
ವಾಷಿಂಗ್ಟನ್, ಜೂ.೨೪- ಅಮೆರಿಕ – ಇರಾನ್ ನಡುವೆ ಕಳದ ಹಲವು ತಿಂಗಳಿನಿಂದ ನಡೆಯುತ್ತಿದ್ದ ಸಂಘರ್ಷ ಕೊನೆಗೊಳಿಸುವ ನಿಟ್ಟಿನಲ್ಲಿ ಸ್ವಿಟ್ಜರ್ಲ್ಯಾಂಡ್ ನಲ್ಲಿ ಪ್ರಾಥಮಿಕ ಒಪ್ಪಂದಕ್ಕೆ ಸಹಿ ಹಾಕಿದ ಬೆನ್ಮಲ್ಲೇ ಇರಾನ್ ಪರಮಾಣು ತಪಾಸಣೆ ನಿರಾಕರಿಸಿದರೆ ಶಾಂತಿ ಮಾತುಕತೆ ರದ್ದು ಮಾಡಲಾಗುವುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುಡುಗಿದ್ದಾರೆ.
ಇರಾನ್ ಪರಮಾಣು ಘಟಕಕ್ಕೆ ಅಂತರರಾಷ್ಟ್ರೀಯ ಅಣುಶಕ್ತಿ ಏಜೆನ್ಸಿಯ ಅಧಿಕಾರಿಗಳು ಭೇಟಿ ನೀಡಿ ತಪಾಸಣೆ ನಡೆಸುವುದಕ್ಕೆ ಅನುಮತಿ ನೀಡದಿದ್ದರೆ ನಿಗದಿತ ಶಾಂತಿ ಸಭೆಯನ್ನು ರದ್ದುಗೊಳಿಸುವುದಾಗಿ ಎಚ್ಚರಿಸಿದ್ದಾರೆ
ಪಶ್ಚಿಮ ಏಷ್ಯಾ ಸಂಘರ್ಷ ಕೊನೆಗೊಳಿಸಿ ಶಾಂತಿ ಮರುಸ್ಥಾಪಿಸುವ ನಿಟ್ಟಿನಲ್ಲಿ ಅಮೆರಿಕ ಹಾಗೂ ಇರಾನ್ ನಡುವೆ ಮಾತುಕತೆ ನಡೆಯುತ್ತಿರುವ ಸಮಯದಲ್ಲಿ ಟ್ರಂಪ್ ಹೇಳಿಕೆ ಮಹತ್ವ ಪಡೆದುಕೊಂಡಿದೆ.
ಈ ನಡುವೆ ಪೆನ್ಸಿಲ್ವೇನಿಯಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡೊನಾಲ್ಡ್ ಟ್ರಂಪ್, ಪರಮಾಣು ತಪಾಸಣೆಗಳ ಕುರಿತು ಇರಾನ್ ಹೊಂದಿರುವ ಕಳವಳಗಳನ್ನು ತಳ್ಳಿ ಹಾಕಿದ್ದು ಪರಮಾಣು ತಪಾಸಣೆಗೆ ಇರಾನ್ ಈಗಾಗಲೇ ತಾತ್ವಿಕವಾಗಿ ಒಪ್ಪಿಗೆ ನೀಡಿದೆ ಎಂದು ಹೇಳಿದ್ದಾರೆ
’ಪರಮಾಣು ಘಟಕಗಳಿಗೆ ಭೇಟಿ ನೀಡಲು ಇರಾನ್ ಒಪ್ಪಿಕೊಂಡಿದೆ. ಹಾಗೊಂದು ವೇಳೆ ಅನುಮತಿ ಸಿಗದಿದ್ದಲ್ಲಿ ತಾಂತ್ರಿಕ ಒಪ್ಪಂದದ ಭಾಗವಾಗಿ ನಡೆಯುತ್ತಿರುವ ಸಭೆಗಳನ್ನು ಈಗಾಗಲೇ ರದ್ದುಪಡಿಸುತ್ತಿದ್ದೆ’ ಎಂದು ಹೇಳಿದ್ದಾರೆ.
