Home ಜಿಲ್ಲೆ ಕಲಬುರಗಿ ಎಸ್‍ಬಿಆರ್ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ

ಎಸ್‍ಬಿಆರ್ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ

ಕಲಬುರಗಿ,ಅ.28:ಶಾಲಾ ಶಿಕ್ಷಣ ಇಲಾಖೆ(ಪದವಿ ಪೂರ್ವ)ಯವರು ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಎಸ್ ಬಿ ಆರ್ ಪಿ ಯು ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿ ಬಾಲಕರ ಕಬ್ಬಡ್ಡಿಯಲ್ಲಿ ಪ್ರಥಮ ಸ್ಥಾನ ಹಾಗೂ ಬಾಲಕಿಯರ ವಾಲಿಬಾಲನಲ್ಲಿ ದ್ವಿತೀಯ ಸ್ಥಾನ ಪಡೆಯುವುದರ ಮೂಲಕ ರಾಜ್ಯ ಮಟ್ಟಕ್ಕೆ ಆಯ್ಕೆಗಿರುತ್ತಾರೆ.
ಬಾಲಕರ ಕಬಡ್ಡಿಯಲ್ಲಿ ಸಿದ್ದಲಿಂಗ, ಚಂದ್ರಕಾಂತ, ನಾಗನಾಥ, ವೈಭವ, ಆದರ್ಶ್, ವರುಣಕುಮಾರ.
ಬಾಲಕಿಯರ ವಾಲಿಬಾಲ್ ಪಂದ್ಯದಲ್ಲಿ ರುತುಜಾ, ಸುಶ್ಮಿತಾ, ವಿನುತಾ, ಅಕ್ಷರಾ, ಸಾಕ್ಷಿ, ಪೂಜಾ, ಶ್ರೇಯಾ, ಮತ್ತು ರುಚಿಕಾ ಹಾಗೂ ಅಥ್ಲೆಟಿಕ್ಸ್ ಕ್ರೀಡೆ ತ್ರಿವಿಧ ಜಿಗಿತದಲ್ಲಿ ವರುಣ400 ಮೀಟರ್ ಓಟದಲ್ಲಿ ಪ್ರಮೋದ.
ಎತ್ತರ ಜಿಗಿತದಲ್ಲಿ ಶ್ರೀಕರ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷರಾದ ಪೂಜ್ಯ ಮಾತೋಶ್ರೀ ಡಾ. ದಾಕ್ಷಾಯಿಣಿ ಅವ್ವಾಜಿ, 9ನೇ ಪೀಠಾಧಿಪತಿಗಳಾದ ಪೂಜ್ಯ ಚಿರಂಜೀವಿ ದೊಡ್ಡಪ್ಪ ಅಪ್ಪಾ ಶುಭಹಾರೈಸಿ ಆಶೀರ್ವದಿಸಿದ್ದಾರೆ. ಸಂಸ್ಥೆಯ ಕಾರ್ಯದರ್ಶಿ ಬಸವರಾಜ್ ದೇಶಮುಖ ಅವರು ಹಾಗೂ ಪ್ರಾಚಾರ್ಯರಾದ ಎನ್ ಎಸ್ ದೇವರಕಲ್ ಅವರು ಶುಭಕೋರಿ ಅಭಿನಂದಿಸಿದ್ದಾರೆ. ಕಾಲೇಜಿನ ಮೇಲ್ವಿಚಾರಕರು ಹಾಗೂ ಸಿಬ್ಬಂದಿ ವರ್ಗದವರು ವಿದ್ಯಾರ್ಥಿಗಳ ಸಾಧನೆಯನ್ನು ಕಂಡು ಹರ್ಷ ವ್ಯಕ್ತಪಡಿಸಿದ್ದಾರೆ. ವಿಜೇತ ವಿದ್ಯಾರ್ಥಿಗಳೊಂದಿಗೆ ದೈಹಿಕ ಶಿಕ್ಷಕ ನಾಗರಾಜ ಗುತ್ತೇದಾರ, ರಾಜು ಸದ್ಲಾಪುರ, ಸಿದ್ರಾಮ ಚಿತ್ರದಲ್ಲಿದ್ದಾರೆ.