Home ಜಿಲ್ಲೆ ರಸ್ತೆ ಅಗಲೀಕರಣ ಮರಕಡಿಯುವುದನ್ನು ತಡೆದ ಅರಣ್ಯ ಸಿಬ್ಬಂದಿ ಮೇಲೆ ಹಲ್ಲೆ

ರಸ್ತೆ ಅಗಲೀಕರಣ ಮರಕಡಿಯುವುದನ್ನು ತಡೆದ ಅರಣ್ಯ ಸಿಬ್ಬಂದಿ ಮೇಲೆ ಹಲ್ಲೆ

(ಸಂಜೆವಾಣಿ ಪ್ರತಿನಿಧಿಯಿಂದ)

ಬಳ್ಳಾರಿ, ಏ.24: ಬೇಸಿಗೆಯ ಬಿಸಿಲಿಗೆ ತತ್ತರಿಸಿದ ಬಳ್ಳಾರಿಯಲ್ಲಿ ಇದೀಗ ಮರಗಳ ಮಾರಣ ಹೋಮ ಮಾಡಲಾಗ್ತಿದೆ.

ಮರ ಬೆಳೆಸಬೇಕಾದ ಸಂದರ್ಭದಲ್ಲಿ ಮರಗಳನ್ನು ಕಡಿಯಲಾಗ್ತಿದೆ. ರಸ್ತೆ ಅಗಲೀಕರಣದ ನೆಪದಲ್ಲಿ ನೂರಾರು ಮರಗಳಿಗೆ ಕೊಡಲಿ ಪೆಟ್ಟು ನೀಡುತ್ತಿದೆ.

ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಿಂದ ಕೊಳಗಲ್ ಗ್ರಾಮಕ್ಕೆ ಹೋಗುವ ರಸ್ತೆ ಅಗಲೀಕರಣ ಮಾಡಲಾಗ್ತಿದೆ.

ಇದಕ್ಕೆ ಅಡ್ಡವಾಗಿದೆ ಎಂದು 234 ಮರಗಳನ್ನು ಗುರುತಿಸಿ ಕಡಿಯಲು ಗುತ್ತಿಗೆದಾರರು ಮುಂದಾಗಿದ್ದಾರೆ. ನಿನ್ನೆ ತಡರಾತ್ರಿ ನಾಲ್ಕಾರು ಮರಗಳನ್ನು ಕಡಿದಿದ್ದಾರೆ.

ಈ ವೇಳೆ ಅರಣ್ಯ ಇಲಾಖೆಯ ಸಿಬ್ಬಂದಿ ಅಡ್ಡಿ ಪಡಿಸಿದಾಗ ಸಿಬ್ಬಂದಿ ಮೇಲೆ ಹಲ್ಲೆ ಮಾಡಲಾಗಿದೆ. ಮರಗಳ ಕಡಿಯುತ್ತಿರೋ ವಿಡಿಯೋ ಮಾಡಿದ ಹಿನ್ನೆಲೆ ಮೊಬೈಲ್ ಒಡೆದು ಹಾಕಿದ್ದಾರೆ.

ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ದೌರ್ಜನ್ಯವೆಸಗಿ ಮರಕಡಿಯಲು ಮುಂದಾಗಿರೋದು. ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಆಕ್ರೋಶ ವ್ಯಕ್ತವಾಗಿದೆ. ಇನ್ನೂ ಮರ ಕಡಿಯಲು ಅರಣ್ಯ ಇಲಾಖೆಯ ಅನುಮತಿ ನಿರಾಕರಿಸಲಾಗಿದೆ.