
ಚಿತ್ತಾಪುರ; ಮೇ.25:ಮತಕ್ಷೇತ್ರದ ವಚ್ಚಾ ಗ್ರಾಮದ ಹತ್ತಿರ ಸ್ವಿಫ್ಟ್ ಡೀಜರ್ ಕಾರೊಂದು ಗಿಡಕ್ಕೆ ಗುದ್ದಿದ ಪರಿಣಾಮ ಇಬ್ಬರು ಸ್ಥಳದಲ್ಲೆ ಮೃತಪಟ್ಟ ಘಟನೆ ಜರುಗಿದೆ.
ಚಿಂಚೋಳಿ ತಾಲೂಕಿನ ದಸ್ತಾಪುರ ಗ್ರಾಮದ ಶಿವರಾಜ (28), ಸಚೀನ್ (30) ಮೃತಪಟ್ಟ ದುರ್ದೈವಿಗಳು.
ಶಿವರಾಜ, ಸಚೀನ್ ಮತ್ತು ಶ್ರೀಕಾಂತ ಎನ್ನುವವರು ಚಿಂಚೋಳಿಯಿಂದ ಕಲಬುರಗಿಗೆ ಹೋಗುವಾಗ ಘಟನೆ ಜರುಗಿದೆ.
ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಎಸ್ಪಿ ಅಡ್ಡೂರು ಶ್ರೀನಿವಾಸಲು, ಎಡಿಷನಲ್ ಎಸ್ಪಿ ಮಹೇಶ ಮೇಘಣ್ಣನವರ, ಡಿವೈಎಸ್ಪಿ ಶಂಕರಗೌಡ ಪಾಟೀಲ್, ಸಿಪಿಐ ಜಗದೇವಪ್ಪ ಪಾಳಾ, ಪಿಎಸ್’ಐ ಗೌತಮ್ ಸೇರಿದಂತೆ ಪೆÇಲೀಸ್ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಕುರಿತು ಮಾಡಬೂಳ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.























