Home ಜಿಲ್ಲೆ ಕಲಬುರಗಿ ಭೈರಾಮಡಗಿಯಲ್ಲಿ ನೂತನ ಶ್ರೀಗಳ ಪಟ್ಟಾಧಿಕಾರ ಮಹೋತ್ಸವ ನೆರವೇರಿಸಿದ ಮುಂಡರಗಿ ಶ್ರೀ

ಭೈರಾಮಡಗಿಯಲ್ಲಿ ನೂತನ ಶ್ರೀಗಳ ಪಟ್ಟಾಧಿಕಾರ ಮಹೋತ್ಸವ ನೆರವೇರಿಸಿದ ಮುಂಡರಗಿ ಶ್ರೀ

ಕಲಬುರಗಿ,ನ.2-ಪೀಠಾಧಿಪತಿಗಳ ಸ್ಥಾನವೆಂದರೆ ಗೌರವದ ಸ್ಥಾನದ ಜತೆಗೆ ತ್ಯಾಗ, ತಾಳ್ಮೆ, ನಿಸ್ವಾರ್ಥತೆ ಮತ್ತು ಜನ ಕಲ್ಯಾಣದ ಜವಾಬ್ದಾರಿಯಾಗಿದೆ ಎಂದು ಮುಂಡರಗಿ ಸಂಸ್ಥಾನ ಮಠದ ಪೂಜ್ಯರಾದ ನಾಡೋಜ ಡಾ. ಅನ್ನಧಾನೀಶ್ವರ ಮಹಾಸ್ವಾಮಿಗಳು ಹೇಳಿದರು.
ಅಫಜಲಪುರ ತಾಲೂಕಿನ ಭೈರಾಮಡಗಿ ಗ್ರಾಮದಲ್ಲಿ ರವಿವಾರ ಮಹಾಂತೇಶ್ವರ ವಿರಕ್ತ ಮಠಕ್ಕೆ ಷಡಕ್ಷರಿ ದೇವರ ನಿರಂಜನ ಚರ ಪಟ್ಟಾಧಿಕಾರಿ ಮಹೋತ್ಸವ ಬ್ರಾಹ್ಮೀ ಮುಹೂರ್ತದಲ್ಲಿ ಸಕಲ ವಿಧಿ ವಿಜ್ಷಾನಗಳ ಮೂಲಕ ನೆರವೆರಿಸಿ ಅದರಲ್ಲೂ ಪ್ರಮುಖವಾಗಿ ಅನುಗ್ರಹ ದೀಕ್ಷೆ ನೆರವೇರಿಸಿ ಮಾತನಾಡಿದರು. ಭಕ್ತರು ಹಾಗೂ ಸ್ವಾಮೀಜಿ ಪರಸ್ಪರ ಗೌರವದಿಂದ ಮುನ್ನೆಡೆದರೆ ಸದೃಢ ಸಮಾಜ ನಿರ್ಮಾಣಕ್ಕೆ ಪೂರಕವಾಗುತ್ತದೆಯಲ್ಲದೇ ಮಠವನ್ನು ಭಕ್ತರು ಹಾಗೂ ಸ್ವಾಮೀಜಿಗಳು ಒಂದಾಗಿ ಮಠ ಅಭಿವೃದ್ಧಿಪಡಿಸಬೇಕು. ಹೀಗಾದಲ್ಲಿ ಸಮಾಜದ ಹಳಿ ಸರಿ ದಾರಿಯಲ್ಲಿ ತೆರಳಲು ಸಾಧ್ಯವಾಗುತ್ತದೆ ಎಂದು ವಿವರಣೆ ನೀಡಿದರು.
ಘಟಪ್ರಭಾ ಗುಬ್ಬಲಗುಡ್ಡಕೆಂಪಯ್ಯ ಸ್ವಾಮಿ ಮಠದ ಡಾ. ಮಲ್ಲಿಕಾರ್ಜುನ ಸ್ವಾಮಿಗಳು ಮಾತನಾಡಿ, ಭಕ್ತರು ಹಾಗೂ ಸ್ವಾಮೀಜಿ ನೀರು ಮೀನು ಇದ್ದ ಹಾಗೆ. ಒಬ್ಬರಿಗೊಬ್ಬರು ಬಿಟ್ಟು ಇರಲಿಕ್ಕಾಗದು, ಷಡಕ್ಷರಿ ದೇವರು ಭೈರಾಮಡಗಿ ಮಠಕ್ಕೆ ಆಸ್ತಿ ಪಾಸ್ತಿ ಯಾವುದೂ ನೋಡಿಲ್ಲ. ಭಕ್ತರ ಮನಸ್ಸು ನೋಡಿ ಬಂದಿದ್ದಾರೆ ಎಂದು ಶ್ಲಾಘಿಸಿದರು.
