Home ಜಿಲ್ಲೆ ತುಮಕೂರು ಹನುಮಂತನಾಥ ಶ್ರೀಗಳ ಸೇವೆ ಅನನ್ಯ

ಹನುಮಂತನಾಥ ಶ್ರೀಗಳ ಸೇವೆ ಅನನ್ಯ

ಮಧುಗಿರಿ, ಜೂ. ೧೩- ಕುಂಚಿಟಿಗ ಸಮುದಾಯದ ಏಳ್ಗೆಗೆ ಸದಾ ಶ್ರಮಿಸುತ್ತಿರುವ ಎಲೆರಾಂಪುರದ ಕುಂಚಿಟಿಗ ಮಠದ ಶ್ರೀ ಹನುಮಂತನಾಥ ಶ್ರೀಗಳ ಸೇವೆ ಅನನ್ಯ ಎಂದು ಕುಂಚಶ್ರೀ ಗಿರಿಬಳಗದ ಅಧ್ಯಕ್ಷ ಜೆ.ಸಿ.ರವಿಶಂಕರ್ ಹೇಳಿದರು.


ಎಲೆರಾಂಪುರ ಕುಂಚಿಟಿಗ ಸಂಸ್ಥಾನದ ಪೀಠಾದ್ಯಕ್ಷರಾದ ಶ್ರೀ ಹನುಮಂತನಾಥ ಸ್ವಾಮೀಜಿ ಯವರ ೪೪ ನೇ ಹುಟ್ಟುಹಬ್ಬದ ಪ್ರಯುಕ್ತ ಕುಂಚಶ್ರೀ ಗಿರಿ ಬಳಗದ ವತಿಯಿಂದ ತಾಲ್ಲೂಕಿನ ಸಿದ್ದಾಪುರ ಗೇಟ್‌ನಲ್ಲಿರುವ ಶ್ರೀ ಸಾಕ್ಷಿ ಸಾಯಿ ಗಣಪತಿ ವೃದ್ದಾಶ್ರಮಮಕ್ಕೆ ಬೇಕಾಗುವ ದಿನಬಳಕೆ ದಿನಸಿ ವಸ್ತುಗಳನ್ನು ವಿತರಿಸಿ ಅವರು ಮಾತನಾಡಿದರು.


ಕುಂಚಿಟಿಗ ಸಮುದಾಯವನ್ನು ಎಚ್ಚರಿಸುತ್ತಾ ಅಭಿವೃದ್ಧಿಗೆ ಶ್ರೀಗಳು ಅವಿರತವಾಗಿ ಶ್ರಮಿಸುತ್ತಿದ್ದಾರೆ. ಶ್ರೀ ಮಠದ ವತಿಯಿಂದ ಬಡಮಕ್ಕಳಿಗೆ ವಿದ್ಯಾದಾನ ಮಾಡುತ್ತಿದ್ದು, ಸಂಸ್ಕಾರ ಶಿಬಿರದಂತಹ ಅನೇಕ ಸಾಮಾಜಿಕ ಕಾರ್ಯಗಳಿಂದ ಸಮುದಾಯದ ಬೆನ್ನಿಗೆ ನಿಂತಿದ್ದಾರೆ. ಧಾರ್ಮಿಕ ಕಾರ್ಯಗಳು ಸೇರಿದಂತೆ ಸಮಾಜದ ಹತ್ತು ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸಮುದಾಯದಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ ಎಂದರು.


ಇದೇ ಸಂದರ್ಭದಲ್ಲಿ ಪಟ್ಟಣದ ಸ್ವದೇಶಿ ಮಹಿಳಾ ಸಂಸ್ಥೆಯ ವಿಶೇಷ ಚೇತನರ ಶಾಲೆಗೆ ಚೇರ್‌ಗಳನ್ನು ವಿತರಿಸಲಾಯಿತು.


ಕಾರ್ಯಕ್ರಮದಲ್ಲಿ ಕುಂಚಶ್ರೀ ಗಿರಿಬಳಗದ ಪದಾಧಿಕಾರಿಗಳಾದ ಕೆ.ಶಿವರಾಂ, ಸುರೇಂದ್ರ, ರಂಗನಾಥ್, ಲೋಕೇಶ್, ವಿಜಯ್‌ಕುಮಾರ್, ಮಾದೇನಹಳ್ಳಿ ತಿಪ್ಪಣ್ಣ , ಶ್ರೀರಾಮಯ್ಯ, ಕಿರಣ್‌ಕುಮಾರ್, ಕೃಷ್ಣಮೂರ್ತಿ, ಮುರಳಿ, ಕಾಂತಲಕ್ಷ್ಮೀ ಮತ್ತಿತರರು ಭಾಗವಹಿಸಿದ್ದರು.