Home ಜಿಲ್ಲೆ ಕಲಬುರಗಿ ಹಳ್ಳಿ ಅಭಿವೃದ್ಧಿಯಾದರೆ ಮಾತ್ರ ರಾಜ್ಯದ ಪ್ರಗತಿ ಸಾಧ್ಯ:ಸಚಿವ ಡಾ.ಶರಣಪ್ರಕಾಶ್ ಪಾಟೀಲ್

ಹಳ್ಳಿ ಅಭಿವೃದ್ಧಿಯಾದರೆ ಮಾತ್ರ ರಾಜ್ಯದ ಪ್ರಗತಿ ಸಾಧ್ಯ:ಸಚಿವ ಡಾ.ಶರಣಪ್ರಕಾಶ್ ಪಾಟೀಲ್

ಸೇಡಂ, ಜೂ, 25:ರಾಜ್ಯದ ಗ್ರಾಮೀಣ ಭಾಗಗಳ ಮೂಲಸೌಕರ್ಯ ಹಾಗೂ ಆರ್ಥಿಕ ಸ್ಥಿತಿಯನ್ನು ಬಲಪಡಿಸುವ ನಿಟ್ಟಿನಲ್ಲಿ ನಮ್ಮ ಕಾಂಗ್ರೆಸ್ ಸರ್ಕಾರ ಜನಪರವಾದ ಯೋಜನೆಗಳನ್ನು ಜಾರಿಗೆ ತಂದಿದ್ದು ಹಳ್ಳಿಗಳ ಸವಾರ್ಂಗೀಣ ವಿಕಾಸಕ್ಕೆ ದೃಢ ಸಂಕಲ್ಪ ಮಾಡಿದ್ದು ಹಳ್ಳಿ ಅಭಿವೃದ್ಧಿಯಾದರೆ ಮಾತ್ರ ರಾಜ್ಯದ ಪ್ರಗತಿ ಹೊಂದಲು ಸಾಧ್ಯವಾಗುತ್ತಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವರಾದ ಡಾ. ಶರಣಪ್ರಕಾಶ್ ಪಾಟೀಲ್ ಹೇಳಿದರು.
ತಾಲೂಕಿನ ಬಿಬ್ಬಳ್ಳಿ ಗ್ರಾಮದಲ್ಲಿ ಬಿಬ್ಬಳ್ಳಿ ಕ್ರಾಸ್ನಿಂದ ಕಾಚೂರು ವರೆಗೆ ರಸ್ತೆ ನಿರ್ಮಾಣ ಹಾಗೂ ತರನಳ್ಳಿ ಗ್ರಾಮದ ಕೂಡು ರಸ್ತೆಗೆ ಸಿಡಿ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು ನಾನು ಮೊದಲು ಜಿಪಂ ಸದಸ್ಯರಾದ ಮೊದಲ ಬಾರಿಗೆ ಬಂದಾಗ ಗ್ರಾಮಸ್ಥರು ಅನೇಕ ಸಮಸ್ಯೆಗಳನ್ನು ಗಮನಕ್ಕೆ ತಂದಿದ್ದರು, ಅಂದಿನಿಂದ ಇಂದಿನವರೆಗೂ ಎಲ್ಲಾ ರೀತಿಯ ಅಭಿವೃದ್ಧಿಗೆ ಮಹತ್ವ ನೀಡಲಾಗಿದೆ ಎಂದರು. ಈ ವೇಳೆಯಲ್ಲಿ ಕೃಷಿಕ ಸಮಾಜದ ರಾಜ್ಯ ಪ್ರತಿನಿಧಿ ಬಸವರಾಜ ಪಾಟೀಲ ಊಡಗಿ, ತಹಸೀಲ್ದಾರ್ ಶ್ರೀಯಾಂಕ ಧನಶ್ರೀ ,ಲೋಕೋಪಯೋಗಿ ಇಲಾಖೆಯ ಎಇಇ ಶಿವಶರಣಪ್ಪ ಜೇವರ್ಗಿ, ನಗರ ಪ್ರಾಧಿಕಾರದ ಅಧ್ಯಕ್ಷರಾದ ವಿಶ್ವನಾಥ ಪಾಟೀಲ,ಕೃಷಿಕ ಸಮಾಜದ ಅಧ್ಯಕ್ಷರಾದ ಬಸವರಾಜ ರೆವಗೋಂಡ, ಗ್ರಾಮದ ಮುಖಂಡರಾದ ಸೋಮಶೇಖರ್ ಹೊಸಮನಿ,ಜಗನಾಥ ಪಾಟೀಲ,ಬಸವರಾಜ ಹೊಸಮನಿ, ಸತೀಶ್ ಪೂಜಾರಿ, ಸೋಮು ಯಂಪಲಿ,ಚಂದ್ರಕರ ಹೊಸಮನಿ,ಜಕ್ಕಪ್ಪ ಪೂಜಾರಿ,ಗುಂಡಪ ಪೂಜಾರಿ,ಹಣಮಂತ ಬಿರಾದಾರ್ ಶ್ರೀಕಾಂತ ಹೊಸಮನಿ ಸೇರಿದಂತೆ ಹಲವು ಉಪಸ್ಥಿತರಿದ್ದರು