
ಲಕ್ಷೆ÷್ಮÃಶ್ವರ,ಸೆ೨೦: ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಲಕ್ಷೆ÷್ಮÃಶ್ವರ ತಾಲೂಕನ್ನು ಬರ ಪೀಡಿತ ಎಂದು ಸಾರುವ ಮೂಲಕ ರೈತರ ಸಂಕಷ್ಟಗಳಿಗೆ ನೋವಿಗೆ ಸ್ಪಂದಿಸಿದ್ದಾರೆ ಎಂದು ಸರ್ಕಾರದ ನಿರ್ಧಾರವನ್ನು ಕರ್ನಾಟಕ ರೈತ ಹಕ್ಕುಗಳ ಸಮಿತಿ ಸದಸ್ಯರು ಸ್ವಾಗತಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಮುಂಗಾರು ಹಂಗಾಮಿನ ಬಹುತೇಕ ಎಲ್ಲಾ ಬೆಳೆಗಳು ೯೦ರಷ್ಟು ಹಾನಿಗೀಡ್ ಆಗಿದ್ದು ರೈತರು ನಷ್ಟ ಅನುಭವಿಸುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ರೈತರ ಪರಿಸ್ಥಿತಿಯನ್ನು ಕಣ್ಣಾರೆ ಕಂಡು ಬರಪೀಡಿತ ಪ್ರದೇಶ ಎಂದು ಘೋಷಿಸುವ ಮೂಲಕ ರೈತರಲ್ಲಿ ಆಶಾಭಾವನೆ ಮೂಡಿಸಿದ್ದಾರೆ. ಸರ್ಕಾರ ವೈಜ್ಞಾನಿಕವಾಗಿ ಸಮೀಕ್ಷೆ ಮಾಡಿ ರೈತರ ಎಲ್ಲಾ ಬೆಳೆಗಳಿಗೆ ಸೂಕ್ತ ಪರಿಹಾರ ನೀಡಬೇಕು ಮತ್ತು ಜನರಿಗೆ ಉದ್ಯೋಗ ಕಲ್ಪಿಸಿ ಕೊಡುವ ನಿಟ್ಟಿನಲ್ಲಿ ಕೂಡಲೇ ಯೋಜನೆಯನ್ನು ಜಾರಿಗೊಳಿಸಬೇಕು ಎಂದು ಮುಖಂಡರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಪದ್ಮರಾಜ ಪಾಟೀಲ್, ಸೋಮಣ್ಣ ಬೆಟಿಗೇರಿ, ದೀಪಕ್ ಲಮಾಣಿ, ಜಿ ಆರ್ ಕೊಪ್ಪದ, ಮಂಜಪ್ಪ ಶರಶೂರಿ, ಶರಣು ಗೋಡಿ, ಮುದುಕಪ್ಪ ಗಡೆದ, ಎಲ್ಲಪ್ಪ ಹಂಚಿ, ಎಲ್ಲಪ್ಪ ತಳವಾರ, ಹೆಚ್ ಎಸ್ ಲಕ್ಷೆ÷್ಮÃಶ್ವರ ಇದ್ದರು.





