ಚಿನ್ಮಯಗಿರಿ ಮಹಾಂತೇಶ್ವರ ಮಠದ ಕಿರಿಯ ಪೂಜ್ಯರಾದ ವೀರ ಮಹಾಂತ ಶಿವಾಚಾರ್ಯರು ಮಾತನಾಡಿ, 12 ವರ್ಷಗಳಿಂದ ಮಹಾಂತೇಶ್ವರ ಮಠಕ್ಕೆ ಯಾರೊಬ್ಬರು ಪೀಠಾಧಿಪತಿಗಳಿಲ್ಲದೇ ಹಾಳು ಬಿದ್ದಿತ್ತು. ಆದರೆ ಷಡಕ್ಷರಿ ದೇವರನ್ನು ಪೀಠಾಧಿಪತಿಗಳಾನ್ನಿಸಿಕೊಂಡಿರುವುದು ಭಕ್ತರ ದೃಢ ಸಂಕಲ್ಪವೇ ಕಾರಣ ಎಂದು ಹೇಳಿದರು,
ಎರಡುವರೆ ದಶಕಗಳ ಹಿಂದೆ ರಾಜ್ಯದಲ್ಲಿ 6700 ಮಠಗಳಿದ್ದರೆ ಈಗ 13001400ಕ್ಕೆ ಇಳಿದಿವೆ. ಇದರರ್ಥ ಧಾರ್ಮಿಕ್ಷ ಕ್ಷೇತ್ರದಲ್ಲಿ ದುಡಿಯುವ ಅದರಲ್ಲೂ ಮಠಾಧೀಶರಾಗಲು ಯಾರೂ ಮುಂದೆ ಬರ್ತಾ ಇಲ್ಲ. ಹೀಗಾಗಿ ಮಠಗಳು ಹಾಳಾಗುವುದತ್ತ ಸಾಗಿವೆ ಎಂದರು. ಗೊಡಗೇರಿ ಕಾಶೀನಾಥ ಮಹಾಸ್ವಾಮಿಗಳು ನೆರವೇರಿಸಿ ಆಶೀರ್ವಚನ ನೀಡಿದರು. ಶಾಸಕ ಎಂ. ವೈ. ಪಾಟೀಲ್, ನಾಗೂರ ಮಠದ ಅಲ್ಲಮಪ್ರಭುಲಿಂಗ ಮಹಾಸ್ವಾಮಿಗಳು, ನಿಂಬರ್ಗಾ ಮಠದ ಶಿವಲಿಂಗ ಮಹಾಸ್ವಾಮಿಗಳು ಇತರ ಶ್ರೀಗಳವರು ಮಾತನಾಡಿದರು.
ಕಾರ್ಯಕ್ರಮದ ಕೇಂದ್ರಬಿಂದು ನಿರಂಜನ ಪಟ್ಟಾಧಿಕಾರವು ವಿಧಿ ವಿಜ್ಷಾನಗಳ ಮೂಲಕ ನೇರವೇರಿದ ನಂತರ ಷಡಕ್ಷರಿ ದೇವರು ನಾಮಾಂಕಿತದಿಂದ ವಿಜಯ ಮಹಾಂತ ಸ್ವಾಮಿಗಳ ನಾಮಾಂಕಿತ ಬದಲಾದ ನಂತರ ಮಾತನಾಡಿದ ವಿಜಯ ಮಹಾಂತ ಮಹಾಸ್ವಾಮಿಗಳು ಮಾತನಾಡಿ, ತಾವು ಮಠಕ್ಕೆ ಯಾವುದೇ ತರಹ ಚ್ಯುತಿ ಬಾರದಂತೆ ಶ್ರಮಿಸಲಾಗುವುದು, ಎಲ್ಲರನ್ನು ಸಮಾನಾಗಿ ಕಾಣಲಾಗುವುದು. ಮಕ್ಕಳಲ್ಲಿ ಸಂಸ್ಕಾರ ಬೆಳೆಸುವುದು ಇಂದಿನ ತುರ್ತು ಕೆಲಸವಾಗಬೇಕಿದೆ. ಯಾವುದೇ ಕೆಲಸದಲ್ಲಿ ನಾವು ಎಷ್ಟು ಮಾಡುತ್ತೇಯೋ ಅಷ್ಟೇ ಫಲಿತಾಂಶ ಬರುತ್ತದೆ. ಪ್ರಮುಖವಾಗಿ ನಮ್ಮ ಮನಸ್ಸಿಗನುಗುಣವಾಗಿ ಪ್ರತಿಫಲ ಫಲಿಸುತ್ತದೆ ಎಂದು ಮಾರ್ಮಿಕವಾಗಿ ನುಡಿದರಲ್ಲದೇ ತಾನು ತಂದೆ ತಾಯಿ, ,ಮನೆಯನ್ನು ಬಿಟ್ಟಿ ಬರಲಾಗಿದೆ. ಆದರೆ ತನಗೆ ಈಗ ಇಡೀ ಸಮಾಜವೇ ತಂದೆ ತಾಯಿ ಎಂದು ದು:ಖದಿಂದ ಹೇಳುತ್ತಿರುವಾಗ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮಹಿಳೆಯರ ಕಣ್ಣಲ್ಲೂ ನೀರು ಬಂತು.
