Home ಜಿಲ್ಲೆ ಕಲಬುರಗಿ ಮನೆಗಳಲ್ಲಿ ಗ್ರಂಥಾಲಯವಿರಲಿ :ನಿರಗುಡಿ

ಮನೆಗಳಲ್ಲಿ ಗ್ರಂಥಾಲಯವಿರಲಿ :ನಿರಗುಡಿ

ಕಲಬುರಗಿ,ಅ.28-ಇಂದಿನ ಡಿಜಿಟಲ್ ಯುಗದಲ್ಲಿ ಪುಸ್ತಕ ಓದುವ ಹವ್ಯಾಸ ಬೆಳೆಸುವುದು ಅತ್ಯಗತ್ಯ. ಪ್ರತಿಯೊಂದು ಮನೆಯಲ್ಲೂ ಗ್ರಂಥಾಲಯ ಸ್ಥಾಪಿಸುವ ಮೂಲಕ ಮಕ್ಕಳಲ್ಲಿ ಓದುವ ಅಭಿರುಚಿ ಬೆಳೆಸಿ, ಜ್ಞಾನವಂತ, ವಿಚಾರವಂತ ಹಾಗೂ ಸಂಸ್ಕಾರಯುತ ಸಮಾಜ ನಿರ್ಮಿಸಲು ಎಲ್ಲರೂ ಕೈಜೋಡಿಸಬೇಕು ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯರಾದ ಬಿ.ಎಚ್.ನಿರಗುಡಿ ಹೇಳಿದರು.
ಕರ್ನಾಟಕ ಸರ್ಕಾರದ ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು ಹಾಗೂ ಜಿಲ್ಲಾ ಜಾಗೃತ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ಕಲಬುರಗಿ ನಗರದ ವಿವೇಕಾನಂದ ನಗರ, ಆಳಂದ ರಸ್ತೆಯಲ್ಲಿರುವ ಸಾಹಿತಿ ಹಾಗೂ ಪ್ರಾಧ್ಯಾಪಕ ಡಾ. ಶರಬಯ್ಯ ಸ್ವಾಮಿ ಅವರ ನಿವಾಸದಲ್ಲಿ ಆಯೋಜಿಸಿದ್ದ ‘ಮನೆಗೊಂದು ಗ್ರಂಥಾಲಯ’ ಅನುಷ್ಠಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಾ ಮನೆಯಲ್ಲಿನ ದೇವರ ಕೋಣೆ ಹಾಗೂ ಮಲಗುವ ಕೋಣೆಗೆ ನೀಡುವಷ್ಟೇ ಮಹತ್ವವನ್ನು ಪುಸ್ತಕ ಕೋಣೆ ಅಥವಾ ಗ್ರಂಥಾಲಯಕ್ಕೂ ನೀಡಬೇಕು. ಪ್ರತ್ಯೇಕ ವಾಚನ ಸ್ಥಳವಿದ್ದರೆ ಕುಟುಂಬದ ಸದಸ್ಯರಲ್ಲಿ ಓದುವ ಹವ್ಯಾಸ ಬೆಳೆಸಲು ಹಾಗೂ ಮಕ್ಕಳಿಗೆ ಉತ್ತಮ ಓದುವ ವಾತಾವರಣ ಕಲ್ಪಿಸಲು ಸಾಧ್ಯ. ಪುಸ್ತಕಗಳು ಜ್ಞಾನ ನೀಡುವುದಷ್ಟೇ ಅಲ್ಲದೆ, ವ್ಯಕ್ತಿಯ ಆಲೋಚನೆ, ನಡವಳಿಕೆ ಮತ್ತು ಜೀವನದ ದೃಷ್ಟಿಕೋನವನ್ನು ರೂಪಿಸುತ್ತವೆ ಎಂದು ನಿರಗುಡಿ ಹೇಳಿದರು.
