್ಮದ ಮುಕಬಿಲ್, ಎಂ. ಬಿ. ಮೆಂಡೆಗಾರ, ಎಂ. ಐ. ಮುದಗಲ್, ರಜಾಕ ಕಾಖಂಡಕಿ, ಡಾ. ಜಿ. ಎಸ್. ಮಾಲಿಪಾಟೀಲ, ನಾಗೇಶ ತಾಳಿಕೋಟಿ, ಕಲ್ಲಪ್ಪ ತಬಶೆಟ್ಟಿ, ಅಂಬಣ್ಣ ಕಲಮಣಿ, ಸಿದ್ದು ಹಡಪದ, ಪರಶುರಾಮ ಹೊಸಮನಿ, ಖ್ವಾಜಾ ಬೇಪಾರಿ, ಗೌಸ ಮುಜಾವರ, ಶಕೀಲ ಗಡೇದ, ಇರ್ಷಾದ ಆಸಂಗಿ, ತಾಜುದ್ದೀನ ಖಲೀಫಾ, ಎಂ. ಎಂ. ಎ. ಬಕ್ಷಿ, ಶೃತಿ ಕಲಾದಗಿ, ಸವಿತಾ ಧನರಾಜ, ಗುಲಾಬ ಚವ್ಹಾಣ ಹಾಗೂ ಇತರ ಕಾರ್ಯಕರ್ತರು ಉಪಸ್ಥಿತರಿದ್ದರು.