
ತುಮಕೂರು, ಆ. ೧೫- ರಂಗಭೂಮಿಯು ಸಮಾಜದ ಕನ್ನಡಿ ಇದ್ದಂತೆ. ಒಳ್ಳೆಯದು, ಕೆಟ್ಟದನ್ನೂ ಪ್ರತಿಬಿಂಬಿಸುತ್ತದೆ. ಸಮಾಜವನ್ನು ತಿದ್ದುವ ಮತ್ತು ಬದಲಾಯಿಸುವ ಶಕ್ತಿ ರಂಗಭೂಮಿ ಹಾಗೂ ಅಭಿನಯಿಸುವ ಕಲಾವಿದರಿಗೆ ಇದೆ. ಸಮಾಜದ ಓರೆ ಕೋರೆಗಳನ್ನು ತಿದ್ದುತ್ತಾ ಸಾಮಾಜಿಕ ಬದಲಾವಣೆಯ ಜವಾಬ್ದಾರಿಯನ್ನು ರಂಗಭೂಮಿ ಹೊತ್ತಿದೆ ಎಂದು ಹಿರಿಯ ಕಲಾವಿದ ಸ್ವಾಮಿ ಹೇಳಿದರು.
ನಗರದ ಸಿದ್ಧಗಂಗಾ ಮಠದ ಉದ್ದಾನೇಶ್ವರ ಸಮುದಾಯ ಭವನದಲ್ಲಿ ದವನ ಭೂಮಿಕೆ ಸಾಂಸ್ಕೃತಿಕ ಟ್ರಸ್ಟ್ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಸಾಂಸ್ಕೃತಿಕ ಸೌರಭ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸುಲೋಚನಾದೇವಿ ಮಾತನಾಡಿ, ರಂಗ ಕಲೆಯು ವ್ಯಕ್ತಿತ್ವದ ವಿಕಸನದ ಜತೆಗೆ ಸಾಮಾಜಿಕ ಜವಾಬ್ದಾರಿಯ ಬದ್ಧತೆಯನ್ನು ತಿಳಿಸುತ್ತದೆ ಎಂದರು.
ಜ್ಯೋತಿ ಮಾತನಾಡಿ, ಇಂದಿನ ಯುವ ಜನತೆ ಸಾಮಾಜಿಕ ಜಾಲತಾಣಗಳಲ್ಲಿ ಮುಳುಗುವುದನ್ನು ಬಿಟ್ಟು ಜೀವಂತ ಕಲೆಯಾದ ರಂಗಭೂಮಿಯತ್ತ ತೆರಳಬೇಕು ಎಂದರು.
ಕಾರ್ಯಕ್ರಮದಲ್ಲಿ ಭವ್ಯ, ವೇಣಿಕಾ, ಹೇಮಾ, ಬಾಲಕೃಷ್ಣ, ಜನಪದ ಕಲಾವಿದರದ ಡಿ.ಸಿ. ಕುಮಾರ್, ಸಂಸ್ಥೆಯ ಕಾರ್ಯದರ್ಶಿಕಾಂತರಾಜು ಕೌತಮಾರನಹಳ್ಳಿ ಮತ್ತಿತರರು ಭಾಗವಹಿಸಿದ್ದರು.


































