Home ಜಿಲ್ಲೆ ಇದೊಂದು ಉತ್ತಮ ಬೆಳವಣಿಗೆ:ಲಿಂಗಾರೆಡ್ಡಿ ನಾಯಕ

ಇದೊಂದು ಉತ್ತಮ ಬೆಳವಣಿಗೆ:ಲಿಂಗಾರೆಡ್ಡಿ ನಾಯಕ

ಸೈದಾಪುರ:ಎಲ್ಲರೂ ಸೇರಿ ಕಲಿತ ಗುರುಗಳನ್ನು ಸನ್ಮಾನಿಸುವ ಈ ಕಾರ್ಯಕ್ರಮ ಉತ್ತಮ ಬೆಳವಣಿಗೆಯಾಗಿದ್ದೂ ಇದೊಂದು ಇತರರಿಗೆ ಮಾದರಿಯಾಗಲಿ ಎಂದು ಮುಖ್ಯಗುರು ಲಿಂಗಾರೆಡ್ಡಿ ನಾಯಕ ಅಭಿಪ್ರಾಯಪಟ್ಟರು.
ಪಟ್ಟಣದ ವಿದ್ಯಾ ವರ್ಧಕ ಪ್ರೌಢ ಶಾಲೆಯ ೧೯೯೮-೯೯ನೇ ಸಾಲಿನ ವಿದ್ಯಾರ್ಥಿಗಳು ಸೆಪ್ಟೆಂಬರ್ ೧೨ ಶನಿವಾರದಂದು ಬೆಳಗ್ಗೆ ೧೦ ಗಂಟೆಗೆ ಹಮ್ಮಿಕೊಂಡ ಗುರವಂದನಾ ಮತ್ತು ವಿದ್ಯಾರ್ಥಿಗಳ ಪುನರ್ಮಿಲನ ಸಮಾರಂಭದ ಅಮಂತ್ರಣ ಪತ್ರಿಕೆಯನ್ನು ಸ್ವೀಕರಿಸಿ ಮಾತನಾಡಿದರು. ಈ ವಿದಧ ಕಾರ್ಯಕ್ರಮ ಗುರುಗಳ ಮತ್ತು ಸಂಸ್ಥೆಯ ಬಗಗೆ ತಮಗೆ ಇರುವ ಅಭಿಮಾನ ತಿಳಿಸುವಂತಿದೆ. ನೀವುಗಳು ೨೭ ವರ್ಷಗಳ ಹಿಂದೆ ಕಲಿತಿದ್ದೂ ವಿವಿಧ ಕ್ಷೇತ್ರಗಳನ್ನು ಸೇವೆ ಸಲಿಸುತ್ತಿದ್ದೀರಿ. ಕಾರ್ಯಕ್ರಮದ ಮೂಲಕ ಒಂದಡೇ ಸೇರುವ ಅವಕಾಶವಿದೆ. ನಿಮ್ಮ ಕಾರ್ಯಕ್ರಮ ಯಶಸ್ವಿಯಾಗಲಿ ಇನ್ನೂ ಹೆಚ್ಚಿನ ಸೇವೆ ಮಾಡುವ ಶಕ್ತಿ ನಿಮ್ಮದಾಗಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಪ್ರೌಢ ಶಾಲೆಯಲ್ಲಿ ಕಲಿಸಿದ ಗುರುಗಳಾದ ಲಿಂಗರೆಡ್ಡಿ ನಾಯಕ, ಜಿ.ಎಂ.ಗುರುಪ್ರಸಾದ, ಗೂಳಪ್ಪ.ಎಸ್.ಮಲ್ಹಾರ, ಕರಬಸಯ್ಯ ದಂಡಿಗಿಮಠ, ಸಾಬಯ್ಯ ರಾಯಪ್ಪನೋರ ಇವರುಗಳಿಗೆ ಕಾರ್ಯಕ್ರಮಕ್ಕೆ ಆಗಮಿಸಬೇಕಾಗಿ ೧೯೯೮-೯೯ನೇ ಸಾಲಿನ ವಿದ್ಯಾರ್ಥಿಗಳಾದ ವಿರೇಶ ಮಿರಿಯಾಲ, ಬಂದಪ್ಪ ನಾಯಕ, ಸತೀಶಕುಮಾರ, ರವಿ ತಾಂಡೂರಕರ, ಮಲ್ಲಪ್ಪ ನಾಯಕ, ಶರಣಗೌಡ ಕಣೇಕಲ, ಮರಿಲಿಂಗ ಸೇರಿದಂತೆ ಇತರರು ಅಮಂತ್ರಣ ಪತ್ರಿಕೆಯನ್ನು ನೀಡಿದರು.