Home ಜಿಲ್ಲೆ ಕಲಬುರಗಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ನೇರ ಪ್ರಶ್ನೆಗಳಿಗೆ ಆರ್.ಎಸ್.ಎಸ್ ಮಾತ್ರ ಉತ್ತರಿಸಲಿ: ಜಗದೇವ ಗುತ್ತೇದಾರ

ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ನೇರ ಪ್ರಶ್ನೆಗಳಿಗೆ ಆರ್.ಎಸ್.ಎಸ್ ಮಾತ್ರ ಉತ್ತರಿಸಲಿ: ಜಗದೇವ ಗುತ್ತೇದಾರ

ಕಲಬುರಗಿ,ಜೂ.18- ಗೃಹ ಸಚಿವ ಪ್ರಿಯಾಂಕ ಖರ್ಗೆ ಅವರು, ಆರ್.ಎಸ್.ಎಸ್. ಕುರಿತಾದ ನೇರ ಪ್ರಶ್ನೆಗಳಿಗೆ ಸ್ಪಸ್ಟ ಉತ್ತರ ನೀಡುವಂತೆ ಕಲಬುರಗಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಜಗದೇವ ಗುತ್ತೇದಾರ ಕಾಳಗಿ ರವರು ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಗೃಹ ಸಚಿವರಾದ ಪ್ರಿಯಾಂಕ ಖರ್ಗೆಯವರು ಎತ್ತಿರುವ ಆರ್.ಎಸ್.ಎಸ್ ಕುರಿತಾದ ಪ್ರಶ್ನೆಗಳು ಪ್ರಸ್ತುತವಾಗಿದ್ದು, ಅದು ನೋಂದಣಿ ಮಾಡಿಸದೆ ಇರುವುದು ಮತ್ತು ಸಂಘದ ಆರ್ಥಿಕ ವ್ಯವಹಾರ ಹಾಗೂ
ಚಟುವಟಿಕೆ ಯಾವ ಮಾನದಂಡದ ಅಡಿಯಲ್ಲಿ ನಡೆಯುತ್ತಿದೆ? ಎಂಬ ಗೃಹ ಸಚಿವ ಪ್ರಶ್ನೆಗೆ ಆರ್.ಎಸ್.ಎಸ್ ಉತ್ತರಿಸಬೇಕು ಇದರಿಂದ ಸಂಘ ಪಾರದರ್ಶಕತೆ ಪ್ರದರ್ಶಿಸಬೇಕು ಎಂದು ಒತ್ತಾಯಿಸಿದ್ದಾರೆ.
ಸಚಿವರ ನೇರ ಪ್ರಶ್ನೆಗಳಿಗೆ ಉತ್ತರಿಸದೆ ಆರ್.ಎಸ್.ಎಸ್. ಉದ್ಧಾಟತನÀ ತೋರಿಸುತ್ತಿದೆ ಎಂದಿರುವ ಜಗದೇವ ಗುತ್ತೇದಾರ ಕಾಳಗಿ ರವರು, ಆರ್.ಎಸ್.ಎಸ್. ನೂರು ವರ್ಷದ ಹಿಂದೆ ಬ್ರಿಟಿಷರ ಅವಧಿಯಲ್ಲಿ ಸ್ಥಾಪನೆಯಾಗಿದೆ. ಸಂಘ ನೋಂದಣಿಯಾಗದಿರುವ ಬಗ್ಗೆ ಸಚಿವರು ಪ್ರಶ್ನಿಸಿದರೆ ಅದಕ್ಕೆ ಆರ್.ಎಸ್.ಎಸ್. ಮಾತ್ರ ಉತ್ತರಿಸಬೇಕು ಅದು ಬಿಟ್ಟು ಸಂಘ ಪರಿವಾರದ ಹಿಂಬಾಲಕರು ಹಾಗೂ ಬಿಜೆಪಿ ನಾಯಕರು ಸಚಿವರ ವಿರುದ್ಧ ಸೋಷಿಯಲ್ ಮಿಡಿಯಾದಲ್ಲಿ ಅಸಭ್ಯ ಭಾಷೆಗಳಿಂದ ನಿಂದಿಸುತ್ತಿರುವುದು ಖಂಡನೀಯ.ಪ್ರಜಾತಂತ್ರ ವ್ಯವಸ್ಥೆಯಲ್ಲಿ ಸಂವಿಧಾನದ ಅಡಿಯಲ್ಲಿ ಸಂಘಗಳು ನೋಂದಣಿಯಾಗಬೇಕು ಎಂದು ಆಗ್ರಹಿಸುವುದು ಸರಿಯಾದ ಕ್ರಮ. ಆದರೆ ಸಚಿವರ ವಿರುದ್ಧ ಸಂಘ ಪರಿವಾರದ ನಾಯಕರ ನಿಂದನೆಗಳು ಕಾನೂನು ಬಾಹಿರವಾಗಿದ್ದು ಪ್ರಶ್ನಿಸುವ ಹಕ್ಕನ್ನು ದಮನಿಸುವ ಪ್ರಕ್ರಿಯೆಯಾಗಿದೆ ಎಂದರು.
