
ಸಿಯಾಟಲ್,ಜೂ.೨೭-ಅಮೆರಿಕದ ಸಿಯಾಟಲ್ ಕ್ರೀಡಾಂಗಣದಲ್ಲಿ ನಡೆದ ಗುಂಪು ಜಿ, ಹಂತದ ಪಂದ್ಯದಲ್ಲಿ ಈಜಿಪ್ಟ್ ಮತ್ತು ಇರಾನ್ ನಡುವೆ ೧-೧ ಅಂತರದ ಡ್ರಾ ನಡೆದು ಈಜಿಪ್ಟ್ ತಮ್ಮ ಗುಂಪಿನಲ್ಲಿ ಎರಡನೇ ಸ್ಥಾನ ಪಡೆದು ೩೨ನೇ ಸುತ್ತಿಗೆ ಅರ್ಹತೆ ಪಡೆದಿದೆ. ಇರಾನ್ ಮೂರನೇ ಸ್ಥಾನದಲ್ಲಿದೆ, ಆದರೆ ಅವರ ಪ್ರಯಾಣ ಇನ್ನೂ ಮುಗಿದಿಲ್ಲ. ಅಗ್ರ ಎಂಟು ತಂಡಗಳು ಮುಂದಿನ ಸುತ್ತಿಗೆ ಅರ್ಹತೆ ಪಡೆಯಬಹುದು, ಇರಾನ್ ಆರನೇ ಸ್ಥಾನದಲ್ಲಿದೆ.
ಶೋಜಾ ಖಲೀಲ್ಜಾದೆ ಅವರ ಕೊನೆಯ ನಿಮಿಷದ ಗೋಲು ಆಫ್‌ಸೈಡ್ ಎಂದು ತೀರ್ಪು ನೀಡಲ್ಪಟ್ಟಿತು, ಈ ಹಿನ್ನಲೆಯಲ್ಲಿ ಫಿಫಾವಿಶ್ವಕಪ್ ೨೦೨೬ ರ ಈಜಿಪ್ಟ್ ವಿರುದ್ಧದ ಪಂದ್ಯವು ೧-೧ ಡ್ರಾದಲ್ಲಿ ಕೊನೆಗೊಂಡಿತು. ಇದು ಅವರಿಗೆ ಮೂರು ನಿರ್ಣಾಯಕ ಅಂಕಗಳನ್ನು ಕೈ ತಪ್ಪಿಸಿದೆ ಈಜಿಪ್ಟ್ ಆರಂಭದಲ್ಲಿ ಮುನ್ನಡೆ ಸಾಧಿಸಿತ್ತು, ಮಹಮೂದ್ ಸಬರ್ ಐದನೇ ನಿಮಿಷದಲ್ಲಿ ಗೋಲು ಗಳಿಸಿದರು. ನಂತರ ಇರಾನ್‌ಗೆ ಪೆನಾಲ್ಟಿ ನೀಡಲಾಯಿತು ಆದರೆ ಗೋಲ್ ಪರಿವರ್ತಿಸಲು ವಿಫಲರಾದರು
ಪಂದ್ಯವು ಮೊದಲಾರ್ಧದಲ್ಲಿ ೧-೧ ಅಂತರದಲ್ಲಿ ಸಮಬಲ ಸಾಧಿಸಿತ್ತು. ಮಹಮೂದ್ ಸಬರ್ ಐದನೇ ನಿಮಿಷದಲ್ಲಿ ಈಜಿಪ್ಟ್‌ಗೆ ಮುನ್ನಡೆ ತಂದುಕೊಟ್ಟರು, ಆದರೆ ಇರಾನ್ ಸಮಬಲ ಸಾಧಿಸಲು ಹೆಚ್ಚು ಸಮಯ ಕಾಯಲಿಲ್ಲ. ಇರಾನ್‌ನ ರಾಮಿನ್ ರೆಝೇಯನ್ ೧೪ನೇ ನಿಮಿಷದಲ್ಲಿ ಇರಾನ್ ಪರವಾಗಿ ಸಮಬಲ ಸಾಧಿಸಿದರು. ಮೊದಲಾರ್ಧದಲ್ಲಿ ಎರಡೂ ತಂಡಗಳು ೧-೧ ಅಂತರದಲ್ಲಿ ಸಮಬಲ ಸಾಧಿಸಿದವು. ನಂತರ ಇರಾನ್ ದ್ವಿತೀಯಾರ್ಧದಲ್ಲಿ ಆಕ್ರಮಣಕಾರಿ ವಿಧಾನವನ್ನು ತೆಗೆದುಕೊಂಡಿತು ಮತ್ತು ಅಂತಿಮ ನಿಮಿಷಗಳಲ್ಲಿ ಗೋಲು ಗಳಿಸಿತು, ಆದರೆ ಗೋಲು ಸಮಯದ ವಿಮರ್ಶೆಯಲ್ಲಿ ಫೌಲ್ ಎಂದು ತೀರ್ಪು ನೀಡಲಾಯಿತು.ಇರಾನ್ ತಂಡವನ್ನು ಆಫ್-ಸೈಡ್ ಎಂದು ಘೋಷಿಸಲಾಯಿತು, ಇದು ಅವರಿಗೆ ಮೂರು ನಿರ್ಣಾಯಕ ಅಂಕಗಳನ್ನು ನಿರಾಕರಿಸಿತು.




















