
ಕಲಬುರಗಿ,ಸೆ.18: ಶಿಕ್ಷಣ ಪ್ರೇಮಿ ಡಾ.ಲಿಂಗರಾಜ ಶಾಸ್ತ್ರೀ ಅವರ 5 ನೇ ಪುಣ್ಯಸ್ಮರಣೆ ಅಂಗವಾಗಿ ಪರೋಪಕಾರಿ ಪ್ರಶಸ್ತಿ ಪ್ರಧಾನ ಸಮಾರಂಭ ನಾಳೆ ( ಸೆ 19 ) ಅನ್ನಪೂರ್ಣ ಕ್ರಾಸ್ ಹಿಂದಿ ಪ್ರಚಾರ ಸಭಾಭವನದಲ್ಲಿ ಸಂಜೆ 5 ಗಂಟೆಗೆ ಹಮ್ಮಿಕೊಳ್ಳಲಾಗಿದೆ.
ಜೆಸ್ಕಾಂ ಅಧ್ಯಕ್ಷ ಪ್ರವೀಣ ಪಾಟೀಲ ಹರವಾಳ ಮತ್ತು ಅಮರನಾಥ ತಡಕಲ್ ಅವರಿಗೆ ಪರೋಪಕಾರಿ ಪ್ರಶಸ್ತಿ ಹಾಗೂ ವಿವಿಧ ಕ್ಷೇತ್ರದ ಸಾಧಕರಿಗೆ ವಿಶೇಷ ಸನ್ಮಾನ ನಡೆಯಲಿದೆ. ಪಾಳಾದ ಡಾ ಗುರುಮೂರ್ತಿ ಶಿವಾಚಾರ್ಯರು ಸಾನಿಧ್ಯ ವಹಿಸಲಿದ್ದು, ಕಾಂಗ್ರೇಸ್ ಪಕ್ಷದ ನೂತನ ಜಿಲ್ಲಾಧ್ಯಕ್ಷ ಕಿರಣ ದೇಶಮುಖ್ ಉದ್ಘಾಟಿಸುವರು.
ಮುಖ್ಯಅಥಿತಿಗಳಾಗಿ ಅಶೋಕ ಗುರೂಜಿ , ಎಂ.ಎಸ್ ಪಾಟೀಲ ನರಿಬೋಳ, ಜ್ಯೋತಿ ಪಾಟೀಲ ಜೈನಾಪುರ, ಹುಚ್ಚೇಶ್ವರ ವಠಾರ, ಮಲ್ಲು ಕುಳಗೇರಿ ಅವರು ಆಗಮಿಸುವರು ಎಂದು ಪ್ರಿಯದರ್ಶಿನಿ ಗ್ರಾಮೀಣಾಭಿವೃದ್ಧಿ ಫೌಂಡೇಶನ್ ಅಧ್ಯಕ್ಷರಾದ ಸುಮಾ ಎಸ್ ಕವಲ್ದಾರ್ ತಿಳಿಸಿದ್ದಾರೆ


