ಕಾಂಗ್ರೆಸ್ ಪಕ್ಷ ಸಂವಿಧಾನದ ಬದ್ಧವಾದ ಪ್ರಕ್ರಿಯೆಗಳಿಗೆ ಸದಾ ಬದ್ಧವಾಗಿದ್ದು, ಜಾತ್ಯಾತೀತ ತತ್ವಗಳ ಪರಿಪಾಲಕವಾಗಿದೆ. ಸಚಿವರು ಎತ್ತಿರುವ ಸಂವಿಧಾನಬದ್ಧ ಪ್ರಶ್ನೆಗಳಿಗೆ ಪಕ್ಷ ಸದಾ ಬೆಂಬಲಿಸುತ್ತದೆ. ಸಂವಿಧಾನ ವಿರೋಧಿ ಕೃತ್ಯಗಳನ್ನು ಪ್ರೋತ್ಸಾಹಿಸುವ
ಆರ್.ಎಸ್.ಎಸ್. ಹಾಗೂ ಕೊಮುವಾದಿ ಬಿಜೆಪಿ ಪಕ್ಷದ ವಿರುದ್ಧ ಪಕ್ಷದ ಹೋರಾಟ ನಿರಂತರವಾಗಿ ನಡೆಯಲಿದೆ ಎಂದರು.
ಅದೇ ರೀತಿ ಬಿಜೆಪಿಯ ವಿಧಾನ ಪರಿಷತ್ ಸದಸ್ಯರಾದ ಸಿ.ಟಿ. ರವಿ ಉಡಾಫೆಯಾಗಿ ಮಾತನಾಡಿರುವುದು ಖಂಡನೀಯ. ಪ್ರಿಯಾಂಕ ಖರ್ಗೆ ಅವರು ಏನು ಮಾತನಾಡಿದ್ದಾರೆ ಎನ್ನುವುದನ್ನು ತಿಳಿದು ಮಾತನಾಡಬೇಕು. ಮೋಹನ್ ಭಾಗವತ್ ಅವರಿಗೆ ಭದ್ರತೆ ಕೊಟ್ಟಿರುವ ಬಗ್ಗೆ ಸಚಿವರಿಗೆ ತಕರಾರು ಇಲ್ಲ. ಆದರೆ ಸಾರ್ವಜನಿಕರ ತೆರಿಗೆ ಹಣದಲ್ಲಿ ಭದ್ರತೆ ಕೊಡಲಾಗುತ್ತಿದೆ. ಹೀಗಾಗಿ
ಸಚಿವರು ಕೇಳಿರುವ ಪ್ರಶ್ನೆಗಳಿಗೆ ಆರ್.ಎಸ್.ಎಸ್. ಉತ್ತರ ಕೊಡಬೇಕು. ಸಮಾಜದಲ್ಲಿ ಅಶಾಂತಿ,
ಕೋಮು ಸಾಮರಸ್ಯಕ್ಕೆ ಧಕ್ಕೆ ತರುವ ಹಿನ್ನೆಲೆಯಲ್ಲಿ ಈ ಹಿಂದೆ ಕೇಂದ್ರ ಸರಕಾರವೇ ಆರ್‍ಎಸ್‍ಎಸ್ ನಿಷೇಧಿಸಿತ್ತು ಎನ್ನುವ ಪ್ರಜ್ಞೆ ಸಿ.ಟಿ. ರವಿ ಅವರಿಗೆ ಇರಬೇಕು ಎಂದು ಗುತ್ತೇದಾರ ರವರು ಕಿವಿಮಾತು ಹೇಳಿದ್ದಾರೆ.