
ನವಲಗುಂದ,ಸೆ.೨೦: ನವಲಗುಂದ ತಾಲ್ಲೂಕ ಪ್ರಾಥಮಿಕ ಶಾಲಾ ಶಿಕ್ಷಕ ಶಿಕ್ಷಕಿಯರ ಸಹಕಾರ ಪತ್ತಿನ ಸಂಘದ ಸನ್ ೨೦೨೫-೨೬ ನೇ ಸಾಲಿನ ೧೦೨ ನೇ ವಾರ್ಷಿಕ ಸರ್ವಸಾಧಾರಣ ಸಭೆಯು ಸಂಘದ ಅಧ್ಯಕ್ಷರಾದ ಶ್ರೀನಿವಾಸ ಅಮಾತೆಣ್ಣವರ ಅಧ್ಯಕ್ಷತೆಯಲ್ಲಿ ಜರುಗಿತು.
ಈ ವೇಳೆ ಮಾತನಾಡಿದ ಅವರು ಶತಮಾನ ಕಂಡ ಶಿಕ್ಷಕರ ಪತ್ತಿನ ಸಂಘವು ಶಿಕ್ಷಕರ ಆರ್ಥಿಕ ಅಗತ್ಯತೆಗಳಿಗೆ ಸ್ಪಂದಿಸುತ್ತಾ ಹಣಕಾಸಿನ ಶಿಸ್ತನ್ನು ಕಾಯ್ದುಕೊಂಡು, ಉತ್ತಮ ಸಹಕಾರಿ ಸಂಘವಾಗಿ ನಿರಂತರ ಪ್ರಗತಿಯನ್ನು ಹೊಂದುತ್ತಿದೆ. ಈ ದಿಸೆಯಲ್ಲಿ ಎಲ್ಲ ಸದಸ್ಯರ ಸಹಕಾರ ಮತ್ತು ಜವಾಬ್ದಾರಿ ಅತೀ ಅಗತ್ಯ ಎಂದರು.
ಇದೆ ವೇಳೆ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ನಿವೃತ್ತ ಶಿಕ್ಷಕರಿಗೆ ಹಾಗೂ ತಾಲ್ಲೂಕು ಮತ್ತು ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕöÈತ ರನ್ನು ಸನ್ಮಾನಿಸಲಾಯಿತು.
ಎಸ್.ಎಫ್.ನೀರಲಗಿ, ಪಿ.ಕೆ.ಹಿರೇಗೌಡ್ರ, ಎಂ.ಎನ್.ವಗ್ಗರ, ಎನ್.ಎನ್.ಹಾಲಿಗೇರಿ, ಎನ್.ಎಸ್.ತಾಳಿಕೋಟಿಮಠ, ಎಂ.ಎ.ಹುಬ್ಬಳ್ಳಿ, ವೀರಣ್ಣ ಮಡಿವಾಳರ, ಸುನಿತಾ ಮಾಸ್ತಿ, ಎಂ.ಬಿ.ಇಟಗಿ, ಶರಣಪ್ಪ ಕುರಿ, ಬಿ.ಎಂ.ಯಲಿಗಾರ, ಸಂಘದ ಉಪಾಧ್ಯಕ್ಷ ಸುರೇಶ ಭಜಂತ್ರಿ, ನಿರ್ದೇಶಕರಾದ ವಿ.ಡಿ.ರಂಗಣ್ಣವರ, ಜಿ.ವಾಯ್.ಪಡಸುಣಗಿ, ವೈ.ಎಚ್.ಮಣಕವಾಡ, ಜಿ.ವಿ.ಹೊಳೆಯಣ್ಣವರ, ಎಲ್.ಎಂ.ಗಡ್ಡಿ, ಎಸ್. ಬಿ.ಅಂಗಡಿ, ಆರ್.ಬಿ.ಹಳ್ಳಿಕೇರಿ, ಪಿ.ಸಿ.ಸೂರಪ್ಪನವರ, ಎನ್.ವೈ.ಕಳಸಾಪೂರ, ಡಿ.ಡಿ.ಇನಾಮತಿ, ಎಚ್.ಎಂ.ನಾಯ್ಕರ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು. ಹನಮಂತಗೌಡ ಚನ್ನಪ್ಪಗೌಡ್ರ ನಿರೂಪಿಸಿದರು. ವೆಂಕಟೇಶ ಭಜಂತ್ರಿ ವಂದಿಸಿದರು.





























