Home ಜಿಲ್ಲೆ ದೇಶದಲ್ಲಿ ವಿಲೀನಗೊಂಡ ಐತಿಹಾಸಿಕ ದಿನ ಇದಾಗಿದೆ:ಬೆಳಗುಂದಿ

ದೇಶದಲ್ಲಿ ವಿಲೀನಗೊಂಡ ಐತಿಹಾಸಿಕ ದಿನ ಇದಾಗಿದೆ:ಬೆಳಗುಂದಿ

ಸೈದಾಪುರ:ದೇಶದ ಸ್ವಾತಂತ್ರ್ಯ ನಂತರದಲ್ಲಿ ಈ ಭಾಗ ಸರ್ಧಾರ ವಲ್ಲಭಬಾಯಿ ಪಟೇಲರ ಮಾರ್ಗದರ್ಶದನಲ್ಲಿ ಸ್ಥಳೀಯ ಹೊರಾಟಗಾರೊಂದಿಗೆ ನಿಜಾಮ ಸಂಸ್ಥಾನದಿಂದ ದೇಶದಲ್ಲಿ ವಿಲೀನಗೊಂಡಿರುವ ಐತಿಹಾಸಿಕ ಮಹತ್ವದ ದಿನ ಇದಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಸಣ್ಣ ಸಿದ್ರಾಮಪ್ಪಗೌಡ ಬೆಳಗುಂದಿ ಅಭಿಪ್ರಾಯಪಟ್ಟರು.
ಇಲ್ಲಿನ ವಿದ್ಯಾ ವರ್ಧಕ ಸಂಸ್ಥೆಯ ವಿವಿಧ ವಿಭಾಗಗಳಿಂದ ಹಮ್ಮಿಕೊಂಡ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಹೈದ್ರಾಬಾದ ನಿಜಾಮನಿಂದ ಈ ಪ್ರದೇಶಗಳು ವಿಲೀನಗೊಳ್ಳಲು ಸ್ಥಳೀಯ ನಾಯಕರ ಪ್ರಾತ್ರ ಅತಿ ಮುಖ್ಯವಾಗಿದೆ. ಈ ದಿಸೆಯಲ್ಲಿ ದಿಂವಂಗತ ವಿಶ್ವನಾಥರೆಡ್ಡಿ ಮುದ್ನಾಳ, ಕೂಯಲೂರ ಮಲ್ಲಪ್ಪ, ಸರ್ದಾರ ಶರಣಗೌಡ ಪಾಟೀಲ, ಚಂದ್ರಶೇಖರ ಪಾಟೀಲ ಮಹಾಗಾಂವ, ವಿದ್ಯಾದರ ಗೂರುಜಿ, ದಿನ ದಯಾಳ ಶರ್ಮ ಸೇರಿದಂತೆ ಇತರರು ಪ್ರಯತ್ನ ಮಾಡಿದ್ದಾರೆ. ಅವರ ಮಹತ್ವ ನಾವು ತಿಳಿದುಕೊಂಡು ಈ ಭಾಗದ ಅಭಿಮಾನ ಹೆಚ್ಚಿಸಿಕೊಳ್ಳಲು ಪ್ರಯತ್ನ ಮಾಡಬೇಕು. ಇತಿಹಾಸ ಅರ್ಥಮಾಡಿಕೊಂಡು ಮುಂದಿನ ಪಿಳಿಗೆಗೆ ಇದರ ಬಗಗೆ ತಿಳಿಸುವ ಕೆಲಸವಾದಾಗ ಮಾತ್ರ ಈ ಭಾಗ ಕಲ್ಯಾಣ ಕರ್ನಾಟಕವಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಹಿರಿಯ ಸದಸ್ಯರಾದ ಬಸವರಾಜಯ್ಯ ಸ್ವಾಮಿ ಬದ್ದೇಪಲ್ಲಿ, ಸಹ ಕಾರ್ಯದರ್ಶಿ ಕೆ.ಬಿ.ಗೋವರ್ಧನ, ಕೋಶಾಧ್ಯಕ್ಷ ಮುಕುಂದಕುಮಾರ ಅಲಿಝಾರ, ಸುರೇಶ ಆನಂಪಲ್ಲಿ, ಬಸ್ಸಯ್ಯ ಸ್ವಾಮಿ, ದೈಹಿಕ ಶಿಕ್ಷಕರಾದ ವಿಶ್ವನಾಥರೆಡ್ಡಿ ಪಾಟೀಲ ಕಣೇಕಲ್, ರಾಜಶೇಖರ ಪಾಟೀಲ ಶೆಟ್ಟಹಳ್ಳಿ, ಗೂಳಪ್ಪ.ಎಸ್.ಮಲ್ಹಾರ, ಪ್ರಾಂಶುಪಾಲ ಕರಬಸಯ್ಯ ದಂಡಿಗಿಮಠ, ದೇವಿಂದ್ರ ಪೀರಾ, ಸಂಗಾರೆಡ್ಡಿ ಶೆಟ್ಟಹಳ್ಳಿ ಸೇರಿದಂತೆ ಶಿಕ್ಷಕರು, ಉಪನ್ಯಾಸಕರು, ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಸೇರಿದಂತೆ ಇತರರಿದ್ದರು.