ಇರಾನ್ ಜೊತೆಗಿನ ಮಾತುಕತೆಯಲ್ಲಿ ಪ್ರಗತಿ ಇದೆ ಎಂದು ಡೊನಾಲ್ಡ್ ಟ್ರಂಪ್ ಉಲ್ಲೇಖಿಸಿದ್ದು ನೀವು ಬಹುಶಃ ಕೇಳಿರಬಹುದು ಹೊರ್ಮುಜ್ ಜಲಸಂಧಿಯಲ್ಲಿ ೧೯ ಬ್ಯಾರೆಲ್ ತೈಲ ಹೊರಬಂದಿದೆ. ಇದು ಅತಿ ದೊಡ್ಡ ಪ್ರಮಾಣವಾಗಿದೆ’ ಎಂದು ಹೇಳಿದ್ದಾರೆ.
’ಇರಾನ್ ಮಿಲಿಟರಿ ಸಾಮರ್ಥ್ಯ ದುರ್ಬಲಗೊಂಡಿದೆ. ಯಾವುದೇ ಕಾರಣಕ್ಕೂ ಅಣ್ವಸ್ತ್ರ ಹೊಂದಲು ಬಿಡುವುದಿಲ್ಲ’ ಎಂದು ಗುಡುಗಿದ್ದಾರೆ
ಫೆಬ್ರವರಿ ತಿಂಗಳಿನಿಂದ ಇಸ್ರೇಲ್ ಅಮೇರಿಕಾ ಜೊತೆಗೂಡಿ ಇರಾನ್ ಮೇಲೆ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಸಂಘರ್ಷ ಭುಗಿಲೆದ್ದಿದ್ದು ಜಾಗತಿಕ ಕಚ್ಚಾತೈಲ್ ಪ್ರಮುಖ ತಾಣವಾದ ಹೊರ್ಮುಜ್ ಜಲಸಂಧಿಯನ್ನು ಮುಚ್ಚಲಾಗಿತ್ತು. ಇದೀಗ ಮಾತುಕತೆಯ ನಂತರ ಎಲ್ಲವೂ ಸರಿ ಆಯಿತು ಎನ್ನುವಾಗಲೇ ಮತ್ತೆ ಅಡಕತ್ತರಿಯಲ್ಲಿ ಸಿಲುಕುವಂತೆ ಮಾಡಿದೆ.
ಪ್ರಾಥಮಿಕ ಒಪ್ಪಂದ ಮಾಡಿಕೊಂಡರೂ ಇರಾನ್ ಮತ್ತು ಅಮೆರಿಕ ನಡುವಿನ ಸಂಘರ್ಷ ಸದ್ಯಕ್ಕೆ ಕೊನೆಯಾಗುವ ಲಕ್ಷಣ ಕಾಣುತ್ತಿಲ್ಲ
- ಅಮೆರಿಕ- ಇರಾನ್ ನಡುವಿನ ಸಂಘರ್ಷ ಹಿನ್ನೆಲೆ
- ಸ್ವಿಟ್ಜರ್ಲೆಂಡ್ ನಲ್ಲಿ ಮಹತ್ವದ ಒಪ್ಪಂದಕ್ಕೆ ಸಹಿ
- ಪರಮಾಣು ಪರಿಶೀಲನೆಗೆ ಅಡ್ಡಿ ಪಡಿಸಿದರೆ ಎಚ್ಚರಿಕೆ
- ಡೊನಾಲ್ಡ್ ಟ್ರಂಪ್ ಎಚ್ಚರಿಕೆ ಹೊಸ ವಿವಾದಕ್ಕೆ ಕಾರಣ
- ಕಳೆದ ಹಲವು ತಿಂಗಳಿಂದ ನಡೆಯುತ್ತಿರುವ ಸಂಘರ್ಷ
- ಇರಾನ್ ಮಿಲಿಟರಿ ಸಾಮರ್ಥ್ಯ ದುರ್ಬಲಗೊಳಿಸುವ ಪ್ರಯತ್ನ
*





























