
ಕಲಬುರಗಿ,ನ.2-ಯುವ ಜನತೆ ಶ್ರೇಷ್ಠತೆಯ ಪರಂಪರೆಯನ್ನು ಮೈಗುಡಿಸಿಕೊಂಡು ಕನ್ನಡ ರಾಜ್ಯೋತ್ಸವವನ್ನು ಪ್ರಗತಿಯ ನಿತ್ಯೋತ್ಸವವಾಗಬೇಕೇ ಹೊರತು ಕೇವಲ ಔಪಚಾರಿಕ ಆಚರಣೆಯಾಗದಿರಲ್ಲಿ ಎಂದು ಪ್ರಾಚಾರ್ಯರಾದ ಸುರೇಶ ಹವಲ್ದಾರ ಅವರು ಕರೆನೀಡಿದ್ದಾರೆ.
ಡಾ.ಬಿ.ಜಿ.ಪಾಟೀಲ ಅವರ ನೇತ್ರತ್ವದ ನಗರದ ಪ್ರತಿಷ್ಠಿತ ಚಂದ್ರಕಾಂತ ಪಾಟೀಲ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನಲ್ಲಿಂದು ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕನ್ನಡಾಂಬೆಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಧ್ವಜಾರೋಹಣವನ್ನು ನೆರವೇರಿಸಿ ಅವರು ಮಾತನಾಡಿದರು.
ಕನ್ನಡ ನಾಡಿನಲ್ಲಿ ಹುಟ್ಟಲು ನಾವು ಪುಣ್ಯ ಮಾಡಿರಬೇಕು, ತಪಸ್ಸು ಹೊಂದಿರಬೇಕು. ಈ ನಾಡು ಅತ್ಯಂತ ಶ್ರಿಮಂತ ಪ್ರಾಚೀನ ಶ್ರೇಷ್ಠತೆಯ ಪರಂಪರೆಯನ್ನು ಹೊಂದಿದೆ. ಕನ್ನಡಾಂಬೆ ವೈವಿಧ್ಯಮಯ ಹಾಗು ವಿಶಿಷ್ಠ
ಸಂಸ್ಕøತಿಯಿಂದ ಭರತ ಖಂಡದ ಮುಕುಟಮಣಿಯಾಗಿದ್ದಾಳೆ ಎಂದು ಅವರು ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿನಿಯರಾದ ಕುಂತಾದೇವಿ ಹಾಗೂ ಗೌರಿ ಸಜ್ಜನ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಶ್ವೇತಾ ಹಾಗು ಸಂಗಡಿಗರಿಂದ ನಿತ್ಯೋತ್ಸವದ ಗೀತೆಯನ್ನು ಹಾಡಲಾಯಿತು. ಭಾಗ್ಯಶ್ರೀ ನಿರೂಪಿಸಿದರು, ಅಕ್ಷರ ವಂದಿಸಿದರು. ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗದವರು ಮತ್ತು ವಿದ್ಯಾಥಿಗಳು ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಪಲ್ಗೊಂಡಿದ್ದರು.