ಮಕ್ಕಳು ಪಠ್ಯಪುಸ್ತಕಗಳ ಜೊತೆಗೆ ಕಥೆ, ಕಾದಂಬರಿ, ಜೀವನಚರಿತ್ರೆ, ಇತಿಹಾಸ, ವಿಜ್ಞಾನ ಹಾಗೂ ಸಾಹಿತ್ಯ ಕೃತಿಗಳನ್ನು ಓದಬೇಕು. ಇದರಿಂದ ಸೃಜನಶೀಲತೆ, ವಿಮರ್ಶಾತ್ಮಕ ಚಿಂತನೆ, ಭಾಷಾ ಕೌಶಲ್ಯ ಮತ್ತು ಆತ್ಮವಿಶ್ವಾಸ ವೃದ್ಧಿಯಾಗುತ್ತವೆ. ಮನೆಮನೆಗಳಲ್ಲಿ ಗ್ರಂಥಾಲಯ ಸ್ಥಾಪಿಸುವ ಮೂಲಕ ಓದುವ ಸಂಸ್ಕøತಿಯನ್ನು ಬಲಪಡಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಸೇಡಂ ತಾಲೂಕು ಉಪಕಾರಾಗೃಹದ ಹೆಡ್ ವಾರ್ಡರ್ ಶ್ರೀಕಾಂತ ರಂಜೇರಿ ಮಾತನಾಡಿ, ಪುಸ್ತಕ ಓದುವ ಹವ್ಯಾಸವು ಜ್ಞಾನವನ್ನು ವಿಸ್ತರಿಸುವುದರ ಜೊತೆಗೆ ಚಿಂತನಾಶಕ್ತಿ, ವಿವೇಕ ಮತ್ತು ವ್ಯಕ್ತಿತ್ವವನ್ನು ರೂಪಿಸುತ್ತದೆ ಎಂದರು.
ಇಂದಿನ ದಿನಗಳಲ್ಲಿ ಜನರು ಗಂಟೆಗಟ್ಟಲೆ ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಸಮಯ ಕಳೆಯುತ್ತಿದ್ದಾರೆ. ಪ್ರತಿದಿನ ಕನಿಷ್ಠ ಒಂದು ಗಂಟೆಯನ್ನು ಪುಸ್ತಕ ಓದುವುದಕ್ಕೆ ಮೀಸಲಿಟ್ಟರೆ ಕಲ್ಪನಾಶಕ್ತಿ, ವಿಚಾರಶಕ್ತಿ ಹಾಗೂ ಆಳವಾದ ಚಿಂತನೆ ಬೆಳೆಸಿಕೊಳ್ಳಬಹುದು ಹಾಗೂ
ಮಹನೀಯರ ಜೀವನಚರಿತ್ರೆಗಳನ್ನು ಓದುವುದರಿಂದ ಅವರ ಸಾಧನೆ, ಹೋರಾಟ ಮತ್ತು ಪರಿಶ್ರಮದಿಂದ ಸ್ಫೂರ್ತಿ ಪಡೆಯಬಹುದು. ತಂತ್ರಜ್ಞಾನವನ್ನು ಜ್ಞಾನಾರ್ಜನೆಗೆ ಪೂರಕವಾಗಿ ಬಳಸಿಕೊಂಡು, ಮೊಬೈಲ್ ಬಳಕೆಯ ನಡುವೆಯೂ ಪುಸ್ತಕ ಓದುವ ಹವ್ಯಾಸವನ್ನು ನಿರಂತರವಾಗಿ ಮುಂದುವರಿಸಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಕಲಬುರಗಿಯ ಭೂಮಾಪಕ ನಿಜಲಿಂಗಪ್ಪ ನಿಗಡಿ ಮಾತನಾಡಿ, ಮನೆಯಲ್ಲೊಂದು ಗ್ರಂಥಾಲಯ ನಿರ್ಮಿಸುವುದು ಕುಟುಂಬದ ಜ್ಞಾನಸಂಪತ್ತನ್ನು ವೃದ್ಧಿಸುವ ಮಹತ್ವದ ಕಾರ್ಯವಾಗಿದೆ ಎಂದರು.
ಮನೆಗೆ ಕಿಟಕಿಗಳು ಎಷ್ಟು ಮುಖ್ಯವೋ, ವ್ಯಕ್ತಿತ್ವದ ನಿರ್ಮಾಣಕ್ಕೆ ಪುಸ್ತಕಗಳು ಅಷ್ಟೇ ಮುಖ್ಯ. ಕಿಟಕಿಗಳ ಮೂಲಕ ಗಾಳಿ ಮತ್ತು ಬೆಳಕು ಒಳಬರುವಂತೆ, ಪುಸ್ತಕಗಳ ಮೂಲಕ ಮನಸ್ಸಿಗೆ ಜ್ಞಾನ ಹಾಗೂ ಹೊಸ ವಿಚಾರಗಳು ಪ್ರವೇಶಿಸುತ್ತವೆ. ಈ ಅರ್ಥದಲ್ಲಿ ಪುಸ್ತಕಗಳು ಜ್ಞಾನದ ಕಿಟಕಿಗಳಿದ್ದಂತೆ ಎಂದು ವಿವರಿಸಿದರು.
