Home ಮುಖಪುಟ ಸುದ್ದಿ ಅವಧಿಗೆ ಮುನ್ನ ಮುಂಗಾರು ಆಗಮನ

ಅವಧಿಗೆ ಮುನ್ನ ಮುಂಗಾರು ಆಗಮನ


ನವದೆಹಲಿ, ಏ.೨೪: ದೇಶದಾದ್ಯಂತ ಏಪ್ರಿಲ್ ಅಂತ್ಯದ ವೇಳೆಗೆ ಉಷ್ಣತೆ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ, ಮುಂಗಾರು ಮಳೆ ಮುಂಚಿತವಾಗಿ ಆಗಮಿಸುವ ಸಾಧ್ಯತೆಗಳಿವೆ ಎಂಬ ಭರವಸೆಯ ಸುದ್ದಿ ಲಭ್ಯವಾಗಿದೆ. ಐಎಂಡಿ ಮಾಹಿತಿ ಪ್ರಕಾರ ಉತ್ತರ, ಮಧ್ಯ ಹಾಗೂ ಪೂರ್ವ ಭಾರತದ ಹಲವೆಡೆ ತಾಪಮಾನ ೪೩-೪೪ ಡಿಗ್ರಿ ಸೆಲ್ಸಿಯಸ್‌ವರೆಗೆ ಏರಿಕೆಯಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ.


ಇದರ ನಡುವೆಯೇ ಇಸಿಎಂಡಬ್ಲ್ಯುಎಫ್ ನೀಡಿರುವ ತಾಜಾ ಮುನ್ಸೂಚನೆ ಪ್ರಕಾರ, ದಕ್ಷಿಣ-ಶ್ಚಿಮ ಮುಂಗಾರು ಈ ವರ್ಷ ಸಾಮಾನ್ಯ ಸಮಯಕ್ಕಿಂತ ಮುಂಚಿತವಾಗಿ ಪ್ರಾರಂಭವಾಗುವ ಸಾಧ್ಯತೆ ಇದೆ.


ಈ ಮುಂಗಾರು ಮೇ ತಿಂಗಳ ಕೊನೆಯ ಭಾಗದಲ್ಲೇ ದಕ್ಷಿಣ ಭಾರತಕ್ಕೆ ಪ್ರವೇಶಿಸಬಹುದು ಎಂದು ಅಂದಾಜಿಸಲಾಗಿದೆ. ಇದರಿಂದ ಬಿಸಿಲಿನಿಂದ ಕಂಗೆಟ್ಟ ಜನತೆಗೆ ತಾತ್ಕಾಲಿಕ ಪರಿಹಾರ ಸಿಗುವ ನಿರೀಕ್ಷೆ ಇದೆ.


ಇದೇ ವೇಳೆ, ಕೆಲವು ರಾಜ್ಯಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಮಳೆಯಾಗುವ ಸಾಧ್ಯತೆಗಳಿದ್ದು, ಕೃಷಿ ಚಟುವಟಿಕೆಗಳಿಗೆ ಸಹಕಾರಿಯಾಗಬಹುದು ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.ಜನರು ಬಿಸಿಗಾಳಿಯಿಂದ ಜಾಗರೂಕರಾಗಿರಬೇಕು ಹಾಗೂ ಹವಾಮಾನ ಇಲಾಖೆಯ ಸೂಚನೆಗಳನ್ನು ಪಾಲಿಸಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

*ದೇಶದ ಹಲವೆಡೆ ಉಷ್ಣತೆ ೪೩-೪೪s ಸೆಲ್ಸಿಯಸ್ ತಲುಪಿದೆ
*ಮುಂಗಾರು ಮುಂಚಿತ ಆಗಮನ ಸಾಧ್ಯತೆ
*ಮೇ ಅಂತ್ಯದೊಳಗೆ ದಕ್ಷಿಣ ಭಾರತ ಪ್ರವೇಶ ಸಾಧ್ಯತೆ
*ಕೆಲ ರಾಜ್ಯಗಳಲ್ಲಿ ಸರಾಸರಿಗಿಂತ ಹೆಚ್ಚು ಮಳೆಯ ನಿರೀಕ್ಷೆ