Home ಜಿಲ್ಲೆ ಗೃಹ ಜ್ಯೋತಿ ಯೋಜನೆ ದಾಖಲೆಗಳ ಪರಿಶೀಲನೆ ಪರಿಸರ ಸಂರಕ್ಷಣೆಗೆ ಮುಂದಾಗಬೇಕು

ಗೃಹ ಜ್ಯೋತಿ ಯೋಜನೆ ದಾಖಲೆಗಳ ಪರಿಶೀಲನೆ ಪರಿಸರ ಸಂರಕ್ಷಣೆಗೆ ಮುಂದಾಗಬೇಕು

ಸೈದಾಪುರ:ಜು.೭: ಗೃಹ ಜ್ಯೋತಿ ಯೋಜನೆಯ ಫಲಾನುಭವಿಗಳ ದಾಖಲೆಗಳ ಪರಿಶೀಲನೆ ಕಾರ್ಯ ನಡೆಯಿತು. ಯೋಜನೆಯಡಿ ವಿದ್ಯುತ್ ಉಚಿತ ಸೌಲಭ್ಯ ಪಡೆಯುತ್ತಿರುವ ಫಲಾನುಭವಿಗಳ ಅರ್ಜಿಗಳು, ಆಧಾರ್ ಕಾರ್ಡ್, ವಿದ್ಯುತ್ ಬಿಲ್, ಪಡಿತರ ಚೀಟಿ ಸೇರಿದಂತೆ ಅಗತ್ಯ ದಾಖಲೆಗಳನ್ನು ಅಧಿಕಾರಿಗಳು ಪರಿಶೀಲಿಸಿದರು. ದಾಖಲೆಗಳಲ್ಲಿ ಕಂಡುಬAದ ಸಣ್ಣಪುಟ್ಟ ಲೋಪಗಳನ್ನು ಸರಿಪಡಿಸಿಕೊಳ್ಳುವಂತೆ ಫಲಾನುಭವಿಗಳಿಗೆ ಸೂಚನೆ ನೀಡಲಾಯಿತು.
ಈ ಸಂದರ್ಭದಲ್ಲಿ ಶಾಖ ಅಧಿಕಾರಿ ಮಲ್ಲಪ್ಪ ಪೂಜಾರಿ ಮಾತನಾಡಿ, ಪರಿಶೀಲನೆ ಸಂದರ್ಭದಲ್ಲಿ ಅರ್ಹ ಫಲಾನುಭವಿಗಳು ಅಗತ್ಯ ದಾಖಲೆಗಳನ್ನು ಕಡ್ಡಾಯವಾಗಿ ಸಲ್ಲಿಸುವಂತೆ ಮನವಿ ಮಾಡಿದರು. ಸರ್ಕಾರದ ನಿರ್ದೇಶನದಂತೆ ಈ ಪರಿಶೀಲನಾ ಕಾರ್ಯ ಕೈಗೊಳ್ಳಲಾಗಿದೆ ಎಂದು ಹೇಳಿದರು. ವಿದ್ಯುತ್ ಮಾಪನ ಸಿಬ್ಬಂದಿ ಆಲಂ ಪಾಷಾ, ಹಿರಿಯ ಸಹಾಯಕ ಸಿಬ್ಬಂದಿ ಬಾಲಕೃಷ್ಣ, ಅರ್ಜುನ್ ಚೌಹಾಣ್ ಸೇರಿದಂತೆ ಇತರರಿದ್ದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸಿಬ್ಬಂದಿ, ಸಂಬAಧಿಸಿದ ಇಲಾಖೆಯ ಅಧಿಕಾರಿಗಳು ಹಾಗೂ ಅನೇಕ ಫಲಾನುಭವಿಗಳು ಉಪಸ್ಥಿತರಿದ್ದರು.