Home Uncategorized ಸದೃಢ ಆರೋಗ್ಯದಲ್ಲಿ ಆಹಾರದ ಪಾತ್ರ ಪ್ರಮುಖ

ಸದೃಢ ಆರೋಗ್ಯದಲ್ಲಿ ಆಹಾರದ ಪಾತ್ರ ಪ್ರಮುಖ

ಕಲಬುರಗಿ: ನಾವು ಸೇವಿಸುವ ಆಹಾರವೇ ನಮ್ಮ ದೇಹಕ್ಕೆ ಇಂಧನವಿದ್ದAತೆ. ಉತ್ತಮ ಆಹಾರ ಪದ್ಧತಿಯು ಕೇವಲ ಹಸಿವನ್ನು ನೀಗಿಸದೆ, ದೇಹ ಮತ್ತು ಮನಸ್ಸು ಎರಡನ್ನೂ ಸದೃಢವಾಗಿಡಲು ಸಹಾಯ ಮಾಡುತ್ತದೆ. ಆಹಾರವು ನಮ್ಮ ದೇಹಕ್ಕೆ ಶಕ್ತಿ ಮತ್ತು ಪೋಷಣೆ, ಕೋಶಗಳ ಬೆಳವಣಿಗೆ, ರೋಗನಿರೋಧಕ ಶಕ್ತಿ ಹೆಚ್ಚಳ, ದೀರ್ಘಕಾಲದ ಕಾಯಿಲೆಗಳ ತಡೆಗಟ್ಟುವಿಕೆ, ಹೃದಯದ ಆರೋಗ್ಯ, ಮಧುಮೇಹ ಮತ್ತು ಬೊಜ್ಜು ನಿಯಂತ್ರಣ, ಮಾನಸಿಕ ಆರೋಗ್ಯ ಮತ್ತು ಮೆದುಳಿನ ಕಾರ್ಯಕ್ಷಮತೆ, ಮನಸ್ಸಿನ ಉತ್ಸಾಹ, ಏಕಾಗ್ರತೆ ಹೆಚ್ಚಳ, ಹೊಟ್ಟೆಯ ಆರೋಗ್ಯವನ್ನು ಕಾಪಾಡುತ್ತದೆ. ಸದೃಢ ಆರೋಗ್ಯದಲ್ಲಿ ಆಹಾರದ ಪಾತ್ರ ಪ್ರಮುಖವಾಗಿದೆ ಎಂದು ಉಪನ್ಯಾಸಕ ಎಚ್.ಬಿ.ಪಾಟೀಲ್ ಹೇಳಿದರು.
ನಗರದ ಮಹಾದೇವ ನಗರದಲ್ಲಿನ ‘ಭಾಗ್ಯಚಂದ್ರ ಆಹಾರ ಉತ್ಪನ್ನ ಘಟಕ’ದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಭಾನುವಾರ ಜರುಗಿದ ‘ಸದೃಢ ಆರೋಗ್ಯದಲ್ಲಿ ಆಹಾರದ ಮಹತ್ವ’ ಎಂಬ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಉತ್ಪನ್ನ ಘಟಕದ ಮುಖ್ಯಸ್ಥ ಚನ್ನಬಸಪ್ಪ ಗಾರಂಪ್ಪಳ್ಳಿ ಮಾತನಾಡಿ, ನಮ್ಮ ಸಂಸ್ಥೆಯಲ್ಲಿ ಯಾವುದೇ ರೀತಿಯ ಕಲಬೆರಕೆಯಿಲ್ಲದ ಶುದ್ಧವಾದ ಆಹಾರ ಉತ್ಪನ್ನಗಳು ದೊರೆಯುತ್ತವೆ. ಜೋಳದ ರೊಟ್ಟಿ, ಸಜ್ಜೆ ರೊಟ್ಟಿ, ಶೇಂಗಾ ಹಿಂಡಿ, ಕಾರೆಳ್ಳಿನ ಹುಂಡಿ, ಅಗಸಿ ಹಿಂಡೆ, ಬಾನದ ಹಿಟ್ಟು, ನಿಂಬೆಕಾಯಿ ಉಪ್ಪಿನಕಾಯಿ, ಮಾವಿನಕಾಯಿ ಉಪ್ಪಿನಕಾಯಿ ದೊರೆಯುತ್ತವೆ. ಇವುಗಳು ಅತ್ಯಂತ ಗುಣಮಟ್ಟದಾಗಿದ್ದು, ಯೋಗ್ಯ ಬೆಲೆಗೆ ದೊರೆಯುತ್ತವೆ. ನಮಗೆ ಆದಾಯ, ಗಳಿಕೆ ಮಹತ್ವವಲ್ಲ. ಜನರ ಉತ್ತಮ ಆರೋಗ್ಯ ಪ್ರಮುಖವಾಗಿದ್ದು, ಇದು ವಾಣಿಜ್ಯ ದೃಷ್ಟಿಯಿಂದ ನಾವು ನೋಡದೆ, ಸೇವಾ ಮನೋಭಾವನೆಯಿಂದ ಇದನ್ನು ಮಾಡಲಾಗುತ್ತಿದೆ. ಜನರು ಇದರ ಸದುಪಯೋಗವನ್ನು ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಿವರಶಣಯ್ಯ ಮಠಪತಿ, ಈರಣ್ಣ ಕೋಲಾರ, ದಿಲಿಪ ಗುರಾಣಪುರೆ, ಸಿದ್ದರಾಮ ಪುಜಾರಿ, ಅಂಬರೀಶ್ ಪುಜಾರಿ ಸೇರಿದಂತೆ ಇನ್ನಿತರರಿದ್ದರು.