
ಕೆಜಿಎಫ್.ಆ.೧೪: ನಾಳೆ ಸ್ವಾತಂತ್ರ್ಯ ದಿನಾಚರಣೆ ಆಚರಿಸಿ ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ಸಲ್ಲಿಸುವಂತೆ ಪ್ರಧಾನಿ ಮೋದಿ ಕರೆ ನೀಡಿದ ಹಿನ್ನಲೆಯಲ್ಲಿ ಮಾಜಿ ಶಾಸಕ ವೈ.ಸಂಪಂಗಿ ನಗರದ ಮಹಾರಾಜ್ ರಸ್ತೆಯಲ್ಲಿರುವ ಟಿಎಪಿಸಿಎಂಸ್ ಕಚೇರಿ ಮೇಲೆ ರಾಷ್ಟ್ರ ಧ್ವಜ ಹಾರಿಸಿದರು.
ಈ ವೇಳೆ ಮಾತನಾಡಿದ ಮಾಜಿ ಶಾಸಕ ಸಂಪಂಗಿ ರಾಷ್ಟ್ರಕ್ಕೆ ಇರುವುದು ಒಂದೇ ಧ್ವಜ ಅದು ತ್ರಿವರ್ಣ ಧ್ವಜ.ಎಲ್ಲ ಧ್ವಜಗಳಿಗಿಂತ ಶ್ರೇಷ್ಟವಾದ ಧ್ವಜ ರಾಷ್ಟ್ರ ಧ್ವಜ ಅದಕ್ಕಿಂತ ಮಿಗಿಲಾದ ಧ್ವಜ ಮತ್ತೊಂದಿಲ್ಲ ಎಂದು ಹೇಳಿದರು.
ದೇಶ ಭಕ್ತಿಗೆ ನಿವೃತ್ತಿ ಇಲ್ಲ.ಅದು ನಮ್ಮ ಉಸಿರಿನ ಕೊನೆಯ ತನಕ ಇರುತ್ತದೆ.ತಿರಂಗಾ ಯಾತ್ರೆ ದೇಶ ಭಕ್ತಿಯ ಜಾಗೃತಿಗಾಗಿ ಜನ ಜಾಗೃತಿಯ ಸಂಕಲ್ಪದೊಂದಿಗೆ ಮಾಡುತ್ತಿರುವ ಒಂದು ಪ್ರಯತ್ನವೆಂದು ಹೇಳಿದರು.
ಮೋದಿ ಹರ್ ಘರ್ ತಿರಂತ ಎಂದು ಪ್ರತಿ ಮನೆಯಲ್ಲೂ ತ್ರಿವರ್ಣ ದ್ವಜ ಹಾರಿಸುವಂತೆ ಕರೆ ನೀಡಿರುವ ಹಿನ್ನೆಲೆಯಲ್ಲಿ ನಮ್ಮ ತಾಲ್ಲೂಕಿನಲ್ಲಿರುವ ಎಲ್ಲಾ ನಾಗರೀಕರು ತಮ್ಮ ಮನೆಗಳ ಮೇಲೆ ತಿವರ್ಣ ದ್ವಜವನ್ನು ಹಾರಿಸಿದ್ದಾರೆ ಎಂದು ಹೇಳಿದರು.
ಈ ವೇಳೆ ನಗರ ಬಿಜೆಪಿ ಅಧ್ಯಕ್ಷ ಸುರೇಶ್, ಬಿಎಲ್‌ಎ ೧ ಬಾಬಿಸುರೇಶ್, ರವಿಕುಮಾರ್, ನವಕುಮಾರ್, ಹೇಮಂತ್,ವಿಜಯ್ ರಾಜಕುಮಾರ್ ಹಾಗೂ ಇತರರು ಹಾಜರಿದ್ದರು.































