Home ಜಿಲ್ಲೆ ಕಲಬುರಗಿ ಬೈಕ್ ಸವಾರ ಸಾವು

ಬೈಕ್ ಸವಾರ ಸಾವು

ಕಲಬುರಗಿ,ನ.2-ಬೈಕ್ ಸ್ಕಿಡ್ಡಾಗಿ ಬಿದ್ದು ಸವಾರನೊಬ್ಬ ಮೃತಪಟ್ಟಿರುವ ಘಟನೆ ಅಫಜಲಪುರ ರಸ್ತೆಯ ರಾಷ್ಟ್ರೋತ್ತಾನ ಶಾಲೆ ಹತ್ತಿರ ನಡೆದಿದೆ.
ಮೃತರನ್ನು ನಗರದ ಅಂಬೇಡ್ಕರ್ ಆಶ್ರಯ ಕಾಲೋನಿಯ ಅಶೋಕುಮಾರ ಬಂದಿಗೆಪ್ಪ ಮಿಂಚಿನ್ ಎಂದು ಗುರುತಿಸಲಾಗಿದೆ.
ಇವರು ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಎಸ್‍ಡಿಎ ಆಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಕೊಳ್ಳೂರ ಗ್ರಾಮದಿಂದ ಕಲಬುರಗಿ ಕಡೆಗೆ ಬೈಕ್ ಮೇಲೆ ಬರುತ್ತಿದ್ದಾಗ ರಾಷ್ಟ್ರೋತ್ತಾನ ಶಾಲೆ ಹತ್ತಿರ ಬೈಕ್ ಸ್ಕಿಡ್ಡಾಗಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಆಸ್ಪತ್ರೆಗೆ ಕರೆದೊಯ್ದಾಗ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ. ಈ ಸಂಬಂಧ ಅಶೋಕುಮಾರ ಅವರ ಸಹೋದರ ಶರಣಬಸಪ್ಪ ಮಿಂಚಿನ್ ಅವರು ಸಂಚಾರಿ ಪೊಲೀಸ್ ಠಾಣೆ-1ರಲ್ಲಿ ದೂರು ಸಲ್ಲಿಸಿದ್ದಾರೆ. ಪ್ರಕರಣ ದಾಖಲಾಗಿದೆ.