
ಸೇಡಂ: ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಶರಣಪ್ರಕಾಶ್ ಪಾಟೀಲ್ ಅವರು ಇಂದು ಬಿಜನಳ್ಳಿ ಗ್ರಾಮಕ್ಕೆ ಭೇಟಿಯ ಬೆನ್ನಲ್ಲೇ ವರುಣದೇವ ತಂಪೆರೆದಿದ್ದು, ಒಣಗುತ್ತಿದ್ದ ಬೆಳೆಗಳಿಗೆ ಜೀವದಾನ ಸಿಕ್ಕಂತಾಗಿದೆ. ಗ್ರಾಮದಲ್ಲಿ ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಬಿತ್ತನೆ ಮಾಡಿದ್ದ ಹೆಸರು ಉದ್ದು ತೊಗರಿ ಬೆಳೆಗಳು ಬಿಸಿಲಿನ ಬೇಗೆಗೆ ಒಣಗಲಾರಂಭಿಸಿದ್ದವು. ಈ ವರ್ಷವೂ ಕೈಗೆ ಬಂದ ತುತ್ತು ಬಾಯಿಗೆ ಬರುವುದಿಲ್ಲವೇನೋ ಎಂಬ ಆತಂಕದಲ್ಲಿ ಬಿಜನಳ್ಳಿಯ ಇಡೀ ರೈತ ಸಮುದಾಯ ಮುಗಿಲ ಕಡೆ ಮುಖ ಮಾಡಿ ಕಾಯುತ್ತಿತ್ತು. ನೀರಿನ ಅಭಾವದಿಂದ ಕೃಷಿ ಭೂಮಿ ಬಿರುಕು ಬಿಡಲಾರಂಭಿಸಿತ್ತು. ಇತೀಚೆಗೆ ಚಿತ್ತಾಪುರ ತಾಲೂಕಿನಲ್ಲಿ ರಸ್ತೆ ಅಪಘಾತದಲ್ಲಿ ಮೃತಪಟ್ಟ ಗ್ರಾಮದ ಪ್ರಕಾಶ ಹರಳಕಟ್ಟಿ ಮನೆಗೆ ತೆರಳಿ ಕುಟುಂಬಸ್ಥರಿಗೆ ಸಾಂತ್ವನ ತಿಳಿಸಿದ ಸಚಿವರು ತೆರಳುತ್ತಿದ್ದಂತೆ ಧರೆಗಿಳಿದ ವರುಣರಾಯ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ
ತಾಲೂಕಿನ ವಿವಿಧ ಗ್ರಾಮಗಳಲ್ಲಿ ಮಳೆ ಬಂದರೂ ಕಳೆದ ಕೆಲವು ವಾರಗಳಿಂದ ಮಳೆಯಿಲ್ಲದೆ ಕಂಗಾಲಾಗಿದ್ದ ಬಿಜನಳ್ಳಿ ಗ್ರಾಮಸ್ಥರು ರೈತರಲ್ಲಿ ಕೊನೆಗೂ ಹರ್ಷದ ವಾತಾವರಣ ಮೂಡಿದೆ ಎಂದರೆ ತಪ್ಪಾಗಲಾರದು.




