ಜ್ಞಾನವನ್ನು ವೃದ್ಧಿಸುವ, ಉತ್ತಮ ಮಾರ್ಗದರ್ಶನ ನೀಡುವ ಹಾಗೂ ಜೀವನಕ್ಕೆ ಸಕಾರಾತ್ಮಕ ದಿಕ್ಕು ತೋರಿಸುವ ಪುಸ್ತಕಗಳನ್ನು ಆಯ್ಕೆ ಮಾಡಿಕೊಂಡು ಓದಬೇಕು. ಪೆÇೀಷಕರು ಮಕ್ಕಳನ್ನು ಓದಿಗೆ ಪೆÇ್ರೀತ್ಸಾಹಿಸುವುದರ ಜೊತೆಗೆ ತಾವೂ ಓದುವ ಅಭ್ಯಾಸ ಬೆಳೆಸಿಕೊಂಡು ಮಾದರಿಯಾಗಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ಸಾಹಿತಿ ಹಾಗೂ ಪ್ರಾಧ್ಯಾಪಕ ಡಾ. ಶರಬಯ್ಯ ಸ್ವಾಮಿ ಅವರು ಅತಿಥಿಗಳನ್ನು ಸ್ವಾಗತಿಸಿ, ‘ಮನೆಗೊಂದು ಗ್ರಂಥಾಲಯ’ ಕಾರ್ಯಕ್ರಮದ ಉದ್ದೇಶ ಮತ್ತು ಮಹತ್ವದ ಕುರಿತು
ಪುಸ್ತಕಗಳನ್ನು ಸಂಗ್ರಹಿಸಿಡುವುದಷ್ಟೇ ಮುಖ್ಯವಲ್ಲ; ಅವುಗಳನ್ನು ಓದಿ, ಉತ್ತಮ ವಿಚಾರಗಳನ್ನು ಅರ್ಥಮಾಡಿಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಜನ್ಮದಿನ, ವಿವಾಹ ವಾರ್ಷಿಕೋತ್ಸವ ಹಾಗೂ ಇತರ ವಿಶೇಷ ಸಂದರ್ಭಗಳಲ್ಲಿ ಪುಸ್ತಕಗಳನ್ನು ಉಡುಗೊರೆಯಾಗಿ ನೀಡುವ ಸಂಸ್ಕೃತಿಯನ್ನು ಬೆಳೆಸಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಸಾಹಿತಿ ಹಾಗೂ ಸಹಾಯಕ ಪ್ರಾಧ್ಯಾಪಕ ಡಾ. ಶರಬಯ್ಯ ಸ್ವಾಮಿ ಮತ್ತು ಅವರ ಪತ್ನಿ, ಸಹ ಶಿಕ್ಷಕಿ ಸಂಗೀತಾ ಹಿರೇಮಠ್ ಅವರನ್ನು ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ ಅಭಿನಂದನಾ ಪತ್ರ ನೀಡಿ ಸನ್ಮಾನಿಸಲಾಯಿತು.
ಗಣ್ಯರ ಉಪಸ್ಥಿತಿ
ಕಾರ್ಯಕ್ರಮದ ನಿರೂಪಣೆಯನ್ನು ಪ್ರೌಢಶಾಲಾ ಶಿಕ್ಷಕರಾದ ತುಕಾರಾಂ ಗೌಳಿ ಹಾಗೂ ಶಿವಶರಣಪ್ಪ ಉದನೂರು ನಿರ್ವಹಿಸಿದರು.
ಈ ಸಂದರ್ಭದಲ್ಲಿ ಅಣವೀರಪ್ಪ ಯಾಕಾಪುರ, ರಾಜು ನೆಲೋಗಿ, ವಿಶ್ವನಾಥ ಕಂದಗುಳಿ, ರಾಜಶೇಖರ್ ಬಿ. ಜವಳಿ, ಚಂದ್ರಶೇಖರ್ ಕಲಶೆಟ್ಟಿ, ಚಂದ್ರಕಾಂತ ಪೂಜಾರಿ, ವಿವೇಕಾನಂದ ಹಾಗೂ ಮಹಾಂತೇಶ್ ದುತ್ತರಗಾವ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಸ್ಥಳೀಯ ಶ್ರೀ ಸಿದ್ಧಿ ವಿನಾಯಕ ಗೆಳೆಯರ ಬಳಗದ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.