ಬಂಗರಗಾ ಚರಂತೇಶ್ವರ ಮಠದ ಶಿವಾನಂದ ಶಿವಾಚಾರ್ಯರು, ಮಕ್ತಂಪುರ ಗದ್ದುಗೆ ಮಠದ ಚರಲಿಂಗ ಮಹಾಸ್ವಾಮಿಗಳು, ರಟಕಲ್ ನೀಲಕಂಠ ಸ್ವಾಮಿಗಳು, ಶಿವಪುರದ ಶಿವಲಿಂಗ ಮಹಾಸ್ವಾಮಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು. ಯೋಗಿರಾಜ ಶಾಸ್ತ್ರೀ ನಿರೂಪಿಸಿದರು. ಪಟ್ಟಾಧಿಕಾರ ನಂತರ ವಿಜಯ ಮಹಾಂತ ಮಹಾಸ್ವಾಮಿಗಳ ಪಲ್ಲಕ್ಕಿ ಮಹೋತ್ಸವ ಗ್ರಾಮದಲ್ಲಿ ಜರುಗಿತು.
………..

ಮುಂಡರಗಿಯ ನಾಡೋಜ ಡಾ. ಅನ್ನಧಾನೀಶ್ವರ ಮಹಾಶಿವಯೋಗಿಗಳವರು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಬಂದಿದ್ದರೂ ಪ್ರಶಸ್ತಿ ಸ್ವೀಕರಿಸುವುದಕ್ಕೂ ಹೋಗದೇ ಪಟ್ಟಾಧಿಕಾರ ಮಹೋತ್ಸವ ನೆರವೇರಿಸಲು ಭೈರಾಮಡಗಿ ಗ್ರಾಮಸ್ಥರಿಗೆ ಸಮಯಾವಕಾಶ ನೀಡಲಾಗಿದೆ ಎಂಬುದನ್ನರಿತು ಭಕ್ತರೇ ತಮಗೆ ಮೇಲು ಎನ್ನುವ ನಿಟ್ಟಿನಲ್ಲಿ ನಿರಂಜನ ಚರಪಟ್ಟಾಧಿಕಾರ ಮಹೋತ್ಸವ ನೆರವೇರಿಸಿದ್ದಾರೆ.
-ಡಾ ಮಲ್ಲಿಕಾರ್ಜುನ ಮಹಾಸ್ವಾಮಿಗಳು, ಘಟಪ್ರಭಾ
…………….
ಭೈರಾಮಡಗಿ ಗ್ರಾಮಸ್ಥರು ತಮ್ಮ ಮೇಲೆ ಭಕ್ತಿಯನ್ನಿಟ್ಟು ಪಟ್ಟಾಧಿಕಾರ ಮಹೋತ್ಸವ ನೆರವೇರಿಸಿದ್ದೀರಿ, ಹಲವು ತೊಂದರೆಗಳು ಎದುರಾದರೂ ಸಮಪರ್ಕವಾಗಿ ನಿಭಾಯಿಸಿದ್ದೀರಿ, ಗ್ರಾಮದಲ್ಲಿ ಸಂಸ್ಕಾರ ಬೆಳೆಸುವ ನಿಟ್ಟಿನಲ್ಲಿ ಪ್ರಮುಖವಾಗಿ ಶ್ರಮಿಸಲಾಗುವುದು.
-ವಿಜಯ ಮಹಾಂತ ಸ್ವಾಮಿಗಳು, ನೂತನ ಪೀಠಾಧಿಪತಿ, ಮಹಾಂತೇಶ್ವರ ವಿರಕ್ತ ಮಠ
……………………………..
ಮಠದ ಅಭಿವೃದ್ಧಿಗೆ ಶಾಸಕರ ಅನುದಾನ
ಮಹಾಂತೇಶ್ವರ ವಿರಕ್ತ ಮಠದ ನಿರಂಜನ ಚರ ಪಟ್ಟಾಧಿಕಾರ ಮಹೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಶಾಸಕ ಎಂ.ವೈ. ಪಾಟೀಲ್, ಮಠದ ಶ್ರೇಯೋಭಿವೃದ್ಧಿಗೆ ಸದಾ ಬದ್ದ ಪ್ರಮುಖವಾಗಿ ಮಠದ ಅಭಿವೃದ್ಧಿಗಾಗಿ ತಮ್ಮ ಶಾಸಕರ ಅನುದಾನದಲ್ಲಿ ಅನುದಾನ ನೀಡಲಾಗುವುದು ಎಂದು ಪ್ರಕಟಿಸಿದರು.
12 ವರ್ಷಗಳ ಕಾಲ ಮಹಾಂತೇಶ್ವರ ಮಠಕ್ಕೆ ಪೀಠಾಧಿಪತಿಗಳು ಇಲ್ಲದೇ ಇರುವುದನ್ನು ಗ್ರಾಮದ ಯುವಕರು ಅತ್ಯಂತ ಚಾಣಚಕ್ಯತೆ ಈಗ ನಿಭಾಯಿಸಿರುವುಚು ನಾಡಿಗೆ ಮಾದರಿಯಾಗಿದೆ. ಇದೇ ತೆರನಾದ ಅಭಿವೃದ್ಧಿ ಕಾರ್ಯಗಳು ಮುಂದುವರೆಯಲಿ ಎಂದರು.