Home ಜಿಲ್ಲೆ ಕಲಬುರಗಿ ನಾಲ್ಕು ಕುರಿ ಕಳವು

ನಾಲ್ಕು ಕುರಿ ಕಳವು

ಕಲಬುರಗಿ,ಅ.5-ಕಳ್ಳರು ರಾತ್ರಿ ವೇಳೆ ಕಾರಿನಲ್ಲಿ ಬಂದು ನಾಲ್ಕು ಕುರಿಗಳನ್ನು ಕಳವು ಮಾಡಿಕೊಂಡು ಹೋಗಿರುವ ಘಟನೆ ಫರಹತಾಬಾದ ಪೊಲೀಸ್ ಠಾಣೆ ವ್ಯಾಪ್ತಿಯ ತಿಳಗೂಳ್ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಮಹ್ಮದ್ ಪಟೇಲ್ ಎಂಬುವವರ ಕುರಿದೊಡ್ಡಿಯಲ್ಲಿನ ಸುಮಾರು 58 ಸಾವಿರ ರೂ.ಮೌಲ್ಯದ 4 ಕುರಿಗಳನ್ನು ಕಳವು ಮಾಡಲಾಗಿದೆ.
ಅವರು ಈ ಸಂಬಂಧ ಫರಹತಾಬಾದ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು, ತನಿಖೆ ನಡೆದಿದೆ.