Home ಜಿಲ್ಲೆ ಕಲಬುರಗಿ ರಾಮಾಯಣ ಶ್ರೇಷ್ಠ ಗ್ರಂಥ: ಗುರುರಾಜ ಸುಲಳ್ಳಿ

ರಾಮಾಯಣ ಶ್ರೇಷ್ಠ ಗ್ರಂಥ: ಗುರುರಾಜ ಸುಲಳ್ಳಿ

ಜೇವರಗಿ.ಅ.27: ಆದಿಕವಿ ಮಹರ್ಷಿ ವಾಲ್ಮೀಕಿ ರಚಿಸಿದ ರಾಮಾಯಣವು ಶ್ರೇಷ್ಠ ಗ್ರಂಥವಾಗಿದೆ ಎಂದು ಸಮಾಜದ ಮುಖಂಡ ಬಿಜೆಪಿ ಜಿಲ್ಲಾ ಎಸ್‍ಟಿ ಮೋರ್ಚಾ ಅಧ್ಯಕ್ಷ ಗÀುರುರಾಜ ಸುಲಳ್ಳಿ ಹೇಳಿದರು
ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಸಂದರ್ಭದಲ್ಲಿ ಅವರು ಮಾತನಾಡಿದರು.
ರತ್ನಾಕರ ವ್ಯಕ್ತಿ ತಾನು ಮಾಡಿದ ಪಾಪದ ಕೆಲಸದ ಬಗ್ಗೆ ಮನವರಿಕೆಯಾದ ಕ್ಷಣದಿಂದ ಮಹರ್ಷಿ ಯಾದ ಇದರ ಅರ್ಥ ನಾವು ಮಾಡಿದ ತಪ್ಪು ನಮಗೆ ಗೊತ್ತಿರುತ್ತೆ ಅದನ್ನು ಬಿಟ್ಟಾಕಿ ಸನ್ಮಾರ್ಗದಲ್ಲಿ ನಡೆದು ವಾಲ್ಮೀಕಿಯಂತೆ ನಾವು ಜೀವನ ನಡೆಸಬೇಕೆಂದು ವಾಲ್ಮೀಕಿ ಸಮಾಜದ ಮುಖಂಡ ಪರಮೇಶ್ವರ ನಾಯಕ ಬಿರಾಳ ಹೇಳಿದರು ಈ ಸಂದರ್ಭದಲ್ಲಿ ಜೇವರ್ಗಿ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಅಧ್ಯಕ್ಷ ಮರೆಪ್ಪ ಬೇಗಾರ, ಬಸ್ಸು ದೊರೆ, ತಿಪಣ್ಣ ದೊರೆ, ಮನೋಹರ್ ಟಣಕೇದಾರ ಸೇರಿದಂತ ವಿವಿಧ ಸಮಾಜದ ಮುಖಂಡರು, ಜೇವರ್ಗಿ ತಾಲೂಕಿನ ವಿವಿಧ ಸಂಘಟನೆಯ ಪದಾಧಿಕಾರಿಗಳು ಸೇರಿದಂತೆ ಅನೇಕರು ಉಪಸ್ಥಿತರಿದ್ದರು